ಚೆನ್ನೈ: ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಅಕ್ಟೋಬರ್ 08ರಂದು ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಸಮಯದಲ್ಲಿ ಪ್ರೇಕ್ಷಕನೊಬ್ಬ ಮೈದಾನಕ್ಕೆ ನುಗ್ಗಿದ್ದ. ಆತನಿಗೆ ಕೆ. ಎಲ್ ರಾಹುಲ್ ಅಶ್ಲೀಲ ಪದಗಳಿಂದ ನಿಂದಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ರಾಹುಲ್ ಕೆಟ್ಟ ಪದಗಳಿಂದ ನಿಂದಿಸುತ್ತಿರುವುದನ್ನು ಆತ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.
ಅಂದ ಹಾಗೆ ಇಲ್ಲಿ ಕೆ. ಎಲ್ ರಾಹುಲ್ ಅವರದ್ದು ಯಾವುದೇ ತಪ್ಪು ಇಲ್ಲ. ಯಾಕೆಂದರೆ ಅಭಿಮಾನಿಯು ತನ್ನ ಮಿತಿಯನ್ನು ಮೀರಿ ಮೈದಾನಕ್ಕೆ ನುಗ್ಗಿದ್ದ. ಎಲ್ಲ ಅಡೆತಡೆಗಳನ್ನು ತಪ್ಪಿಸಿಕೊಂಡು ಆತ ಆಟಗಾರರಿಗೆ ತೊಂದರೆ ಕೊಟ್ಟಿದ್ದ. ಇದರಿಂದ ಕೋಪಗೊಂಡ ರಾಹುಲ್ ಆತನಿಗೆ ಬೈದು ಕಳುಹಿಸಿದ್ದ. ಬಂದವ ಮತ್ಯಾರು ಅಲ್ಲ. ಆಗಾಗ ಮೈದಾನಕ್ಕೆ ನುಗ್ಗುವ ‘ಜಾರ್ವೊ 69.
KL Rahul to Jaavo-
— The CrickFun (@TheCrickFun) November 6, 2023
"Go Fu*k off, stop coming everywhere"
Is this real? pic.twitter.com/6HwHRlQDVG
ಆತನಿಗೆ ಐಸಿಸಿಐ ಮೈದಾನಕ್ಕೆ ಪ್ರವೇಶ ಮಾಡದಂತೆ ನಿಷೇಧ ಹೇರಿದೆ. ಇದೀಗ ಆತನ ಚೆನ್ನೈನಲ್ಲಿ ಮೈದಾನಕ್ಕೆ ಪ್ರವೇಶಿಸುವ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾನೆ. ಅದರಲ್ಲಿ ರಾಹುಲ್ ಬೈದು ಕಳುಹಿಸಿದ್ದ ಬಹಿರಂಗವಾಗಿದೆ.
ಜಾರ್ವೊ ಮೈದಾನವನ್ನು ಪ್ರವೇಶಿಸುವಾಗ, ಮೊಹಮ್ಮದ್ ಸಿರಾಜ್ ನಿಲ್ಲುವಂತೆ ಹೇಳಿದ್ದರು. ಆದರೆ ಆತ ಪಿಚ್ ಕಡೆಗೆ ಓಡುವುದನ್ನು ಮುಂದುವರೆಸಿದ್ದ. ಅಲ್ಲಿ ಕೋಪಗೊಂಡ ಕೆಎಲ್ ರಾಹುಲ್ ಎದುರಾಗಿದ್ದಾರೆ. ಕೋಪದಿಂದ ಮೈದಾನದಿಂದ ಹೊರಹೋಗುವಂತೆ ಹೇಳಿದ್ದಾರೆ. ವೀಡಿಯೊದಲ್ಲಿ ರಾಹುಲ್ ಸ್ಟ್ರೀಕರ್ ಮೇಲೆ ಶಾಪ ಹಾಕುವುದನ್ನು ಮತ್ತು ಎಲ್ಲೆಡೆ ಬರುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Virat kohli: ಬರ್ತ್ಡೇಯಂದೇ ಶತಕ ಬಾರಿಸಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ
ಇದು ನಿನಗಾಗಿ ಇರುವ ಸ್ಥಳ ಅಲ್ಲ. ಆ ಸ್ಥಳವು ನಿಮಗಾಗಿ (ಪ್ರೇಕ್ಷಕರ ಕಡೆಗೆ ತೋರಿಸುತ್ತಾ) ಹೋಗಿ, ಎಲ್ಲೆಡೆ ಬರುವುದನ್ನು ನಿಲ್ಲಿಸು” ಎಂದು ರಾಹುಲ್ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು. ಅದಕ್ಕಿಂತ ಮೊದಲು ರಾಹುಲ್ ಎಫ್ ಬೈಗುಳವನ್ನು ಬಳಸಿದ್ದರು.
