Site icon Vistara News

INDvsSL ODI | ಮೊದಲ ಏಕ ದಿನ ಪಂದ್ಯ; ಟಾಸ್​ ಗೆದ್ದ ಶ್ರೀಲಂಕಾ ತಂಡದಿಂದ ಫೀಲ್ಡಿಂಗ್​ ಆಯ್ಕೆ, ಭಾರತಕ್ಕೆ ಮೊದಲು ಬ್ಯಾಟಿಂಗ್​​

INDvsSL ODI1toss

ಗುವಾಹಟಿ : ಏಕ ದಿನ ಸರಣಿಯ (INDvsSL ODI) ಮೊದಲ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ತಂಡದ ನಾಯಕ ದಸುನ್​ ಶನಕ ಟಾಸ್​ ಗೆದ್ದು, ಮೊದಲು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಭಾರತ ತಂಡ ಮೊದಲು ಬ್ಯಾಟ್ ಮಾಡಬೇಕಾಗಿದೆ. ಟಿ20 ಸರಣಿಯನ್ನು ವಶಪಡಿಸಿಕೊಂಡಿರುವ ವಿಶ್ವಾಸದಲ್ಲಿರುವ ಭಾರತ ತಂಡ ಈ ಸರಣಿಯನ್ನೂ ಕೈವಶ ಮಾಡುವ ನಿಟ್ಟಿನಲ್ಲಿ ಕಣಕ್ಕೆ ಇಳಿಯಲಿದೆ.

ಗುವಾಹಟಿಯ ಬರ್ಸಾಪಾರಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಈ ಹಣಾಹಣಿ ನಡೆಯುತ್ತಿದೆ. ಬ್ಯಾಟಿಂಗ್​ಗೆ ಪೂರಕವಾಗಿರುವ ಈ ಪಿಚ್​ನಲ್ಲಿ ಇತ್ತಂಡಗಳೂ ದೊಡ್ಡ ಮೊತ್ತದ ರನ್​ ಪೇರಿಸಿ ಗೆಲುವು ದಾಖಲಿಸುವ ಯೋಜನೆ ಹಾಕಿಕೊಂಡಿದೆ.

ಟಾಸ್​ ಗೆದ್ದಿರುವ ಲಂಕಾ ತಂಡದ ನಾಯಕ ಮಾತನಾಡಿ, ಸಂಜೆಯ ವೇಳೆಗೆ ಇಬ್ಬನಿ ಪರಿಣಾಮ ಉಂಟು ಮಾಡಲಿದೆ. ಹೀಗಾಗಿ ರನ್​ ಚೇಸ್​ ಮಾಡುವುದು ಸುಲಭ. ಅದಕ್ಕಾಗಿ ಟಾಸ್​ ಗೆದ್ದರೂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಮುಂಬರುವ ಏಷ್ಯಾ ಕಪ್​ ಹಾಗೂ ಏಕ ದಿನ ವಿಶ್ವ ಕಪ್​ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಇದು ವರ್ಷದ ಮೊದಲ ಏಕ ದಿನ ಸರಣಿಯಾಗಿದ್ದು, ಇಲ್ಲಿಂದಲೇ ಗೆಲುವಿನ ಅಭಿಯಾನ ಮಾಡುವುದು ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​ ಉದ್ದೇಶವಾಗಿದೆ. ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮ ಅವರು ತಂಡಕ್ಕೆ ಮರಳಿರುವುದರಿಂದ ತಂಡದ ವಿಶ್ವಾಸ ಹೆಚ್ಚಾಗಿದೆ.

ಬಾಂಗ್ಲಾ ವಿರುದ್ಧ ದ್ವಿ ಶತಕ ಬಾರಿಸಿ ದಾಖಲೆ ಮಾಡಿದ್ದ ಇಶಾನ್​ ಕಿಶನ್​ ಹಾಗೂ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ್ದ ಸೂರ್ಯಕುಮಾರ್​ ಯಾದವ್​ಗೆ ಭಾರತ ತಂಡದಲ್ಲಿ ಅವಕಾಶ ಲಭಿಸಿಲ್ಲ. ಗಿಲ್ ಇನಿಂಗ್ಸ್ ಆರಂಭಿಸಿದರೆ, ಕೆ ಎಲ್​ ರಾಹುಲ್​ ವಿಕೆಟ್​ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ತಂಡಗಳು

ಭಾರತ: ರೋಹಿತ್ ಶರ್ಮಾ(ನಾಯಕ), ಶುಬ್ಮನ್​ ಗಿಲ್​, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ಕೀಪರ್) ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಯಜ್ವೇಂದ್ರ ಚಹಲ್.

ಶ್ರೀಲಂಕಾ : ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್, ಪಾಥುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, 9 ದುನಿತ್ ವೆಲ್ಲಲಗೆ, ಕಸುನ್​ ರಜಿತ, ದಿಲ್ಶನ್​ ಮದುಶಂಕ.

ಇದನ್ನೂ ಓದಿ | INDvsSL | ಭಾರತ- ಶ್ರೀಲಂಕಾ ನಡುವಿನ ಪಂದ್ಯ ವೀಕ್ಷಿಸಲು ಅರ್ಧ ದಿನ ಸರಕಾರಿ ರಜೆ!

Exit mobile version