Site icon Vistara News

IPL 2023 : ನೇರ ಪ್ರಸಾರದ ಪೈಪೋಟಿ, 12 ಐಪಿಎಲ್​ ಪಂದ್ಯಗಳನ್ನು ಉಚಿತ ಪ್ರಸಾರ ಮಾಡಲಿದೆ ಸ್ಟಾರ್​ ಸ್ಪೋರ್ಟ್ಸ್

Star Sports will telecast live competition, 12 IPL matches for free

ಮುಂಬಯಿ: ಐಪಿಎಲ್​ ಜಾಗತಿಕ ಮಟ್ಟದ ಬೃಹತ್ ಕ್ರೀಡಾಕೂಟ ಎನಿಸಿಕೊಂಡಿರುವ ಬೆನ್ನಲ್ಲೇ ಅದರ ನೇರ ಪ್ರಸಾರದ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕೆ ನಾನಾ ಮಾಧ್ಯಮ ಸಂಸ್ಥೆಗಳು ಸರತಿ ಸಾಲಿನಲ್ಲಿ ನಿಂತವು. ಇದರಿಂದ ಬಿಸಿಸಿಐ ಕೂಡ ದೊಡ್ಡ ಮೊತ್ತವನ್ನು ಪಡೆದುಕೊಂಡು ಖಜಾನೆ ತುಂಬಿಸಿಕೊಂಡಿತು. ಕಳೆದ ವರ್ಷ ನಡೆದ ಐಪಿಎಲ್​ ಮಾಧ್ಯಮ ಹಕ್ಕುಗಳ ವಿತರಣೆ ಬಿಡ್ಡಿಂಗ್​ನಲ್ಲಿ ಪಾಲ್ಗೊಂಡಿದ್ದ ರಿಲಯನ್ಸ್​ ಕಂಪನಿ ಒಡೆತನದ ವಯಾಕಾಮ್​ 18, ಆನ್​ಲೈನ್​ ಸ್ಟ್ರೀಮಿಂಗ್​ ಹಕ್ಕನ್ನು ತನ್ನದಾಗಿಸಿಕೊಂಡಿದೆ. ಅಚ್ಚರಿಯೇನೆಂದರೆ ದೊಡ್ಡ ಮೊತ್ತ ವಿನಿಯೋಗ ಮಾಡಿಕೊಂಡು ಹಕ್ಕನ್ನು ಪಡೆದಿರುವ ಹೊರತಾಗಿಯೂ ಈ ವರ್ಷ (IPL 2023) ಪ್ರೇಕ್ಷಕರಿಗೆ ಉಚಿತವಾಗಿ ವಿಕ್ಷಣೆಗೆ ಅವಕಾಶ ನೀಡುವುದಾಗಿ ಘೋಷಿಸಿದೆ. ಇದು ನೇರ ಪ್ರಸಾರದ ವಿತರಣೆಯಲ್ಲಿ ಪೈಪೋಟಿಗೆ ಕಾರಣವಾಗಿದ್ದು, ಇದೀಗ ಟಿವಿ ನೇರ ಪ್ರಸಾರದ ಹಕ್ಕನ್ನು ಪಡೆದುಕೊಂಡಿರುವ ಸ್ಟಾರ್​ ಸ್ಪೋರ್ಟ್ಸ್​ ಕೂಡ 12 ಪಂದ್ಯಗಳನ್ನು ಉಚಿತವಾಗಿ ಪ್ರಸಾರ ಮಾಡುವುದಾಗಿ ಹೇಳಿಕೊಂಡಿದೆ.

ಸ್ಟಾರ್​ ಸ್ಪೋರ್ಟ್ಸ್​ ಟಿವಿ ಏನಾದರೂ ಪಂದ್ಯವನ್ನು ಉಚಿತವಾಗಿ ಪ್ರಸಾರ ಮಾಡಿದರೆ ಐಪಿಎಲ್​ ಇತಿಹಾಸದಲ್ಲಿಯೇ ಉಚಿತ ಪ್ರಸಾರಗೊಂಡ ದಾಖಲೆ ಸೃಷ್ಟಿಯಾಗಲಿದೆ. ಸ್ಟಾರ್​ ನೆಟ್ವರ್ಕ್​ಗೆ ಸೇರಿರುವ ಸ್ಟಾರ್​ ಉತ್ಸವ್​ ಚಾನೆಲ್​ನಲ್ಲಿ 12 ಪಂದ್ಯಗಳು ಉಚಿತವಾಗಿ ಪ್ರಸಾರವಾಗಲಿದೆ ಎಂದು E4M ವರದಿ ಮಾಡಿದೆ. ಆದರೆ, ಯಾವ ಪಂದ್ಯಗಳು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಡಿಸ್ನಿ ಸ್ಟಾರ್​ ಕೂಡ ಈ ಮಾಹಿತಿಯನ್ನು ಖಚಿತಪಡಿಸಿದೆ. ಇದೇ ವರ್ಷ ಮೊದಲ ಬಾರಿಗೆ ಸ್ಟಾರ್​ ಉತ್ಸವ್​ ಮೂವಿ ಚಾನೆಲ್​ ಮೂಲಕ ಪ್ರಸಾರವಾಗಲಿದೆ ಎಂದು ಹೇಳಿದೆ. ಗ್ರಾಮೀಣ ಪ್ರದೇಶಕ್ಕೂ ನಮ್ಮ ಟಿವಿ ನೆಟ್ವರ್ಕ್​ ವಿಸ್ತರಣೆಯಾಗಿದೆ. ಹೀಗಾಗಿ ಅವರೆಲ್ಲರಿಗೂ ಅತ್ಯುತ್ತಮ ವೀಕ್ಷಣೆ ಅನುಭವ ನೀಡುವ ಉದ್ದೇಶದಿಂದ ಉಚಿತವಾಗಿ ಪ್ರಸಾರ ಮಾಡುತ್ತೇವೆ ಎಂದೂ ಹೇಳಿದೆ.

ಇದನ್ನೂ ಓದಿ : Team India | ಮುಂದಿನ ಆವೃತ್ತಿಯ ಐಪಿಎಲ್​ ಪಂದ್ಯಗಳನ್ನು ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಿ! ಹೇಗೆ ಸಾಧ್ಯ?

ಕಳೆದ ಜನವರಿಯಲ್ಲಿ ರಿಲಯನ್ಸ್ ಒಡೆತದನ ವಯಾಕಾಮ್ 18 ಸಂಸ್ಥೆಯು ಐಪಿಎಲ್​ ಪಂದ್ಯವನ್ನು ಉಚಿತವಾಗಿ ಪ್ರಸಾರ ಮಾಡುವುದಾಗಿ ಹೇಳಿತ್ತು. ಜಿಯೋ ಆ್ಯಪ್​ನಲ್ಲಿ ಪಂದ್ಯಗಳನ್ನು ನೋಡಬಹುದು ಎಂದು ಅದು ಹೇಳಿತ್ತು. ಒಟ್ಟು 11 ಸ್ಥಳೀಯ ಭಾಷೆಗಳಲ್ಲಿ ಪ್ರಸಾರ ಮಾಡುವುದಾಗಿಯೂ ತಿಳಿಸಿತ್ತು.

Exit mobile version