ಐಸಿಸಿ ನಿಷೇಧ
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಮೈದಾನಕ್ಕೆ ನುಗ್ಗಿದ ಜಾರ್ವೊಗೆ(Jarvo 69) ಐಸಿಸಿ ಇನ್ನುಳಿದ ವಿಶ್ವಕಪ್(ICC World Cup 2023) ಪಂದ್ಯಗಳಿಗೆ ನಿಷೇಧ ಹೇರಿತ್ತು.. ಕಳೆದ ವರ್ಷ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗಲೂ ಜಾರ್ವೊ ಹಲವು ಬಾರಿ ಭಾರತದ ಜೆರ್ಸಿಯನ್ನು ತೊಟ್ಟು ಮೈದಾನಕ್ಕೆ ಪ್ರವೇಶ ಮಾಡಿದ್ದರು. ಇದೀಗ ತಮ್ಮ ಕಿತಾಪತಿಯನ್ನು ವಿಶ್ವಕಪ್ನಲ್ಲಿಯೂ ತೋರಿಸಿದ್ದರು.
ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಫೀಲ್ಡಿಂಗ್ ನಡೆಸುತ್ತಿರುವಾಗ ಜಾರ್ವೊ ಟೀಮ್ ಇಂಡಿಯಾದ ಜೆರ್ಸಿಯನ್ನು ತೊಟ್ಟು ನೇರವಾಗಿ ಮೈದಾನಕ್ಕೆ ಬಂದಿದ್ದಾರೆ. ಇದರಿಂದ ಕೆಲಕಾಲ ಪಂದ್ಯಕ್ಕೆ ಅಡಚಣೆಯಾಗಿದೆ. ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಜಾರ್ವೊಗೆ ಮೈದಾನದಿಂದ ಹೊರಹೋಗಲು ಹೇಳಿದರೂ ಆತ ಇದಕ್ಕೆ ಒಪ್ಪಲಿಲ್ಲ. ಬಳಿಕ ಮೈದಾನ ಸಿಬಂದಿಗಳು ಆತನನ್ನು ಹೊರ ಕಳುಹಿಸಿದ್ದಾರೆ.
ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್ ಡೇನಿಯಲ್ ಜಾರ್ವಿಸ್ (ಜಾರ್ವೊ) ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇಂಗ್ಲೆಂಡ್ನಲ್ಲಿ ಹಲವು ಬಾರಿ ಈ ರೀತಿ ಮಾಡಿ ಬಂಧನಕ್ಕೂ ಒಳಗಾಗಿದ್ದರು. ವಿಶ್ವಕಪ್ ಸಲುವಾಗಿ ಚೆಪಾಕ್ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿತ್ತು. ಆದರೂ ಸೆಕ್ಯೂರಿಟಿಗೆ ಜಾರ್ವೊ ಚಳ್ಳೆ ಹಣ್ಣು ತಿನ್ನಿಸಿ ಮೈದಾನ ಪ್ರವೇಶ ಮಾಡಿದ್ದಾನೆ.
69 ವರ್ಷದ ಈ ವ್ಯಕ್ತಿ ಭಾರತೀಯ ತಂಡದ ಜೆರ್ಸಿ ಧರಿಸಿಕೊಂಡು ಮೈದಾನಕ್ಕೆ ನುಗ್ಗಿ ತಾನು ಕೂಡ ಭಾರತದ ಆಟಗಾರ ಜತೆ ಕ್ರಿಕೆಟ್ ಆಡಬೇಕು ಎಂದು ಹಲವು ಬಾರಿ ಮೈದಾನಕ್ಕೆ ನುಗ್ಗಿದ್ದರು. ಆ ಬಳಿಕ ಅವರು ಜಾರ್ವೋ 69 ಎಂದೇ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆದರು.