ನವದೆಹಲಿ: ಭಾನುವಾರ ನಡೆದ ಸುದಿರ್ಮನ್ ಕಪ್ (sudirman cup 2023) ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತವು ಚೈನೀಸ್ ತೈಪೆ ವಿರುದ್ಧ 4-1 ಅಂತರದಿಂದ ಸೋಲು ಅನುಭವಿಸಿದೆ. ಮಹಿಳೆಯರ ಡಬಲ್ಸ್ನಲ್ಲಿ ತ್ರಿಸಾ ಜೊಲ್ಲಿ ಮತ್ತು ಗಾಯತ್ರಿ ಜೋಡಿ ಗೆಲ್ಲುವ ಮೂಲಕ ಮರ್ಯಾದೆ ಉಳಿಸಿದ್ದಾರೆ. ಈ ಸೋಲಿನೊಂದಿಗೆ ಭಾರತಕ್ಕೆ ನಿರಾಸೆಯ ಆರಂಭವನ್ನು ಪಡೆದುಕೊಂಡಿದೆ. ಆದಾಗ್ಯೂ ಕ್ವಾರ್ಟರ್ ಫೈನಲ್ಸ್ನಲ್ಲಿ ಅವಕಾಶ ಉಳಿಸಿಕೊಳ್ಳುವುದಕ್ಕೆ ಭಾರತಕ್ಕೆ ಇನ್ನೆರಡು ಅವಕಾಶಗಳಿವೆ. ಸೋಮವಾರ ಮಲೇಷ್ಯಾ ಹಾಗೂ ಬುಧವಾರ ಆಸ್ಟ್ರೇಲಿಯಾ ವಿರುದ್ಧದ ಮುಖಾಮುಖಿಯಲ್ಲಿ ಗೆಲ್ಲಬೇಕಾಗಿದೆ.
ಮೊದಲ ಹಣಾಹಣಿಯ ಮಿಶ್ರ ಡಬಲ್ಸ್ ಪಂದ್ಯದಲ್ಲಿ ತನಿಶಾ ಕ್ರಾಸ್ಟೊ ಮತ್ತು ಕೆ. ಸಾಯಿ ಪ್ರತೀಕ್ 21-18, 24-26, 6-21ರಿಂದ ಗೇಮ್ಗಳಿಂದ ವಿಶ್ವದ 30ನೇ ಶ್ರೇಯಾಂಕಿತ ಯಾಂಗ್ ಪೊ-ಹ್ಸುವಾನ್ ಮತ್ತು ಹು ಲಿಂಗ್ ಫಾಂಗ್ ವಿರುದ್ಧ ಸೋತರು. ಆತ್ಮವಿಶ್ವಾಸದೊಂದಿಗೆ ಆಡಿದ ಕ್ರಾಸ್ಟೋ ಮತ್ತು ಪ್ರತೀಕ್ ನಿಧಾನಗತಿಯ ಯೋಜನೆಯನ್ನು ಅನುಸರಿಸಿದರು. ಆದರೆ, ಅವರಿಗೆ ಸೋಲುಂಟಾಯಿತು.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಎಚ್ಎಚ್ ಪ್ರಣಯರ್ ಚೌ ಟಿಯೆನ್ 11-8, 21-19, 21-15 ಅಂಕಗಳಿಂದ ಸೋಲು ಕಂಡರು. ಮೊದಲ ಗೇಮ್ನಲ್ಲಿ 11-8 ರಿಂದ ಮುನ್ನಡೆ ಪಡೆದಿದ್ದ ಅವರು ನಂತರದ ಗೇಮ್ನಲ್ಲಿ ಭರ್ಜರಿ ಪೈಪೋಟಿ ನೀಡಿ 21-19 ರಿಂದ ಸೋತರು. ಆದರೆ 11-6 ಮತ್ತು 18-9 ರಿಂದ ಮುನ್ನಡೆ ಸಾಧಿಸಿದ್ದರೂ ಅಂತಿಮವಾಗಿ ಸೋಲು ಕಂಡರು. ಈ ವೇಳೆ ಭಾರತ 2-0 ಅಂತರದಿಂದ ಹಿನ್ನಡೆ ಕಂಡಿತು.
