ಮುಂಬೈ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಸ್ಟೀವನ್ ಸ್ಮಿತ್ ಏಕದಿನ ವಿಶ್ವಕಪ್ನಲ್ಲಿ (ICC World Cup 2023) ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಆಡುವುದು ಅನುಮಾನವಾಗಿದೆ. ನವೆಂಬರ್ 7ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪಂದ್ಯದ ಮುನ್ನಾದಿನವಾದ ಸೋಮವಾರ, 34 ವರ್ಷದ ಆಟಗಾರ ತಲೆತಿರುಗುವಿಕೆ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ಮಂಗಳವಾರ ಅವರು ಕಣಕ್ಕೆ ಇಳಿಯುವುದು ಅನುಮಾನ ಎನಿಸಿದೆ.
And now Steve Smith has left the net, not looking very good, stood around the with his head bent down, then went and sat on a chair looking in quite a bit of discomfort, before lying down on the ground where you find him now with his eyes closed. Not great signs maybe #CWC23
— Bharat Sundaresan (@beastieboy07) November 6, 2023
“ಕಳೆದ ಕೆಲವು ದಿನಗಳಿಂದ ದಿನ ನಾನು ಸ್ವಲ್ಪ ತಲೆತಿರುಗುವಿಕೆಯನ್ನು ಎದುರಿಸುತ್ತಿದ್ದೇನೆ. ಆದ್ದರಿಂದ ಸ್ವಲ್ಪ ಕಿರಿಕಿರಿ ಉಂಟು ಮಾಡುತ್ತಿದೆ. ನಾನು ಇಂದು ತರಬೇತಿಯಲ್ಲಿ ಪಾಲ್ಗೊಂಡು ಸುಧಾರಿಸಿಕೊಳ್ಳಬಹುದು ಎಂದು ಆಶಿಸುತ್ತೇನೆ. ಸಾಂದರ್ಭಿಕವಾಗಿ ನಾನು ಹಿಂದೆ ಕೆಲವೊಂದು ಬಾರಿ ಇದೇ ಸಮಸ್ಯೆ ಎದುರಿಸಿದ್ದೇನೆ. ನಾನು ಹೊರಗೆ ಹೋಗಿ ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತೇನೆ.”ಎಂದು ಸ್ಮಿತ್ ಹೇಳಿದ್ದಾರೆ.
ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯ ನಂತರ ಸ್ಮಿತ್ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಮೊದಲಿಗೆ ಅವರು ಯಾವುದೇ ಅಸ್ವಸ್ಥತೆಯ ಚಿಹ್ನೆಗಳನ್ನು ತೋರಿಸಲಿಲ್ಲ. ಅವರು ಆಸ್ಟ್ರೇಲಿಯಾದ ಸಹಾಯಕ ಸಿಬ್ಬಂದಿಯಿಂದ ಕೆಲವು ಥ್ರೋಡೌನ್ಗಳನ್ನು ತೆಗೆದುಕೊಳ್ಳುವ ಮೂಲಕ ಅಭ್ಯಾಸ ಪ್ರಾರಂಭಿಸಿದ್ದರು. ಸಣ್ಣ ಮಧ್ಯಂತರವನ್ನು ತೆಗೆದುಕೊಂಡರು. ಹಿಂತಿರುಗಿದ ನಂತರ ಅವರು ಹೆಚ್ಚಿನ ಥ್ರೋಡೌನ್ ಗಳನ್ನು ಎದುರಿಸಿದರು ಮತ್ತು ಅವರ ಸಿಗ್ನೇಚರ್ ಫ್ಲಿಕ್ ಗಳು ಮತ್ತು ಡ್ರೈವ್ ಗಳನ್ನು ಪ್ರದರ್ಶಿಸಿದರು.
ಪ್ರದರ್ಶನ ಉತ್ತಮವಾಗಿಲ್ಲ
ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ನಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ ಸ್ಟೀವ್ ಸ್ಮಿತ್, “ಕೆಲವೊಮ್ಮೆ ಸ್ವಲ್ಪ ನಿರಾಶಾದಾಯಕ” ಎಂದು ಹೇಳಿದರು. ಏಳು ಪಂದ್ಯಗಳಿಂದ, ಅವರು ಒಂದು ಅರ್ಧಶತಕ ಸೇರಿದಂತೆ 205 ರನ್ ಗಳಿಸಿದ್ದಾರೆ, 29.28 ಸರಾಸರಿ ಮತ್ತು ಕೇವಲ 86.13 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಇದನ್ನೂ ಓದಿ: ICC World Cup 2023 : ಅಫಘಾನಿಸ್ತಾನದ ಸೆಮೀಸ್ ಕನಸು ನನಸಾಗಲು ಬಿಡುವುದೇ ಆಸೀಸ್ ?
“ಹೌದು, ಇದು ಸ್ವಲ್ಪ ನಿರಾಶಾದಾಯಕವಾಗಿದೆ. ಹೀಗಾಗಿ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ನಾನು ಕೆಲವು ಕ್ಲಿಷ್ಟಕರ ಪಿಚ್ನಲ್ಲಿ ಆಡಿದ್ದೇನೆ. ನಿಸ್ಸಂಶಯವಾಗಿ ಭಾರತದ ವಿರುದ್ಧದ ಮೊದಲ ಪಂದ್ಯವು ಕ್ಲಿಷ್ಟಕರವಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ನಾನು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದೆ ಎಂದು ಸ್ಮಿತ್ ಹೇಳಿದ್ದಾರೆ.
ಅಫಘಾನಿಸ್ತಾನ ಎದುರಾಳಿ
ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನವೆಂಬರ್ 07 ರಂದು ನಡೆಯಲಿರುವ ವಿಶ್ವ ಕಪ್ 2023 (ICC World Cup 2023) 39ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗಲಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 33 ರನ್ ಗಳಿಂದ ಮಣಿಸಿದ ಆಸ್ಟ್ರೇಲಿಯಾ ಐದು ಪಂದ್ಯಗಳ ಗೆಲುವಿನ ಹಾದಿಯಲ್ಲಿದೆ. ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಏಳು ಪಂದ್ಯಗಳಲ್ಲಿ ಐದು ಗೆಲುವುಗಳೊಂದಿಗೆ ಹತ್ತು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ಅಫ್ಘಾನಿಸ್ತಾನವು 3 ಪಂದ್ಯಗಳ ಗೆಲುವಿನ ಸಂಭ್ರಮದಲ್ಲಿ ಕಣಕ್ಕೆ ಇಳಿಯಲಿದೆ. ಏಕೆಂದರೆ ಅವರು ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ಮತ್ತು ಭಾರತದ ವಿರುದ್ಧ ಸತತ ಸೋಲುಗಳೊಂದಿಗೆ ಅವರು ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದರು. ಆದಾಗ್ಯೂ, ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ತನ್ನ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ಇತಿಹಾಸ ಬರೆಯಿತು. ಅವರು ಪಾಕಿಸ್ತಾನ, ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ಅನ್ನು ಸೋಲಿಸಿದರು ಮತ್ತು ಈಗ ಪಂದ್ಯಾವಳಿಯ ಸೆಮಿಫೈನಲ್ಸ್ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶವನ್ನು ಕಂಡುಕೊಂಡಿದ್ದಾರೆ. ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಅಫ್ಘಾನಿಸ್ತಾನ ತನ್ನ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಆಸೀಸ್ಗೆ ಒಂದು ಗೆಲುವು ಬೇಕು
ಆಸ್ಟ್ರೇಲಿಯಾ ತನ್ನ ಅಭಿಯಾನವನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸತತ ಸೋಲಿನೊಂದಿಗೆ ಪ್ರಾರಂಭಿಸಿತು. ಆದಾಗ್ಯೂ, ಅವರು ತಮ್ಮ ಮುಂದಿನ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ತಮ್ಮ ಅಭಿಯಾನವನ್ನು ಮತ್ತೆ ಹಳಿಗೆ ತಂದಿತಿಉ. ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಟೂರ್ನಿಯ ಸೆಮಿಫೈನಲ್ಗೆ ಅರ್ಹತೆ ಪಡೆಯಲು ಇನ್ನೂ ಒಂದು ಗೆಲುವಿನ ದೂರದಲ್ಲಿದೆ. ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು