ಮುಂಬಯಿ: ಭಾರತದ ಖ್ಯಾತ ಫುಟ್ಬಾಲ್(Indian football icon) ಆಟಗಾರ ಸುನೀಲ್ ಚೆಟ್ರಿ(Sunil Chhetri) ಅವರು ಫುಟ್‌ಬಾಲ್‌ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಜೂನ್ 6 ರಂದು ಕುವೈತ್(Kuwait) ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ(FIFA World Cup 2026 qualifier) ಪಂದ್ಯದ ನಂತರ ಚೆಟ್ರಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡುವ ಮೂಲಕ ಚೆಟ್ರಿ ತಮ್ಮ ನಿವೃತ್ತಿಯ ವಿಚಾರವನ್ನು ತಿಳಿಸಿದ್ದಾರೆ. ಭಾರತಕ್ಕಾಗಿ 145 ಪಂದ್ಯಗಳನ್ನು ಆಡಿರುವ ಅವರು 20 ವರ್ಷಗಳ ವೃತ್ತಿಜೀವನದಲ್ಲಿ 93 ಗೋಲುಗಳನ್ನು ಗಳಿಸಿದ್ದಾರೆ.
2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಪದಾರ್ಪಣೆ ಮಾಡಿದ ಸುನೀಲ್ ಚೆಟ್ರಿ 93 ಗೋಲು ದಾಖಲಿಸಿ ಅತ್ಯಧಿಕ ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ.
ಕೆಲವು ದಿನಗಳ ಹಿಂದೆಯೇ ಸುನೀಲ್ ಚೆಟ್ರಿ ಅವರ ನಿವೃತ್ತಿಯ ವಿಚಾರ ಮುನ್ನಕೆಗೆ ಬಂದಿತ್ತು. ಈ ವಿಚಾರವನ್ನು ಕೋಚ್ ಐಗರ್ ಸ್ಟಿಮ್ಯಾಕ್ ಹೇಳಿದ್ದರು. “ಸುನೀಲ್ ಚೆಟ್ರಿ ಅವರಿಗೆ ಈಗ 38 ವಯಸ್ಸಾಗಿದೆ. ಇದು ಅವರಿಗೂ ಅರಿವಿಗೂ ಬಂದಿದೆ. ಇಷ್ಟು ವಯಸ್ಸಿನಲ್ಲಿ ಅವರಿಗೆ 90 ನಿಮಿಷಗಳ ಆಟ ಆಡಲು ದೇಹ ಸ್ಪಂದಿಸುವುದು ಕೂಡ ಕಷ್ಟಕರ. ಅವರು ಭಾರತ ಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ನನ್ನ ಪ್ರಕಾರ ಈ ಬಾರಿ ಏಷ್ಯಾ ಕಪ್ ಅವರ ವಿದಾಯದ ಋತು ಆಗಿರುವ ಸಾಧ್ಯತೆಯೇ ಹೆಚ್ಚು ಎಂಬುದಾಗಿ ಸ್ಟಿಮ್ಯಾಕ್ ಹೇಳಿದ್ದರು. ಇದೀಗ ಅಂತಿಮವಾಗಿ ಚೆಟ್ರಿ ತಮ್ಮ ನಿವೃತ್ತಿ ನಿರ್ಧಾರವನ್ನು ಕೈಗೊಂಡಿದ್ದಾರೆ.
