Site icon Vistara News

Shakib al hasan : ಶಕಿಬ್​ ಲಂಕಾಗೆ ಬಂದರೆ ಕಲ್ಲೇಟು ಗ್ಯಾರಂಟಿ; ಬಾಂಗ್ಲಾ ನಾಯಕನಿಗೆ ಎಚ್ಚರಿಕೆ

Shakib al hasan

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ವೇಳೆ ಏಂಜೆಲೊ ಮ್ಯಾಥ್ಯೂಸ್ ವಿವಾದಾತ್ಮಕವಾಗಿ ಟೈಮ್ಡ್​ ಔಟ್ ಆದ ಕಾರಣ ಆಘಾತಕಾರಿ ವಿವಾದ ಭುಗಿಲೆದ್ದಿತ್ತು. ಅದಿನ್ನೂ ತಣ್ಣಗಾಗಿಲ್ಲ. ಎರಡೂ ದೇಶಗಳ ನಡುವಿನ ಆಟಗಾರರ ಕೋಪ ಈಗ ಮೈದಾನ ಬಿಟ್ಟು ಹೊರಗೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಎರಡೂ ತಂಡಗಳ ನಡುವಿನ ಪಂದ್ಯ ರಣರಂಗವಾಗುವುದು ನಿಶ್ಚಿತ ಎನಿಸಿಕೊಂಡಿದೆ. ಜತೆಗೆ ಅಭಿಮಾನಿಗಳೂ ಕಚ್ಚಾಡಿಕೊಳ್ಳುವ ಸಾಧ್ಯತೆಗಳಿವೆ. ಏತನ್ಮಧ್ಯೆ ಏಂಜೆಲೊ ಮ್ಯಾಥ್ಯೂಸ್ ಅವರ ಸಹೋದರ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದ, ಬಾಂಗ್ಲಾ ನಾಯಕ ಶಕಿಬ್​ (Shakib al hasan) ಲಂಕಾಗೆ ಬಂದರೆ ಕಲ್ಲೇಟು ಬೀಳವುದು ಗ್ಯಾರಂಟಿ ಎಂದಿದ್ದಾರೆ.

ಶಕೀಬ್ ಅಲ್ ಹಸನ್ ಅವರನ್ನು ಎದುರಿಸಲು ತಯಾರಿ ನಡೆಸುತ್ತಿದ್ದ ಮ್ಯಾಥ್ಯೂಸ್ ಅವರ ಹೆಲ್ಮೆಟ್ ಸ್ಟ್ರಾಪ್ 25 ನೇ ಓವರ್​ನಲ್ಲಿ ತುಂಡಾಗಿತ್ತು. ಮ್ಯಾಥ್ಯೂಸ್ ಹೊಸ ಹೆಲ್ಮೆಟ್ ಗೆ ತರುವಂತೆ ಕರೆ ನೀಡಿದ್ದರಿಂದ ಬ್ಯಾಟಿಂಗ್ ಆರಂಭಿಸುವುದು ವಿಳಂಬವಾಯಿತು. ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅಂಪೈರ್​ಗೆ ಟೈಮ್ಸ್​ ಔಟ್ ಘೋಷಿಸುವಂತೆ ಮನವಿ ಮಾಡಿದರು. ಹೀಗಾಗಿ ಮ್ಯಾಥ್ಯೂಸ್ ಔಟ್ ಆದರು, ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಔಟ್​ ಆದ ಅನುಭವಿಸಿದ ಮೊದಲ ಬ್ಯಾಟರ್​​ ಎಂಬ ಕುಖ್ಯಾತಿಗೆ ಪಾತ್ರರಾದರು. ವಾಸ್ತವವನ್ನು ಮ್ಯಾಥ್ಯೂಸ್ ವಿವರಿಸಿದರೂ ಶಕೀಬ್ ತನ್ನ ನಿರ್ಧಾರದಲ್ಲಿ ದೃಢವಾಗಿ ನಿಂತರು. ಮತ್ತು ಅವರ ಮನವಿಯನ್ನು ಹಿಂತೆಗೆದುಕೊಳ್ಳಲಿಲ್ಲ. ಇದು ಲಂಕಾ ಆಟಗಾರರ ಕೋಪಕ್ಕೆ ಕಾರಣವಾಯಿತು.

