ಬೆಂಗಳೂರು : ಅಖಂಡ ಕರ್ನಾಟಕ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದೆ. ಕನ್ನಡಿಗರೆಲ್ಲರೂ ಕನ್ನಡದ ಬಾವುಟ ಹಿಡಿದು ಸಂಭ್ರಮಿಸುತ್ತಿದ್ದಾರೆ. ಏತನ್ಮಧ್ಯೆ, ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದೆ. ತಂಡದಲ್ಲಿರುವ ಬೇರೆಬೇರೆ ಭಾಷೆಗಳನ್ನಾಡುವ ಆಟಗಾರರ ಮೂಲಕ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ಹೇಳಿಸಲಾಗಿದೆ.
ಫಿನಿಶರ್ ದಿನೇಶ್ ಕಾರ್ತಿಕ್, ನಾಯಕ ಫಾಫ್ ಡು ಪ್ಲೆಸಿಸ್, ಬೌಲರ್ ಹರ್ಷಲ್ ಪಟೇಲ್, ಶ್ರೀಲಂಕಾದ ಸ್ಪಿನ್ನರ್ ವಾನಿಂದು ಹಸರಂಗ ಸೇರಿದಂತೆ ಯುವ ಆಟಗಾರರ ಧ್ವನಿಯಲ್ಲಿ ಶುಭಾಶಯ ಕೋರಲಾಗಿದೆ.
ಮುಂಬರುವ ಐಪಿಎಲ್‌ನ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್‌ನಲ್ಲಿ ನಡೆಯಬಹುದು ಎಂಬುದಾಗಿ ನಿರೀಕ್ಷೆ ಮಾಡಲಾಗಿದೆ. ಬೆಂಗಳೂರು ಅದಕ್ಕೆ ಆತಿಥ್ಯ ವಹಿಸಬಹುದು ಎಂದು ಹೇಳಲಾಗುತ್ತಿರುವ ನಡುವೆಯೇ ಟರ್ಕಿಯ ಇಸ್ತಾಂಬುಲ್‌ನಲ್ಲೂ ನಡೆಸುವ ಬಗ್ಗೆ ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ ಎನ್ನಲಾಗಿದೆ.
ಮಿನಿ ಹರಾಜಿಗೆ ಒಂದು ತಿಂಗಳು ಮುಂಚಿತವಾಗಿ ಅಂದರೆ ನವೆಂಬರ್ ೧೫ರ ಒಳಗೆ ತಂಡದಲ್ಲಿ ಉಳಿಸುವ ಆಟಗಾರರ ಪಟ್ಟಿಯನ್ನು ನೀಡುವಂತೆ ಬಿಸಿಸಿಐ ಎಲ್ಲ ಪ್ರಾಂಚೈಸಿಗಳಿಗೆ ಸೂಚನೆ ಕೊಟ್ಟಿದೆ ಎನ್ನಲಾಗಿದೆ.
ಇದನ್ನೂ ಓದಿ | IPL 2023| ಆರ್‌ಸಿಬಿ ಬಳಗ ಸೇರಲಿದ್ದಾರೆ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್, ಯಾರವರು?