ಮೂರನೇ ಪಂದ್ಯದಲ್ಲಿ ಪಿ.ವಿ ಸಿಂಧೂ ಅವರು ತೈಜು ಯಿಂಗ್ ಮಹಿಳೆಯರ ಸಿಂಗಲ್ಸ್ನಲ್ಲಿ ಆಡಿದರು. ಇದು ಅವರಿಬ್ಬರ 23ನೇ ಮುಖಾಮುಖಿ. ಆದರೆ ಸಿಂಧು ಮತ್ತೆ ತೈಪೆ ಆಟಗಾರ್ತಿಯ ವಿರುದ್ಧ 14-21, 18-21, 17-21 ಗೇಮ್ಗಳಿಂದ ಸೋಲನುಭವಿಸಿದರು. ಸಿಂಧೂ ಕೂಡ ಮೊದಲ ಗೇಮ್ನಲ್ಲಿ ಉತ್ತಮವಾಗಿ ಆಡಿದರು. ಆದರೆ, ಎರಡನೇ ಗೇಮ್ನಲ್ಲಿ ಸೋತ ಅವರು ಮೂರನೇ ಪಂದ್ಯದಲ್ಲೂ ಅವರು ಇನ್ನಷ್ಟು ಸುಲಭವಾಗಿ ಸೋತರು.
ಇದನ್ನೂ ಓದಿ : Virushka: ಫಿಟ್ನೆಸ್ ಜಾಗೃತಿ; ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ಆಡಿದ ವಿರುಷ್ಕಾ ದಂಪತಿ
ತೈವಾನ್ 3-0 ಅಂತರದಿಂದ ಮುನ್ನಡೆ ಸಾಧಿಸಿದ ಬಳಿಕ ಪುರುಷರ ಡಬಲ್ಸ್ ಪಂದ್ಯದಲ್ಲೂ ಭಾರತದ ಜೋಡಿ ಸೋಲು ಕಂಡಿತು. ಒಲಿಂಪಿಕ್ ಚಾಂಪಿಯನ್ ಲೀ ಯಾಂಗ್, ಯೆ ಹಾಂಗ್ ವೀ ಜೋಡಿಯ ವಿರುದ್ಧ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಸೋಲು ಕಂಡರು. 13-21, 17-21 ಗೇಮ್ಗಳಿಂದ ಸೋಲು ಕಂಡರು. ಮೊದಲ ಗೇಮ್ನಲ್ಲಿ ಭಾರತೀಯ ಜೋಡಿ ಪ್ರತಿರೋಧವೇ ಒಡ್ಡಲಿಲ್ಲ. ಆದರೆ, ಎರಡನೇ ಗೇಮ್ನಲ್ಲಿ 17 ರತ ತನಕ ಅಂಕಗಳನ್ನು ಗಳಿಸಿದರು. ಅಲ್ಲಿಗೆ ಭಾರತ 4-0 ಹಿನ್ನಡೆ ಕಂಡರು.
ತಂಡದ ಕಿರಿಯ ಸದಸ್ಯರಾದ ತ್ರಿಸಾ ಜೊಲ್ಲಿ ಹಾಗೂ ಮತ್ತು ಗಾಯತ್ರಿ ಗೋಪಿಚಂದ್ ಪುಲ್ಲೇಲಾ ಅಂತಿಮವಾಗಿ ಲೀ ಚಿಯಾ ಹ್ಸಿನ್ ಮತ್ತು ಟೆಂಗ್ ಚುನ್ ಹ್ಸುನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತ ತಂಡದ ಮರ್ಯಾದೆ ಕಾಪಾಡಿದರು. ಈ ಜೋಡಿ 15-21, 21-18, 21-13 ಗೇಮ್ಗಳಿಂದ ಗೆಲುವು ಕಂಡರು.