Asia Cup 2023 : ಏಕ ದಿನ ಕ್ರಿಕೆಟ್​ ಇತಿಹಾಸದಲ್ಲಿಯೇ ಕಳಪೆ ಸಾಧನೆ ಮಾಡಿದ ಶ್ರೀಲಂಕಾ ತಂಡ Vistara News

ಕ್ರಿಕೆಟ್

Asia Cup 2023 : ಏಕ ದಿನ ಕ್ರಿಕೆಟ್​ ಇತಿಹಾಸದಲ್ಲಿಯೇ ಕಳಪೆ ಸಾಧನೆ ಮಾಡಿದ ಶ್ರೀಲಂಕಾ ತಂಡ

ಏಷ್ಯಾ ಕಪ್​ ಫೈನಲ್​ನಲ್ಲಿ (Asia Cup 2023)
ಮೊಹಮ್ಮದ್​ ಸಿರಾಜ್ 16 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದರೆ, ಲಂಕಾ ಕೇವಲ 15.2 ಓವರ್​ಗಳಲ್ಲಿ 50 ರನ್​ಗಳಿಗೆ ಆಲೌಟ್ ಆಯಿತು.

VISTARANEWS.COM


on

Mohammed Siraj
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಲೊಂಬೊ: ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್​ (Asia Cup 2023) ಫೈನಲ್​ ಪಂದ್ಯದಲ್ಲಿ ಕಳೆದ ಬಾರಿt ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ತಂಡವನ್ನು ಮೊಹಮ್ಮದ್ ಸಿರಾಜ್ ಏಕಾಂಗಿಯಾಗಿ ವಿನಾಶ ಮಾಡಿದರು. ಖಂಡಾಂತರ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ಆತಿಥೇಯ ಶ್ರೀಲಂಕಾ ತಂಡವನ್ನು ನಿರಾಯಸವಾಗಿ ಮಣಿಸಿದರು. ಈ ಪಂದ್ಯದಲ್ಲಿ ಸಿರಾಜ್ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದರೆ, ಶ್ರೀಲಂಕಾ ಕೇವಲ 15.2 ಓವರ್​ಗಳಲ್ಲಿ ಆಲೌಟ್ ಆಗಿ ಕಳಪೆ ದಾಖಲೆ ಮಾಡಿತು.

ಶ್ರೀಲಂಕಾ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ ನಂತರ ಪಂದ್ಯದ ಮೊದಲ ಓವರ್​ನಲ್ಲಿ ಜಸ್ಪ್ರೀತ್ ಬುಮ್ರಾ ಮುನ್ನಡೆ ಸಾಧಿಸಿದರು. ಅದರ ನಂತರ ಎಲ್ಲವೂ ಸಿರಾಜ್ ಅವರ ಅಬ್ಬರದ ಆಟವಾಯಿತು. ಅವರು ತಮ್ಮ ಸ್ಪೆಲ್​ನ ಎರಡನೇ ಓವರ್​ನಲ್ಲಿ ನಾಲ್ಕು ವಿಕೆಟ್​​ಗಳನ್ನು ಉರುಳಿಸಿದರು. ಅಲ್ಲಿ ಅವರು ಒಂದು ಹಂತದಲ್ಲಿ ಹ್ಯಾಟ್ರಿಕ್ ಪಡೆಯುವ ಅವಕಾಶವನ್ನು ಕಳೆದುಕೊಂಡರು. ಈ ವೇಳೆ ಒಂದೇ ಓವರ್​ನಲ್ಲಿ 4 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಿರಾಜ್​ ಬೆಂಕಿ ಚೆಂಡು

ಸಿರಾಜ್ ತಮ್ಮ ಮುಂದಿನ ಓವರ್​ನಲ್ಲಿ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಸಾಧನೆಯನ್ನು ಪೂರ್ಣಗೊಳಿಸಿದರು, ಇದು ಏಕದಿನ ಕ್ರಿಕೆಟ್​ನಲ್ಲಿ ಶ್ರೀಲಂಕಾದ ದಂತಕಥೆ ಚಮಿಂಡಾ ವಾಸ್ ಅವರೊಂದಿಗೆ ಜಂಟಿ ಸಾಧನೆಯಾಗಿದೆ. ನಂತರ 12ನೇ ಓವರ್​ನಲ್ಲಿ ಕುಸಾಲ್ ಮೆಂಡಿಸ್ ಅವರನ್ನು ಔಟ್ ಮಾಡುವ ಮೂಲಕ 6 ವಿಕೆಟ್​ ಪೂರೈಸಿದರು. ಬಲಗೈ ವೇಗಿ ಅಂತಿಮವಾಗಿ 21 ರನ್​ಗಳಿಗೆ 6 ವಿಕೆಟ್ ಪಡೆದರು, ಇದು ಏಷ್ಯಾ ಕಪ್ (ಒಡಿಐ) ಪಂದ್ಯದಲ್ಲಿ ಭಾರತೀಯ ಬೌಲರ್ ಗಳಿಸಿದ ಅತ್ಯುತ್ತಮ ಸಾಧನೆಯಾಗಿದೆ. 2008 ರಲ್ಲಿ ಕರಾಚಿಯಲ್ಲಿ ಭಾರತದ ವಿರುದ್ಧ ಅಜಂತಾ ಮೆಂಡಿಸ್ 13 ಕ್ಕೆ 6 ವಿಕೆಟ್ ಪಡೆದಿದ್ದರು. 1990ರಲ್ಲಿ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ವಕಾರ್ ಯೂನಿಸ್ ಖಾನ್ 26ಕ್ಕೆ 6 ವಿಕೆಟ್ ಕಬಳಿಸಿದ್ದರು

