ನವ ದೆಹಲಿ: ಕಳುವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟಿಗರ ಕಿಟ್ಗಳನ್ನು ಪೊಲೀಸರು ಪತ್ತೆ ಹಚ್ಚಿ ವಾಪಸ್ ಕೊಡಿಸಿದ್ದಾರೆ. ಆದರೆ, ವಾಪಸ್ ಸಿಕ್ಕಿದ ಬ್ಯಾಗ್ನಿಂದ ಕೆಲವೊಂದು ವಸ್ತುಗಳು ಕಣ್ಮರೆಯಾಗಿವೆ ಎಂದು ನಾಯಕ ವಾರ್ನರ್ ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ವಾರ್ನರ್ ಅವರು ಶುಕ್ರವಾರ ಈ ಬಗ್ಗೆ ಇನ್ಸ್ಟಾಗ್ರಾಮ್ ಪೋಸ್ಟ್ ಒಂದನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಬ್ಯಾಟ್ಗಳ ಸಮೇತ ಚಿತ್ರವನ್ನು ಹಾಕಿದ್ದಾರೆ. ಅಲ್ಲಿ ಅರು ಕೆಲವು ವಸ್ತುಗಳು ಇನ್ನೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಏಪ್ರಿಲ್ 19ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಕಿಟ್ ಬ್ಯಾಗ್ಗಳು ಕಾಣೆಯಾಗಿದ್ದವು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮುಕ್ತಾಯಗೊಂಡ ಬಳಿಕ ಡೆಲ್ಲಿಗೆ ವಾಪಸ್ ತೆರಳುವ ದಾರಿಯಲ್ಲಿ ಅವರ ಕಿಟ್ ಬ್ಯಾಗ್ಗಳು ಕಾಣೆಯಾಗಿದ್ದವು. ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಫಿಲ್ ಸಾಲ್ಟ್, ಯಶ್ ಧುಲ್ ಕಿಟ್ ಬ್ಯಾಗ್ಗಳನ್ನು ಖದೀಮರು ಕಳ್ಳತನ ಮಾಡಿದ್ದರು.
ಕ್ರಿಕೆಟ್ ಆಟಗಾರರು ನೀಡಿದ ದೂರಿನನ್ವಯ ಪೊಲೀಸರು ಕಿಟ್ ಬ್ಯಾಗ್ಗಳನ್ನು ಪತ್ತೆ ವಾಪಸ್ ತಂದುಕೊಟ್ಟಿದ್ದರು. ಬ್ಯಾಗ್ನಲ್ಲಿ 16 ಬ್ಯಾಟ್ಗಳು, ಪ್ಯಾಡ್ಗಳು, ಶೂಗಳು, ಥಿಗ್ ಪ್ಯಾಡ್ಗಳು, ಗ್ಲವ್ಸ್ಗಳಿದ್ದವು.
ಲಾಜಿಸ್ಟಿಕ್ ಕಂಪನಿ ಕ್ರಿಕೆಟ್ ಆಟಗಾರರ ಲಗೇಜ್ ಹಾಗೂ ಕಿಟ್ ಬ್ಯಾಗ್ಗಳನ್ನು ರವಾನೆ ಮಾಡುವ ಕೆಲಸ ಮಾಡುತ್ತವೆ. ಆಟಗಾರರು ನಿರ್ದಿಷ್ಟ ಹೋಟೆಲ್ಗೆ ತಲುಪುವ ಮೊದಲು ಅವರು ಬ್ಯಾಟ್ಗಳನ್ನು ಅಲ್ಲಿಗೆ ತಲುಪಿಸಬೇಕು. ಆದರೆ, ಡೆಲ್ಲಿಯಿಂದ ವಾಪಸಾದ್ ಡೇವಿಡ್ ವಾರ್ನರ್ ಸೇರಿದಂತೆ ಕೆಲವು ಆಟಗಾರರ ಬ್ಯಾಗ್ನಲ್ಲಿದ್ದ ವಸ್ತುಗಳು ನಾಪತ್ತೆಯಾಗಿದ್ದವು.
ಡೇವಿಡ್ ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಪೊಲೀಸರು ಕಳ್ಳರನ್ನು ಹಿಡಿದಿದ್ದಾರೆ. ಬ್ಯಾಗ್ ವಾಪಸ್ ತಲುಪಿದೆ. ಆದರೆ, ಕೆಲವೊಂದು ವಸ್ತುಗಳು ಬ್ಯಾಗ್ನಲ್ಲಿ ಇಲ್ಲ. ಆದಾಗ್ಯೂ ಪತ್ತೆ ಹಚ್ಚಿಕೊಟ್ಟ ಪೊಲೀಸರಿಗೆ ಥ್ಯಾಂಕ್ಸ್.
ಕೊನೆಗೂ ಗೆದ್ದ ಡೆಲ್ಲಿ ತಂಡ
ಐಪಿಎಲ್ 16ನೇ ಆವೃತ್ತಿಯಲ್ಲಿ (IPL 2023) ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ವಿಜಯ ದಾಖಲಿಸಿದೆ. ಗುರುವಾರದ ಡಬಲ್ ಹೆಡರ್ನಲ ಎರಡನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಜಿದ್ದಾಜಿದ್ದಿನಿಂದ ಕೂಡಿದ ಈ ಪಂದ್ಯದಲ್ಲಿ ಕೊನೆಗೂ ಗೆಲುವು ಡೆಲ್ಲಿ ತಂಡದ ಪಾಲಾಯಿತು. ಡೇವಿಡ್ ವಾರ್ನರ್ (57) ಅವರ ಏಕಾಂಗಿ ಹೋರಾಟದ ನೆರವಿನಿಂದ ತಂಡ ಜಯ ಸಾಧಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಮೊದಲ ಗೆಲುವು ಪಡೆದರೆ, ಅತ್ತ ನಿತೀಶ್ ರಾಣಾ ನೇತೃತ್ವದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಹ್ಯಾಟ್ರಿಕ್ ಸೋಲಿಗೆ ಒಳಗಾಯಿತು.
ಅರುಣ್ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ 20 ಓವರ್ಗಳಲ್ಲಿ 127 ರನ್ ಮಾಡಿ ಆಲ್ಔಟ್ ಆಯಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆದ ಹೊರತಾಗಿಯೂ ಬಳಿಕ ಸತತವಾಗಿ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಬಿತ್ತು.. ಕೊನೆಯಲ್ಲಿ ಪೇಚಾಡಿ 19.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 128 ರನ್ ಬಾರಿಸಿತು.
ಸಣ್ಣ ಮೊತ್ತವನ್ನು ಬೆನ್ನಟ್ಟಲು ಹೊರಟ ಡೆಲ್ಲಿ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 38 ರನ್ ಪೇರಿಸಿತು. ಆದರೆ, ಪೃಥ್ವಿ ಶಾ (13) ಮತ್ತೆ ವೈಫಲ್ಯ ಕಂಡರು. ಬಳಿಕ ಆಡಲು ಬಂದ ಮಿಚೆಲ್ ಮಾರ್ಶ್ (2), ಫಿಲ್ ಸಾಲ್ಟ್ (5) ಬೇಗ ವಿಕೆಟ್ ಒಪ್ಪಿಸಿದರು. ಮನೀಶ್ ಪಾಂಡೆ (21) ರನ್ ಬಾರಿಸಿದರೂ ಅವರ ಇನಿಂಗ್ಸ್ನಲ್ಲಿ ಜಿದ್ದು ಇರಲಿಲ್ಲ. ಅಮನ್ ಖಾನ್ ಶೂನ್ಯಕ್ಕೆ ಔಟಾಗುವ ಮೂಲಕ ಡೆಲ್ಲಿ ತಂಡ ಮತ್ತೆ ಆತಂಕ್ಕೆ ಬಿತ್ತು. ಕೊನೆಯಲ್ಲಿ ಅಕ್ಷರ್ ಪಟೇಲ್ (19 ರನ್ ) ಹಾಗೂ ಲಲಿತ್ ಯಾದವ್ (4 ರನ್) ತಂಡವನ್ನು ಗೆಲ್ಲಿಸಿದರು.