Site icon Vistara News

WPL 2024: ಡಬ್ಲ್ಯುಪಿಎಲ್‌ ಉದ್ಘಾಟನೆಗೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪ್ರಧಾನ ಆಕರ್ಷಣೆ

SRK To Light Up WPL 2024

ಬೆಂಗಳೂರು: ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನ 2ನೇ ಆವೃತ್ತಿ(WPL 2024) ನಾಳೆಯಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳಲಿದೆ. ಅದ್ಧೂರಿ ಉದ್ಘಾಟನ ಸಮಾರಂಭದಲ್ಲಿ ಬಾಲಿವುಡ್​ನ ಹಿರಿಯ ನಟ ಶಾರುಖ್‌ ಖಾನ್‌(Shah Rukh Khan) ಪ್ರಧಾನ ಆಕರ್ಷಣೆಯಾಗಲಿದ್ದಾರೆ. ಇವರು ಮಾತ್ರವಲ್ಲದೆ ಬಾಲಿವುಡ್​ನ ಯುವ ತಾರೆಯರಾದ ಸಿದ್ಧಾರ್ಥ್ ಮಲ್ಹೋತ್ರಾ(sidharth malhotra), ಕಾರ್ತಿಕ್‌ ಆರ್ಯನ್‌(kartik aaryan) ಮತ್ತು ಶಾಹಿದ್​ ಕಪೂರ್​(shahid kapoor) ಸಾಥ್​ ನೀಡಲಿದ್ದಾರೆ.

ಶುಕ್ರವಾರ ಸಂಜೆ 6.30ಕ್ಕೆ ಉದ್ಘಾಟನ ಸಮಾರಂಭ ಆರಂಭಗೊಳ್ಳಲಿದ್ದು, ಉದ್ಘಾಟನ ಕಾರ್ಯಕ್ರಮ ಒಂದು ಗಂಟೆ ಕಾಲ ನಡೆಯಲಿದೆ. ಬಳಿಕ ಪಂದ್ಯ ಆರಂಭಗೊಳ್ಳಲಿದೆ. ಇದು ನ್ಪೋರ್ಟ್ಸ್ 18 ಮತ್ತು ಜಿಯೋ ಸಿನೆಮಾದಲ್ಲಿ ನೇರ ಪ್ರಸಾರ ಕಾಣಲಿದೆ. ಮಹಿಳಾ ಕ್ರಿಕೆಟ್​ಗೂ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಪುರುಷರ ಐಪಿಎಲ್​ ಟೂರ್ನಿಯ ಉದ್ಘಾಟನ ಸಮಾರಂಭಕ್ಕಿಂತಲೂ ಈ ಬಾರಿ ಬಸಿಸಿಐ ಅದ್ಧೂರಿ ಉದ್ಘಾಟನ ಸಮಾರಂಭ ಮಾಡುತ್ತಿದೆ.

ಬುಧವಾರ 5 ತಂಡದ ತಂಡದ ನಾಯಕಿಯರು ಟ್ರೋಫಿಯೊಂದಿಗೆ ಫೋಟೊ ಶೂಟ್​ ಮಾಡಿಸಿಕೊಂಡರು.ಐವರು ನಾಯಕಿಯರಾದ ಹರ್ಮನ್‌ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್), ಸ್ಮೃತಿ ಮಂಧಾನ (ಆರ್‌ಸಿಬಿ), ಅಲಿಸ್ಸಾ ಹೀಲಿ (ಯುಪಿ ವಾರಿಯರ್ಸ್), ಮೆಗ್ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್), ಮತ್ತು ಬೆತ್ ಮೂನಿ (ಗುಜರಾತ್ ಜೈಂಟ್ಸ್) ಟ್ರೋಫಿ ಅನಾವರಣದ ವೇಳೆ ಕಂಗೊಳಿಸಿದರು. ಇದೇ ವೇಳೆ ಆಸ್ಟ್ರೇಲಿಯಾದವರಾದ ಬೆತ್ ಮೂನಿ ಮೆಗ್ ಲ್ಯಾನಿಂಗ್ ಮತ್ತು ಅಲಿಸ್ಸಾ ಹೀಲಿ ಟ್ರೋಫಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಇದನ್ನೂ ಓದಿ WPL 2024: ಡಬ್ಲ್ಯುಪಿಎಲ್‌ ಟ್ರೋಫಿಯೊಂದಿಗೆ ಕಣ್ಮನ ಸೆಳೆದ ನಾಯಕಿಯರು

ಟ್ರೋಫಿಯೊಂದಿಗೆ ಕಂಗೊಳಿಸಿದ ನಾಯಕಿಯರ ವಿಡಿಯೊವನ್ನು ಡಬ್ಲ್ಯುಪಿಎಲ್‌ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದು 5 ನಾಯಕಿಯರು…ಒಂದು ಗುರಿ(5 Captains. 1 Goal) ಎಂದು ಬರೆದುಕೊಂಡಿದೆ. ಶುಕ್ರವಾರ ನಡೆಯುವ ಉದ್ಘಾಟನ ಪಂದ್ಯದಲ್ಲಿ ಕಳೆದ ಬಾರಿಯ ಫೈನಲೀಸ್ಟ್​ಗಳಾದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ರನ್ನರ್ಸ್​ ಅಪ್​ ಡೆಲ್ಲಿ ಕ್ಯಾಪಿಲ್ಸ್​ ಮುಖಾಮುಖಿಯಾಗಲಿವೆ. ಫೆ. 23ರಿಂದ ಮಾ. 4ರ ತನಕ ಬೆಂಗಳೂರಿನಲ್ಲಿ ಲೀಗ್‌ ಪಂದ್ಯಗಳು ನಡೆಯಲಿವೆ. ಮಾ. 5ರಿಂದ ಹೊಸದಿಲ್ಲಿಯಲ್ಲಿ ಪಂದ್ಯಾವಳಿ ಮುಂದುವರಿಯುತ್ತದೆ.

Exit mobile version