ಏಷ್ಯಾ ಕಪ್​ನಲ್ಲಿ ಕನಿಷ್ಠ ಸ್ಕೋರ್​

ಸಿರಾಜ್ ಔಟಾದ ನಂತರ ಹಾರ್ದಿಕ್ ಪಾಂಡ್ಯ ಉಳಿದ ಮೂರು ವಿಕೆಟ್​ಗಳನ್ನು ಪಡೆದರು. ಹೀಗಾಗಿ ಶ್ರೀಲಂಕಾ ತಂಡ ಕೇವಲ 50 ರನ್​ಗಳಿಗೆ ಆಲೌಟ್ ಆಯಿತು. 2000ನೇ ಇಸವಿಯಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ 87 ರನ್ ಗಳಿಸಿದ್ದು, ಏಷ್ಯಾ ಕಪ್​ನಲ್ಲಿ ತಂಡವೊಂದರ ಕನಿಷ್ಠ ಸ್ಕೋರ್ ಆಗಿತ್ತು. ಆ ಕಳಪೆ ದಾಖಲೆಯನ್ನು ಲಂಕಾ ತಂಡ ಮುಗಿದಿದೆ.

ಇದನ್ನೂ ಓದಿ : India vs Sri Lanka Final: ಸಿರಾಜ್​ ಘಾತಕ ಬೌಲಿಂಗ್​ ದಾಳಿಗೆ ಲಾಗ ಹಾಕಿದ ಲಂಕಾ ಆಟಗಾರರು

2012ರಲ್ಲಿ ಪಾರ್ಲ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 43 ರನ್ ಗಳಿಸಿದ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ದಾಖಲಾದ ಎರಡನೇ ಕನಿಷ್ಠ ಸ್ಕೋರ್ ಇದಾಗಿದೆ. 2000ನೇ ಇಸವಿಯಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧ 54 ರನ್ ಗಳಿಸಿದ್ದ ಭಾರತದ ದಾಖಲೆಯನ್ನು ಲಂಕಾ ಮುರಿದಿದೆ. ಏಕದಿನ ಕ್ರಿಕೆಟ್​​ನ ಫೈನಲ್​ ಪಂದ್ಯವೊಂದರದಲ್ಲಿ ದಾಖಲಾದ ಅತಿ ಕಡಿಮೆ ಸ್ಕೋರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2018ರಲ್ಲಿ ಏಷ್ಯಾ ಕಪ್​ನಲ್ಲಿ ಕೊನೆಯ ಬಾರಿ ಗೆದ್ದಿದ್ದ ಭಾರತ, ಐದು ವರ್ಷಗಳಲ್ಲಿ ಬಹುರಾಷ್ಟ್ರೀಯ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

ENGW vs INDW; ಅಂತಿಮ ಪಂದ್ಯದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟ ಭಾರತ ಮಹಿಳಾ ಕ್ರಿಕೆಟ್​ ತಂಡ

ಭಾರತ(ENGW vs INDW) ಮಹಿಳಾ ತಂಡ ಇಂಗ್ಲೆಂಡ್​ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 5 ವಿಕೆಟ್​ಗಳ ಜಯ ಸಾಧಿಸಿದೆ.

VISTARANEWS.COM


on

Saika Ishaque ran through the England middle order
Koo

ಮುಂಬಯಿ: ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಹೀತರ್‌ ನೈಟ್‌ ಪಡೆಯ ಕನಸು ಭಗ್ನವಾಗಿದ್ದು, ಅಂತಿಮ ಪಂದ್ಯದಲ್ಲಿ ಭಾರತ(ENGW vs INDW) ಮಹಿಳಾ ತಂಡ 5 ವಿಕೆಟ್​ಗಳ ಜಯ ಸಾಧಿಸಿದೆ. 126 ರನ್​ಗಳ ಗುರಿ ಬೆನ್ನಟ್ಟಿದ ಹರ್ಮನ್​ಪ್ರೀತ್​ ಕೌರ್​ ಪಡೆ 5 ವಿಕೆಟ್​ ನಷ್ಟಕ್ಕೆ 127 ರನ್​ ಬಾರಿಸಿ ಇನ್ನೂ ಒಂದು ಓವರ್​ ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿತು.

ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಡ್ಯಾಶಿಂಗ್​ ಆಟಗಾರ್ತಿ ಶಫಾಲಿ ವರ್ಮ ಅವರು 6 ರನ್​ಗೆ ವಿಕೆಟ್​ ಕೈಚೆಲ್ಲಿದರು. ಆದರೆ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ತಾಳ್ಮೆಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಜತೆಗೆ ಕಳೆದ 2 ಪಂದ್ಯಗಳಲ್ಲಿ ಅನುಭವಿಸಿದ್ದ ಕಳಪೆ ಬ್ಯಾಟಿಂಗ್​ ಫಾರ್ಮ್​ನ್ನು ಈ ಪಂದ್ಯದಲ್ಲಿ ಸರಿಪಡಿಸಿಕೊಂಡರು.

ಸ್ಮೃತಿ ಅವರಿಗೆ ಮತ್ತೊಂದು ತುದಿಯಲ್ಲಿ ನಂಬುಗೆಯ ಬ್ಯಾಟರ್​ ಜೆಮಿಮಾ ರೋಡ್ರಿಗಸ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ 2ನೇ ವಿಕಟ್​ಗೆ 57 ರನ್​ಗಳನ್ನು ಒಟ್ಟುಗೋಡಿಸಿ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿತು. ಜೆಮಿಮಾ ಅವರು 33 ಎಸೆತಗಳನ್ನು ಎದುರಿಸಿ 4 ಬೌಂಡರಿ ನೆರವಿನಿಂದ 29 ರನ್​ ಬಾರಿಸಿದರು. ಮಂಧಾನ 48 ಸೆತಗಳಿಂದ 48 ರನ್​ ಬಾರಿಸಿ ಔಟಾಗುವ ಮೂಲಕ ಕೇವಲ 2 ರನ್​ ಅಂತರದಲ್ಲಿ ಅರ್ಧಶತಕದಿಂದ ವಂಚಿತರಾದರು.

ಇದನ್ನು ಓದಿ IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

ಹಠಾತ್​ ಕುಸಿತ

ಉತ್ತಮ ಸ್ಥಿತಿಯಲ್ಲಿದ್ದ ಭಾರತ ತಂಡ ಸ್ಮೃತಿ ಮತ್ತು ಜೆಮಿಮಾ ವಿಕೆಟ್​ ಪತನದ ಬಳಿಕ ಹಠಾತ್​ ಕುಸಿತ ಕಂಡಿತು. ಬಳಿಕ ಬಂದ ದೀಪ್ತಿ ಶರ್ಮ(12) ಮತ್ತು ರಿಚಾ ಘೋಷ್​(2) ವಿಕೆಟ್​ ಕೈಚೆಲ್ಲಿದರು. ಈ ವೇಳೆ ಭಾರತ ಗಲುವಿಗೆ ಬಾಲ್​ ಟು ಬಾಲ್​ ರನ್​ ಕೂಡ ಬೇಕಿತ್ತು. ಒಂದು ಕ್ಷಣ ಆತಂತ ಸೃಷ್ಟಿಯಾಯಿತು. ಆದರೆ ನಾಯಕ ಹರ್ಮನ್​ಪ್ರೀತ್​ ಕೌರ್​(6) ಮತ್ತು ಅಮನ್ಜೋತ್ ಕೌರ್(10) ಅಜೇಯ ಬ್ಯಾಟಿಂಗ್​ ನಡೆಸಿ ತಂಡವನ್ನು ಗಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​ ಪರ ನಾಯಕ ಹೀತರ್‌ ನೈಟ್‌ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಅವರು 42 ಎಸೆತಗಳಿಂದ ತಲಾ ಮೂರು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 52 ರನ್​ ಬಾರಿಸಿದರು. ವಿಕೆಟ್​ ಕೀಪರ್​ ಆ್ಯಮಿ ಜೋನ್ಸ್​(25) ರನ್​ ಗಳಿಸಿದರು. ಉಭಯ ಆಟಗಾರ್ತಿಯರನ್ನು ಹೊರತುಪಡಿಸಿ ಉಳಿದ ಎಲ್ಲ ಆಟಗಾರ್ತಿಯರು ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾದರು.

ಮಿಂಚಿದ ಕನ್ನಡತಿ

ಕಳೆದ ಎರಡು ಪಂದ್ಯಗಳಲ್ಲಿ ದುಬಾರಿ ಬೌಲಿಂಗ್​ ನಡೆಸಿದ್ದ ಕರ್ನಾಟಕದ 21 ವರ್ಷದ ಆಲ್​ರೌಂಡರ್​ ಆಟಗಾರ್ತಿ ಶ್ರೇಯಾಂಕಾ ಪಾಟೀಲ್​ ಈ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಗಮನಸಳೆದರು. 4 ಓವರ್​ ಎಸೆದು ಕೇವಲ 19 ರನ್​ ವೆಚ್ಚದಲ್ಲಿ ಪ್ರಮುಖ 3 ವಿಕೆಟ್​ ಕಿತ್ತರು. ಅವರ ಈ ಸಾಧನಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.

Continue Reading

ಕ್ರಿಕೆಟ್

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

ಇಂದು ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ20 ಪಂದ್ಯ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ.

VISTARANEWS.COM


on

Fans brave the dampness, waiting for India's tour of South Africa to kick off
Koo

ಡಬಾರ್ನ್: ಭಾರತ(IND vs SA) ಮತ್ತು ದಕ್ಷಿಣ ಆಫ್ರಿಕಾ(South Africa vs India, 1st T20) ಪಂದ್ಯವನ್ನು ವೀಕ್ಷಿಸಲು ಭಾರಿ ನಿರೀಕ್ಷೆಯಲ್ಲಿದ್ದ ಕ್ರಿಕೆಟ್​ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇಂದು ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ.

ಟಾಸ್​ ಆರಂಭಕ್ಕೂ ಮುನ್ನವೇ ಮಳೆ ಅಡ್ಡಿ ಪಡಿಸಿತು. ಪಂದ್ಯ ಆರಂಭಕ್ಕೆ ಸುಮಾರು 2 ಗಂಟೆಗಳ ಕಾಲ ಕಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಳೆ ಬಿಡುವ ಸೂಚನೆ ಕಂಡು ಬಾರದ ಕಾರಣ ಅಂತಿಮವಾಗಿ ಪಂದ್ಯದ ಅಂಪೈರ್​ಗಳು ಪಂದ್ಯವನ್ನು ರದ್ದು ಎಂದು ಘೋಷಿಸಿದರು. ಇತ್ತಂಡಗಳ ನಡುವಣ ದ್ವಿತೀಯ ಪಂದ್ಯ ಡಿ.12ರಂದು ನಡೆಯಲಿದೆ.

ಕವರ್​ನಿಂದ ಮುಚ್ಚಿದ ಮೈದಾನ

ಡರ್ಬಾನ್​ನ ಕಿಂಗ್ಸ್‌ಮೀಡ್ ಮೈದಾನವನ್ನು ಕವರ್​ನಿಂದ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಆಟಗಾರರೆಲ್ಲ ಡ್ರೆಸಿಂಗ್​ ರೂಮ್​ನಲ್ಲಿ ಮಳೆ ಯಾವಾಗ ಬಿಡುತ್ತದೆ ಎಂದು ಕಾದು ಕುಳಿತಿದ್ದರು. ಆದರೆ ಇದಕ್ಕೆ ಮಳೆ ಅನುವು ಮಾಡಿಕೊಡಲಿಲ್ಲ. ಆರಂಭದಲ್ಲಿ ಇದು ಐಸಿಸಿ ಅಡಿಯಲ್ಲಿ ನಡೆಯುವ ಟೂರ್ನಿಯಾದ ಕಾರಣ ನಿಗದಿತ ಸಮಯಕ್ಕೆ ಮಳೆ ನಿಂತು ಆಟ ಪ್ರಾರಂಭವಾಗದ ಕಾರಣ ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು.

ಇದನ್ನೂ ಓದಿ Gautam Gambhir : ಮೋದಿಯನ್ನು ಪನೌತಿ ಎಂದವರಿಗೆ ತಿರುಗೇಟು ಕೊಟ್ಟ ಗೌತಮ್​ ಗಂಭೀರ್​

ಸಮಯ ಬದಲಿಸಿದ್ದ ಬಿಸಿಸಿಐ

ಸರಣಿಯ ಮೂಲ ವೇಳಾಪಟ್ಟಿಯ ಪ್ರಕಾರ ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 9.30 ನಿಗದಿಯಾಗಿತ್ತು. ಪಂದ್ಯ ಮುಗಿಯುವಾಗ ಮಧ್ಯರಾತ್ರಿಯಾಗುದರಿಂದ ಭಾರತೀಯ ಕ್ರಿಕಟ್​ ಅಭಿಮಾನಿಗಳಿಗ ಇದು ತೊಂದರಯಾಗುತ್ತದೆ ಎನ್ನುವ ನಿಟ್ಟಿನಲ್ಲಿ ಬಿಸಿಸಿಐ ಪಂದ್ಯವನ್ನು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭಗೊಳ್ಳುವಂತೆ ಮಾಡಿತ್ತು. ಆದರೆ ಮಳೆ ಯಾವುದಕ್ಕೂ ಅನುವು ಮಾಡಿಕೊಡಲಿಲ್ಲ. ಒಂದೊಮ್ಮೆ ಪಂದ್ಯ ಮೂಲಕ ವೇಳಾಪಟ್ಟಿಯ ಪ್ರಕಾರ ನಡೆಯುತ್ತಿದ್ದರೆ ಮಳೆ ನಿಂತು ಪಂದ್ಯ ನಡೆಯುವ ಸಾಧ್ಯತೆ ಇತ್ತು.

ಟಿ20 ಮುಖಾಮುಖಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 24 ಟಿ20 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಭಾರತವು 13 ಪಂದ್ಯಗಳನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ, ‘ಮೆನ್ ಇನ್ ಬ್ಲೂ’ ಏಳು ಪಂದ್ಯಗಳನ್ನು ಆಡಿ ಐದರಲ್ಲಿ ಗೆದ್ದಿದ್ದರೆ, ಆತಿಥೇಯರು ಎರಡರಲ್ಲಿ ಗೆದ್ದಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಮೊದಲ ಬಾರಿ ಆಡಿದ ತಂಡವೆಂದರೆ ಅದು ಭಾರತ ಮತ್ತು ದಕ್ಷಿಣ ಆಫ್ರಿಕಾ. 2007ರಲ್ಲಿ ನಡೆದ ಚೊಚ್ಚಲ ಅಂತಾರಾಷ್ಟೀಯ ಟಿ20 ಪಂದ್ಯದಲ್ಲಿ ವೀರೇಂದ್ರ ಸೆಹವಾಗ್​ ಸಾರಥ್ಯದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 82 ರನ್​ಗಳಿಂದ ಮಣಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಭಾರತ 6 ವಿಕೆಟ್​ಗೆ 169 ರನ್​ ಬಾರಿಸಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 87 ರನ್​ಗೆ ಸರ್ವಪತನ ಕಂಡಿತ್ತು.

Continue Reading

ಕ್ರಿಕೆಟ್

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

ಪಾಕಿಸ್ತಾನ ಕ್ರಿಕೆಟ್​ ಕಂಡ ಅತ್ಯುತ್ತಮ ಬ್ಯಾಟರ್​ ಆಗುವ ಎಲ್ಲ ಸಾಮರ್ಥ್ಯ ಬಾಬರ್​ಗೆ ಇದೆ ಎಂದು ಗೌತಮ್​ ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Gautam Gambhir
Koo

ನವದೆಹಲಿ: ಸದಾ ಭಾರತೀಯ ಆಟಗಾರರ ಮೇಲೆ ಕಿಡಿ ಕಾರಿ ದೇಶ ಪ್ರೇಮದ ಪಾಠ ಮಾಡುವ ಗೌತಮ್​ ಗಂಭೀರ್(Gautam Gambhir), ಪಾಕ್ಕಿಸ್ತಾನ ಆಟಗಾರ ಬಾಬರ್​ ಅಜಂ(Babar Azam) ಅವರ ಕ್ರಿಕೆಟ್​ ಭವಿಷ್ಯ ನುಡಿದಿದ್ದಾರೆ. ಪಾಕಿಸ್ತಾನ ಕ್ರಿಕೆಟ್​ ಕಂಡ ಅತ್ಯುತ್ತಮ ಬ್ಯಾಟರ್​ ಆಗುವ ಎಲ್ಲ ಸಾಮರ್ಥ್ಯ ಬಾಬರ್​ಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಬರ್​ ಕಮ್​ಬ್ಯಾಕ್​ ಗ್ಯಾರಂಟಿ

ಬಾಬರ್​ ಅಜಂ ಅವರು ನಾಯಕತ್ವ ವಹಿಸಿಕೊಳ್ಳುವ ಮುನ್ನ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದರು. ನಾಯಕತ್ವ ನೀಡಿದ ಬಳಿಕ ಅವರ ಮೇಲೆ ಹೆಚ್ಚಿನ ಒತ್ತಡವನ್ನು ಪಾಕ್​ ಕ್ರಿಕೆಟ್​ ಮಂಡಳಿ ಹಾಕಿದ ಪರಿಣಾಮ ಅವರಿಗೆ ಬ್ಯಾಟಿಂಗ್​ ಕಡೆ ಗಮನ ನೀಡಲು ಸಾಧ್ಯವಾಗಲಿಲ್ಲ. ಈಗ ಅವರು ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಜತೆಗೆ ಚಿಂತೆ ಮುಕ್ತರಾಗಿದ್ದಾರೆ. ಇನ್ನು ಅವರ ಅಸಲಿ ಆಟ ಪ್ರಾರಂಭವಾಗುತ್ತದೆ. ಮುಂದಿನ 10 ವರ್ಷಗಳ ಕಾಲ ಕ್ರಿಕೆಟ್​ನಲ್ಲಿ ಅವರ ಹೆಸರೇ ರಾರಾಜಿಸಲಿದೆ ಎಂದು ಗಂಭೀರ್​ ಹೇಳಿದ್ದಾರೆ.

ಇದನ್ನೂ ಓದಿ Gautam Gambhir : ಮೋದಿಯನ್ನು ಪನೌತಿ ಎಂದವರಿಗೆ ತಿರುಗೇಟು ಕೊಟ್ಟ ಗೌತಮ್​ ಗಂಭೀರ್​

ಸ್ಪೋರ್ಟ್ಸ್‌ಕೀಡಾ ಶೋನಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ವಾಸಿಮ್ ಅಕ್ರಮ್ ಜತೆ ಮಾತನಾಡುವ ವೇಳೆ ಗಂಭೀರ್​ ಈ ವಿಚಾರವನ್ನು ಹೇಳಿದ್ದಾರೆ. “29 ವರ್ಷದ ಬಾಬರ್ ಇನ್ನು ಮೂರು ಮಾದರಿಯ ಕ್ರಿಕೆಟ್​ನಲ್ಲಿ ಸುನಾಮಿ ಸೃಷ್ಟಿಸಲಿದ್ದಾರೆ. ಜತೆಗೆ ಅನೇಕ ಆಟಗಾರರ ದಾಖಲೆಯನ್ನು ಮುರಿಯಲಿದ್ದಾರೆ. ಬಾಬರ್ ನೈಜ ಸಾಮರ್ಥ್ಯ ಇನ್ನು ಮುಂದೆ ತಿಳಿಯಲಿದೆ. ಆತ ಪಾಕಿಸ್ತಾನ ಕ್ರಿಕೆಟ್​ ಇದುವರೆಗೆ ಕಾಣದಂತಹ ಬ್ಯಾಟರ್ ಆಗಿ ಇತಿಹಾಸದ ಪುಟ ಸೇರಲಿದ್ದಾರೆ. ಮುಂದಿನ 10 ವರ್ಷಗಳ ಕಾಲ ಕ್ರಿಕೆಟ್​ ಲೋಕವನ್ನು ಆಳಲಿದ್ದಾರೆ” ಎಂದು ಹೇಳಿದರು.

ದೇಶ ವಿರೋಧಿ

ಏಷ್ಯಾ ಕಪ್​ನಲ್ಲಿ ವಿರಾಟ್​ ಕೊಹ್ಲಿ ಸೇರಿ ಕೆಲ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರ ಜತೆ ಮಾತನಾಡಿದ ವಿಚಾರವಾಗಿ ಗಂಭೀರ್​ ಕಿಡಿ ಕಾರಿದ್ದರು. ಬದ್ಧ ಎದುರಾಳಿ ಪಾಕ್​ ಆಟಗಾರರಲ್ಲಿ ಮಾತನಾಡುವುದು ಸರಿಯಲ್ಲ. ಇದೇನಿದ್ದರು ಮೈದಾನದ ಹೊರಗಡೆ ಇರಲಿ ಎಂದು ದೇಶ ಪ್ರೇಮದ ಪಾಠ ಮಾಡಿದ್ದ ಗಂಭೀರ್​ ತಾನು ಮಾತ್ರ ಪಾಕ್​ ಆಟಗಾರರನ್ನು ಒಲೈಕೆ ಮಾಡುತ್ತಿದ್ದಾರೆ. ಈ ಕ್ರಮವನ್ನು ನೆಟ್ಟಿಗರು ಪ್ರಶ್ನಿಸಿದ್ದು ಗಂಭೀರ್​ ಅವರನ್ನು ದೇಶ ವಿರೋಧಿ ಎಂದಿದ್ದಾರೆ.

2007ರ ಟಿ20 ವಿಶ್ವಕಪ್​ ಫೈನಲ್​ ಮತ್ತು 2011 ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಅಮೋಘ ಪ್ರದರ್ಶನ ತೋರಿದ ಗಂಭೀರ್​ ಭಾರತ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಪದೇಪದೆ ಭಾರತೀಯ ಆಟಗಾರ ಮತ್ತು ತಂಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ತಮ್ಮ ವರ್ಚಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಶ್ರೀಶಾಂತ್​ ಜತೆ ಕಿರಿಕ್​

ಕೆಲ ದಿನಗಳ ಹಿಂದಷ್ಟೇ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಪಂದ್ಯದಲ್ಲಿ ಮೈದಾನದಲ್ಲೇ ಗಂಭೀರ್​ ಅವರು ಎಸ್​.ಶ್ರೀಶಾಂತ್(S. Sreesanth)​ ಜತೆ ಕಿರಿಕ್ ಮಾಡಿಕೊಂಡಿದ್ದರು. ಶ್ರೀಶಾಂತ್ ಅವರನ್ನು ಫಿಕ್ಸರ್​ ಎಂದು ಪದೇಪದೆ ಹೇಳುವ ಮೂಲಕ ಹೀಯಾಳಿಸಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.