“ನಾನು ಎಂದಿಗೂ ಮರೆಯದ ಮತ್ತು ಆಗಾಗ ನೆನಪಿಸಿಕೊಳ್ಳುವ ಒಂದು ದಿನವಿದೆ, ಅದು ನಾನು ನನ್ನ ದೇಶಕ್ಕಾಗಿ ಆಡಿದ ಮೊದಲ ಪಂದ್ಯ. ಅದು ನಂಬಲಸಾಧ್ಯವಾಗಿತ್ತು. ಆ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ ಮತ್ತು ನನ್ನ ಅತ್ಯುತ್ತಮ ದಿನಗಳಲ್ಲಿ ಒಂದಾಗಿದೆ” ಎಂದು ಚೆಟ್ರಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ನಾನು ದೆಹಲಿಯಲ್ಲಿ ಸುಬ್ರೊಟೊ ಕಪ್ ಆಡುವಾಗ, ದೇಶಕ್ಕಾಗಿ ಆಡುತ್ತೇನೆ ಎಂದು ನಾನು ಭಾವಿಸಿರಲಿಲ್ಲ ಅಥವಾ ಕನಸು ಕಾಣಲಿಲ್ಲ. ಕ್ಲಬ್‌ಗಾಗಿ ಆಡುವ ವೃತ್ತಿಪರ ಸೆಟಪ್ ತುಂಬಾ ದೂರವಾಗಿತ್ತು. ಏಕೆಣದರೆ ಆ ದಿನಗಳಲ್ಲಿ ಅದು ಬಹಳ ಕಷ್ಟಕರವಾಗಿತ್ತು. ಹಾಗಾಗಿ ನಾನು ಆಡುವ ಕನಸು ಕಾಣಲಿಲ್ಲ. ಆದರೆ ದೇವರ ದಯೆಯಿಂದ ನನಗೆ ಈ ಅವಕಾಶ ಒದಗಿ ಬಂತು. ದೇಶವನ್ನು ಪ್ರತಿನಿಧಿಸುವ ಪ್ರತಿ ಕ್ಷಣವೂ ಕೂಡ ವಿಶೇಷ” ಎಂದರು.
ಜೂನ್ 12, 2005 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ಹಿರಿಯ ರಾಷ್ಟ್ರೀಯ ತಂಡದ ಜರ್ಸಿಯನ್ನು ತೊಟ್ಟಿದ್ದರು. ಆ ಪಂದ್ಯ 1-1 ಡ್ರಾದಲ್ಲಿ ಅತ್ಯಂಕಡಿತ್ತು. ಭಾರತದ ಈ ಒಂದು ಗೋಲ್ ಬಾರಿಸಿದ್ದು ಚೆಟ್ರಿ. ಅಂದಿನಿಂದ, ಅವರು ಇದುವರೆಗೂ ರಾಷ್ಟ್ರೀಯ ತಂಡದ ಪರ ಹಲವು ಸಾಧನೆ ಮಾಡಿದ್ದಾರೆ.
“ಕಳೆದ 19 ವರ್ಷಗಳಲ್ಲಿ ನಾನು ನೆನಪಿಸಿಕೊಳ್ಳುವ ಭಾವನೆಯು ಕರ್ತವ್ಯದ ಒತ್ತಡ ಮತ್ತು ಅಪಾರ ಸಂತೋಷದ ನಡುವಿನ ಉತ್ತಮ ಸಂಯೋಜನೆಯಾಗಿದೆ ಎಂದು ನಿಮಗೆ ತಿಳಿದಿದೆ. ನಾನು ವೈಯಕ್ತಿಕವಾಗಿ ಎಂದಿಗೂ ಯೋಚಿಸಲಿಲ್ಲ, ಇವು ದೇಶಕ್ಕಾಗಿ ನಾನು ಆಡಿದ ಹಲವಾರು ಆಟಗಳಾಗಿವೆ” ಎಂದರು.
“ನಾನು ನನ್ನ ತಾಯಿ, ತಂದೆ ಮತ್ತು ನನ್ನ ಹೆಂಡತಿ, ಕುಟುಂಬ ಮತ್ತು ಸಹ ಆಟಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ನಾನು ಒತ್ತಡದಲ್ಲಿದ್ದ ವೇಳೆ ಇವರೆಲ್ಲ ನನ್ನ ಜತೆಗಿದ್ದು ನನ್ನನು ಬೆಂಬಲಿಸಿದ್ದಾರೆ. ದೇಶಕ್ಕಾಗಿ ಒಷ್ಟು ವರ್ಷ ಆಡಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ” ಎಂದರು.