ಸಮರ್ಥನೆ

ಪಂದ್ಯದ ನಂತರವೂ, ಬಾಂಗ್ಲಾದೇಶದ ನಾಯಕ ತನ್ನ ನಿಲುವನ್ನು ಬದಲಾಯಿಸಲಿಲ್ಲ, ಅವರು ಮಾಡಿದ್ದು ಸರಿಯಾಗಿದೆ ಮತ್ತು ನಿಯಮಗಳ ಅಡಿಯಲ್ಲಿದೆ ಎಂದು ಸಮರ್ಥಿಸಿಕೊಂಡಿದ್ದರು. ಈ ಬಗ್ಗೆ ಏಂಜೆಲೊ ಮ್ಯಾಥ್ಯೂಸ್ ಅವರ ಸಹೋದರ ಟ್ರೆವಿಸ್ ಮ್ಯಾಥ್ಯೂಸ್ ಅವರು ಶಕೀಬ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅವರಿಗೆ ಇನ್ನು ಮುಂದೆ ಶ್ರೀಲಂಕಾದಲ್ಲಿ ಸ್ವಾಗತ ಸಿಗುವುದಿಲ್ಲ. ಕಲ್ಲೇಟು ಗ್ಯಾರಂಟಿ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: IPL 2023 : ಅರ್ಧ ಶತಕ ಬಾರಿಸಿದ ವಿರಾಟ್​​ ಕೊಹ್ಲಿಗೆ ಸಿಕ್ಕಿತು ಎಲೆಕ್ಟ್ರಿಕ್​​ ಸ್ಕೂಟರ್​; ಕೊಟ್ಟಿದ್ದು ಯಾರು?

ಟ್ರೆವಿಸ್ ಮ್ಯಾಥ್ಯೂಸ್ ವೆಬ್​ಸೈಟ್​ ಒಂದರ ಜತೆ ಮಾತನಾಡಿ “ನಾವು ತುಂಬಾ ನಿರಾಶೆಗೊಂಡಿದ್ದೇವೆ. ಬಾಂಗ್ಲಾದೇಶದ ನಾಯಕನಿಗೆ ಕ್ರೀಡಾ ಮನೋಭಾವವಿಲ್ಲ .ಸಭ್ಯರ ಆಟದಲ್ಲಿ ಮಾನವೀಯತೆಯನ್ನು ತೋರಿಸಲಿಲ್ಲ. ಅವರ ನಾಯಕನಿಂದ ಹಿಡಿದು ತಂಡದ ಉಳಿದ ಸದಸ್ಯರವರೆಗೆ ನಾವು ಇದನ್ನು ನಿರೀಕ್ಷಿಸಿರಲಿಲ್ಲ.. ಆ ತಂಡ ಜಂಟಲ್​ಮ್ಯಾನ್​ ಗೇಮ್​ಗೆ ಸೂಕ್ತರಲ್ಲ. ಹೆಲ್ಮೆಟ್​ ಹಾಳಾಗಿದೆ ಎಂದು ಹೇಳಿದರೂ ಕೇಳದೆ ಅಂಪೈರ್​ಗೆ ಮನವಿ ಮಾಡಿದ್ದಾರೆ. ಅವರಿಂದ ಇಂಥದ್ದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಬಾಂಗ್ಲಾದೇಶ ತಂಡದ ಜತೆ ಶಕೀಬ್ ಎಂದಾದರೂ ಶ್ರೀಲಂಕಾದಲ್ಲಿ ಆಡಲು ಬಂದರೆ ಅಭಿಮಾನಿಗಳು ಕಲ್ಲು ತೂರುವುದು ಗ್ಯಾರಂಟಿ. ಅವರು ಗೌರವಕ್ಕೆ ಅರ್ಹರಲ್ಲ. ಅವರ ಕೆಟ್ಟ ನಿಲುವಿನಿಂದಾಗಿ ಎಲ್ಲರ ಗೌರವ ಕಳೆದುಕೊಂಡಿದ್ದಾರೆ ಎಂಬುದಾಗಿ ಟ್ರೆವಿಸ್​ ಹೇಳಿದ್ದಾರೆ.

“ಶಕೀಬ್ ಅವರನ್ನು ಶ್ರೀಲಂಕಾದಲ್ಲಿ ಸ್ವಾಗತಿಸಲಾಗುವುದಿಲ್ಲ. ಅವರು ಯಾವುದೇ ಅಂತಾರಾಷ್ಟ್ರೀಯ ಅಥವಾ ಎಲ್​ಪಿಎಲ್​ ಪಂದ್ಯಗಳನ್ನು ಆಡಲು ಇಲ್ಲಿಗೆ ಬಂದರೆ, ಅವರ ಮೇಲೆ ಕಲ್ಲುಗಳನ್ನು ಎಸೆಯುವುದು ಗ್ಯಾರಂಟಿ. ಅಥವಾ ಅವರು ಹೋದ ಕಡೆಯೆಲ್ಲ ಅಭಿಮಾನಿಗಳ ಕಿರಿಕಿರಿಯನ್ನು ಎದುರಿಸಬೇಕಾಗುತ್ತದೆ. ಅವರಿಗೆ ಎಲ್ಲಿ ಹೋದರೂ ಉತ್ತಮ ವಾತಾವರಣದಲ್ಲಿ ಆಡುವುದು ಸಾಧ್ಯವಿದಲ್ಲ ಎಂಬುದಾಗಿ ಟ್ರೆವಿಸ್ ಹೇಳಿದ್ದಾರೆ.

ವಿಶೇಷವೆಂದರೆ, ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಎರಡೂ ಸೆಮಿಫೈನಲ್ ರೇಸ್​​ನಿಂದ ಹೊರಗುಳಿದಿವೆ.

Exit mobile version