Continue Reading

ಕ್ರಿಕೆಟ್

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

1.30 ಕೋಟಿಗೆ ಯು.ಪಿ ವಾರಿಯರ್ಸ್‌ ಪಾಲಾಗಿದ ಕರ್ನಾಟಕದ ಯುವ ಬ್ಯಾಟರ್‌ ವೃಂದಾ ದಿನೇಶ್(Vrinda Dinesh) ಅವರು ತಮಗೆ ಸಿಕ್ಕ ಈ ಮೊತ್ತದಲ್ಲಿ ತಂದೆ ಮತ್ತು ತಾಯಿಗೆ ಕಾರನ್ನು ಉಡುಗೊರೆಯಾಗಿ ನೀಡಲು ಬಯಸಿದ್ದಾರೆ.

VISTARANEWS.COM


on

WPL 2024 Auction
Koo

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ 2024ರ(WPL 2024 Auction) ಮಿನಿ ಹರಾಜಿನಲ್ಲಿ 1.30 ಕೋಟಿಗೆ ಯು.ಪಿ ವಾರಿಯರ್ಸ್‌ ಪಾಲಾಗಿದ ಕರ್ನಾಟಕದ ಯುವ ಬ್ಯಾಟರ್‌ ವೃಂದಾ ದಿನೇಶ್(Vrinda Dinesh) ಅವರು ತಮಗೆ ಸಿಕ್ಕ ಈ ಮೊತ್ತದಲ್ಲಿ ತಂದೆ ಮತ್ತು ತಾಯಿಗೆ ಉಡುಗೊರೆಯೊಂದನ್ನು ನೀಡಲು ಬಯಸಿದ್ದಾರೆ.

ಬಿಡ್ಡಿಂಗ್​ ಬಳಿಕ ಮಾತನಾಡಿದ ವೃಂದಾ ದಿನೇಶ್, ‘ಇನ್ನೂ ರಾಷ್ಟ್ರೀಯ ತಂಡದ ಪರ ಆಡದ ನನಗೆ ಇಷ್ಟೊಂದು ಬೇಡಿಕೆಯ ಮೊತ್ತ ಸಿಗಬಹುದೆಂದು ಕನಸಿನಲ್ಲಿಯೂ ಎನಿಸಿಕೊಂಡಿರಲಿಲ್ಲ. ಆದರೆ ನಾನು ಯಾವುದಾದರು ಒಂದು ತಂಡಕ್ಕೆ ಸೇಲ್​ ಆಗಬಹುದೆಂದು ನಂಬಿಕೆ ಇತ್ತು. ನನಗೆ ಸಿಕ್ಕ ಈ ಮೊತ್ತದಲ್ಲಿ ನನ್ನ ಎಲ್ಲ ಏಳು- ಬೀಳಿನಲ್ಲಿ ಜತೆಗಿದ್ದ ನನ್ನ ತಂದೆ ಮತ್ತು ತಾಯಿಗೆ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ” ಎಂದು ವೃಂದಾ ದಿನೇಶ್ ಹೇಳಿದ್ದಾರೆ.

ತಾಯಿಗೆ ವಿಡಿಯೊ ಕಾಲ್​ ಮಾಡಿಲ್ಲ

ಬೆಂಗಳೂರಿನವರದಾದ ವೃಂದಾ ಅವರು ಬಿಡ್ಡಿಂಗ್​ನಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್​ ಆದ ವಿಚಾರವನ್ನು ತಮ್ಮ ತಾಯಿಗೆ ವಿಡಿಯೊ ಕಾಲ್​ ಮೂಲಕ ಹೇಳಲಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣನ್ನೂ ಕೂಡ ಅವರು ತಿಳಿಸಿದ್ದಾರೆ. “ನಾನು ಬಿಡ್ಡಿಂಗ್​ನಲ್ಲಿ ಕೋಟಿ ಮೊತ್ತಕ್ಕೆ ಸೇಲ್ ಆದೆ ಎಂಬ ವಿಚಾರವನ್ನು ನನ್ನ ತಾಯಿಗೆ ಹೇಳುವಾಗ ಅವರಲ್ಲಿ ಭಾವನೆ ತಡೆಯಲಾಗದೇ ಕಣ್ಣುತುಂಬಿ ಬರಬಹುದು ಎಂದೆನಿಸಿತು. ಅವರಿಗೆ ಭಾವನೆ ತಡೆಯಲಾಗದು ಎಂಬ ಒಂದೇ ಕಾರಣದಿಂದ ವಿಡಿಯೊ ಕಾಲ್‌ ಮಾಡಲಿಲ್ಲ. ಕೇವಲ ಮೊಬೈಲ್ ಕರೆಯಷ್ಟೇ ಮಾಡಿದೆ” ಎಂದು ವೃಂದಾ ಹೇಳಿದರು. ಈ ಎಲ್ಲ ವಿಚಾರವನ್ನು ಅವರು ಯುಪಿ ವಾರಿಯರ್ಸ್ ಏರ್ಪಡಿಸಿದ್ದ ಸಂವಾದದಲ್ಲಿ ಹೇಳಿಕೊಂಡರು.

1000 ವ್ಯಾಟ್‌ ನಗುವಿನ ಮೌಲ್ಯ

‘ಎಲ್ಲ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ತ್ಯಾಗ ಮಾಡಿರುತ್ತಾರೆ. ಮಕ್ಕಳು ಇದನ್ನು ಸಾಧಿಸಿದಾಗ ಅವರ ಮೊಗದಲ್ಲಿ ಮೂಡುವ 1000 ವ್ಯಾಟ್‌ ನಗುವಿನ ಮೌಲ್ಯ ನೋಡುವುದೇ ಒಂದು ಸೌಭಾಗ್ಯ. ನನ್ನ ಸಾಧನೆಯನ್ನು ಕಂಡು ನನ್ನ ಪೋಷಕರಿಗೆ ತುಂಬಾ ಖುಷಿಯಾಗಿದೆ. ಅವರು ಕಂಡಿದ್ದ ಕನಸಿನ ಕಾರನ್ನು ನಾನು ಉಡುಗೊರೆಯಾಗಿ ನೀಡುತ್ತೇನೆ. ಜತೆಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿಗಾಗಿ ಶ್ರಮ ಪಡುತ್ತೇನೆ” ಎಂದರು.

ವೃಂದಾ ದಿನೇಸ್​ ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿ. ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ ಕರ್ನಾಟಕದ ತಂಡವು ಫೈನಲ್ ತಲುಪುವಲ್ಲಿ ವೃಂದಾ ಪ್ರಮುಖ ಪಾತ್ರ ವಹಿಸಿದ್ದರು. 11 ಇನ್ನಿಂಗ್ಸ್‌ ಗಳಲ್ಲಿ 47.70 ರ ಸರಾಸರಿಯಲ್ಲಿ 477 ರನ್ ಗಳಿಸಿದ್ದರು. ವೃಂದಾ ಇತ್ತೀಚೆಗಷ್ಟೇ ಭಾರತ ‘ಎ’ ತಂಡವನ್ನು ಪ್ರತಿನಿಧಿಸಿದ್ದರು. ಆರಂಭಿಕ ಹಂತದಲ್ಲಿ ಕನ್ನಡತಿ ವೃಂದಾ ದಿನೇಶ್ ಅವರು ಡಬ್ಲ್ಯುಪಿಎಲ್​ನಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್​ ಆದ ಅನ್​ಕ್ಯಾಪ್ಡ್​ ಪ್ಲಯರ್​ ಎನ್ನುವ ಕೀರ್ತಿಗೆ ಪಾತ್ರವಾದರೂ ಈ ಸಂತಸ ಹಚ್ಚು ಕಾಲ ಉಳಿಯಲಿಲ್ಲ. ಕಶ್ವಿ ಗೌತಮ್ ಅವರು ಬರೋಬ್ಬರಿ 2 ಕೋಟಿ ರೂ. ಪಡೆದು ಈ ದಾಖಲೆಯನ್ನು ತಮ್ಮ ಹಸರಿಗೆ ಬರೆದರು.

Continue Reading
Advertisement
Nagamurthy Swamy
ಕರ್ನಾಟಕ7 mins ago

Ayodhya Ram Mandir: ರಾಮಮಂದಿರ ನಿರ್ಮಾಣಕ್ಕೆ ತೆರಳಿದ ಗದಗದ ಯುವ ಶಿಲ್ಪಿ

Saika Ishaque ran through the England middle order
ಕ್ರಿಕೆಟ್21 mins ago

ENGW vs INDW; ಅಂತಿಮ ಪಂದ್ಯದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟ ಭಾರತ ಮಹಿಳಾ ಕ್ರಿಕೆಟ್​ ತಂಡ

CLAT Result 2024 announced
ದೇಶ22 mins ago

CLAT Result 2024: ಕಾನೂನು ಪ್ರವೇಶ ಪರೀಕ್ಷೆ ಸಿಎಲ್ಎಟಿ ರಿಸಲ್ಟ್ ಪ್ರಕಟ

girl students fall ill
ಕರ್ನಾಟಕ57 mins ago

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

Fans brave the dampness, waiting for India's tour of South Africa to kick off
ಕ್ರಿಕೆಟ್1 hour ago

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

Gautam Gambhir
ಕ್ರಿಕೆಟ್1 hour ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ2 hours ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ2 hours ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

WPL 2024 Auction
ಕ್ರಿಕೆಟ್3 hours ago

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

Naveen Ammembala
ದಕ್ಷಿಣ ಕನ್ನಡ3 hours ago

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ7 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ10 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ18 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