ಕೊಲೊಂಬೊ: ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ (Asia Cup 2023) ಫೈನಲ್ ಪಂದ್ಯದಲ್ಲಿ ಕಳೆದ ಬಾರಿt ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ತಂಡವನ್ನು ಮೊಹಮ್ಮದ್ ಸಿರಾಜ್ ಏಕಾಂಗಿಯಾಗಿ ವಿನಾಶ ಮಾಡಿದರು. ಖಂಡಾಂತರ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ಆತಿಥೇಯ ಶ್ರೀಲಂಕಾ ತಂಡವನ್ನು ನಿರಾಯಸವಾಗಿ ಮಣಿಸಿದರು. ಈ ಪಂದ್ಯದಲ್ಲಿ ಸಿರಾಜ್ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದರೆ, ಶ್ರೀಲಂಕಾ ಕೇವಲ 15.2 ಓವರ್ಗಳಲ್ಲಿ ಆಲೌಟ್ ಆಗಿ ಕಳಪೆ ದಾಖಲೆ ಮಾಡಿತು.
ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ ಪಂದ್ಯದ ಮೊದಲ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾ ಮುನ್ನಡೆ ಸಾಧಿಸಿದರು. ಅದರ ನಂತರ ಎಲ್ಲವೂ ಸಿರಾಜ್ ಅವರ ಅಬ್ಬರದ ಆಟವಾಯಿತು. ಅವರು ತಮ್ಮ ಸ್ಪೆಲ್ನ ಎರಡನೇ ಓವರ್ನಲ್ಲಿ ನಾಲ್ಕು ವಿಕೆಟ್ಗಳನ್ನು ಉರುಳಿಸಿದರು. ಅಲ್ಲಿ ಅವರು ಒಂದು ಹಂತದಲ್ಲಿ ಹ್ಯಾಟ್ರಿಕ್ ಪಡೆಯುವ ಅವಕಾಶವನ್ನು ಕಳೆದುಕೊಂಡರು. ಈ ವೇಳೆ ಒಂದೇ ಓವರ್ನಲ್ಲಿ 4 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸಿರಾಜ್ ಬೆಂಕಿ ಚೆಂಡು
ಸಿರಾಜ್ ತಮ್ಮ ಮುಂದಿನ ಓವರ್ನಲ್ಲಿ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಸಾಧನೆಯನ್ನು ಪೂರ್ಣಗೊಳಿಸಿದರು, ಇದು ಏಕದಿನ ಕ್ರಿಕೆಟ್ನಲ್ಲಿ ಶ್ರೀಲಂಕಾದ ದಂತಕಥೆ ಚಮಿಂಡಾ ವಾಸ್ ಅವರೊಂದಿಗೆ ಜಂಟಿ ಸಾಧನೆಯಾಗಿದೆ. ನಂತರ 12ನೇ ಓವರ್ನಲ್ಲಿ ಕುಸಾಲ್ ಮೆಂಡಿಸ್ ಅವರನ್ನು ಔಟ್ ಮಾಡುವ ಮೂಲಕ 6 ವಿಕೆಟ್ ಪೂರೈಸಿದರು. ಬಲಗೈ ವೇಗಿ ಅಂತಿಮವಾಗಿ 21 ರನ್ಗಳಿಗೆ 6 ವಿಕೆಟ್ ಪಡೆದರು, ಇದು ಏಷ್ಯಾ ಕಪ್ (ಒಡಿಐ) ಪಂದ್ಯದಲ್ಲಿ ಭಾರತೀಯ ಬೌಲರ್ ಗಳಿಸಿದ ಅತ್ಯುತ್ತಮ ಸಾಧನೆಯಾಗಿದೆ. 2008 ರಲ್ಲಿ ಕರಾಚಿಯಲ್ಲಿ ಭಾರತದ ವಿರುದ್ಧ ಅಜಂತಾ ಮೆಂಡಿಸ್ 13 ಕ್ಕೆ 6 ವಿಕೆಟ್ ಪಡೆದಿದ್ದರು. 1990ರಲ್ಲಿ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ವಕಾರ್ ಯೂನಿಸ್ ಖಾನ್ 26ಕ್ಕೆ 6 ವಿಕೆಟ್ ಕಬಳಿಸಿದ್ದರು
ಏಷ್ಯಾ ಕಪ್ನಲ್ಲಿ ಕನಿಷ್ಠ ಸ್ಕೋರ್
ಸಿರಾಜ್ ಔಟಾದ ನಂತರ ಹಾರ್ದಿಕ್ ಪಾಂಡ್ಯ ಉಳಿದ ಮೂರು ವಿಕೆಟ್ಗಳನ್ನು ಪಡೆದರು. ಹೀಗಾಗಿ ಶ್ರೀಲಂಕಾ ತಂಡ ಕೇವಲ 50 ರನ್ಗಳಿಗೆ ಆಲೌಟ್ ಆಯಿತು. 2000ನೇ ಇಸವಿಯಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ 87 ರನ್ ಗಳಿಸಿದ್ದು, ಏಷ್ಯಾ ಕಪ್ನಲ್ಲಿ ತಂಡವೊಂದರ ಕನಿಷ್ಠ ಸ್ಕೋರ್ ಆಗಿತ್ತು. ಆ ಕಳಪೆ ದಾಖಲೆಯನ್ನು ಲಂಕಾ ತಂಡ ಮುಗಿದಿದೆ.
ಇದನ್ನೂ ಓದಿ : India vs Sri Lanka Final: ಸಿರಾಜ್ ಘಾತಕ ಬೌಲಿಂಗ್ ದಾಳಿಗೆ ಲಾಗ ಹಾಕಿದ ಲಂಕಾ ಆಟಗಾರರು
2012ರಲ್ಲಿ ಪಾರ್ಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 43 ರನ್ ಗಳಿಸಿದ ಬಳಿಕ ಏಕದಿನ ಕ್ರಿಕೆಟ್ನಲ್ಲಿ ದಾಖಲಾದ ಎರಡನೇ ಕನಿಷ್ಠ ಸ್ಕೋರ್ ಇದಾಗಿದೆ. 2000ನೇ ಇಸವಿಯಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧ 54 ರನ್ ಗಳಿಸಿದ್ದ ಭಾರತದ ದಾಖಲೆಯನ್ನು ಲಂಕಾ ಮುರಿದಿದೆ. ಏಕದಿನ ಕ್ರಿಕೆಟ್ನ ಫೈನಲ್ ಪಂದ್ಯವೊಂದರದಲ್ಲಿ ದಾಖಲಾದ ಅತಿ ಕಡಿಮೆ ಸ್ಕೋರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2018ರಲ್ಲಿ ಏಷ್ಯಾ ಕಪ್ನಲ್ಲಿ ಕೊನೆಯ ಬಾರಿ ಗೆದ್ದಿದ್ದ ಭಾರತ, ಐದು ವರ್ಷಗಳಲ್ಲಿ ಬಹುರಾಷ್ಟ್ರೀಯ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ.