ನವದೆಹಲಿ: 2023 ರಲ್ಲಿ ಭಾರತದ (Team India) ಅತ್ಯುತ್ತಮ ಪ್ರದರ್ಶನ ನೀಡಿದ ಹಲವಾರು ಆಟಗಾರರನ್ನು ಭಾರತದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಸುನೀಲ್ ಗವಾಸ್ಕರ್ ಆಯ್ಕೆ ಮಾಡಿದ್ದಾರೆ. ಆದರಲ್ಲೂ ಬೆನ್ನು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ಜಸ್ಪ್ರೀತ್ ಬುಮ್ರಾ ಅವರ ಗಮನಾರ್ಹ ಪುನರಾಗಮನದಿಂದ ಭಾರತದ ಮಾಜಿ ನಾಯಕ ವಿಶೇಷವಾಗಿ ಪ್ರಭಾವಿತರಾಗಿದ್ದಾರೆ.
ಐರ್ಲೆಂಡ್ನಲ್ಲಿ ನಡೆದ ಟಿ 20 ಪಂದ್ಯಗಳಲ್ಲಿ ಬುಮ್ರಾ ತಮ್ಮ ಶಕ್ತಿ ಪ್ರದರ್ಶಿಸಿದ್ದರು. ಇದು ಭಾರತೀಯ ಕ್ರಿಕೆಟ್ ತಂಡಕ್ಕೆ ಅದ್ಭುತ ಪುನರಾಗಮನವಾಗಿದೆ. 2023ರಲ್ಲಿ ಭಾರತದ ವೇಗಿ 16 ಏಕದಿನ ಪಂದ್ಯಗಳಲ್ಲಿ 4.40 ರ ಅತ್ಯುತ್ತಮ ಎಕಾನಮಿ ರೇಟ್ನಲ್ಲಿ 28 ವಿಕೆಟ್ಗಳನ್ನು ಉರುಳಿಸಿದ್ದಾರೆ. ಅವರು ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲ ಸ್ವರೂಪದಲ್ಲಿ 4 ವಿಕೆಟ್ಗಳ ಗೊಂಚಲನ್ನು ಪಡೆದಿದ್ದಾರೆ.
2023ರಲ್ಲಿ ಭಾರತಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡಿದರವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟ ಎಂದು ಗವಾಸ್ಕರ್ ಒಪ್ಪಿಕೊಂಡಿದ್ದಾರೆ. ಆದರೆ ಅವರು ಬುಮ್ರಾ, ಶುಭ್ಮನ್ ಗಿಲ್, ಮೊಹಮ್ಮದ್ ಶಮಿ, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಗವಾಸ್ಕರ್ ಪಟ್ಟಿಯಲ್ಲಿದ್ದಾರೆ.
ಆಯ್ಕೆ ಕಠಿಣ
ಸ್ಟಾರ್ ಸ್ಪೋರ್ಟ್ಸ್ ಶೋ ‘ಫಾಲೋ ದಿ ಬ್ಲೂಸ್’ ನಲ್ಲಿ ಸುನಿಲ್ ಗವಾಸ್ಕರ್ ಅಭಿಪ್ರಾಯ ಹೀಗಿತ್ತು. ಇದು ಕಠಿಣವಾಗಿದೆ ಏಕೆಂದರೆ ಸಾಕಷ್ಟು ಸ್ಪರ್ಧಿಗಳು ಇದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಶುಬ್ಮನ್ ಗಿಲ್, ಮೊಹಮ್ಮದ್ ಶಮಿ ಬೌಲಿಂಗ್ ಮಾಡಿದ ರೀತಿ, ಮೊಹಮ್ಮದ್ ಸಿರಾಜ್ ಕ್ರಮವಾಗಿ ವಿಶ್ವಕಪ್ ಹಾಗೂ ವಿಶ್ವ ಕಪ್ನಲ್ಲಿ ಮಿಂಚಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : IPL 2024 : ಲಕ್ನೊ ತಂಡದೊಳಗೆ ಭರ್ಜರಿ ಸರ್ಜರಿ, ತಂಡದಿಂದ ಮತ್ತೊಬ್ಬರ ನಿರ್ಗಮನ
ಜಸ್ಪ್ರೀತ್ ಬುಮ್ರಾ ಅವರ ಪುನರಾಗಮನ ಮತ್ತು ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅವರ ಅಸಾಮಾನ್ಯ ಬ್ಯಾಟಿಂಗ್ ಅನ್ನೂ ಗವಾಸ್ಕರ್ ಸ್ಮರಿಸಿಕೊಂಡಿದ್ದಾರೆ. ಕೊಹ್ಲಿ ಒಂಬತ್ತು ಅಥವಾ 10 ಇನಿಂಗ್ಸ್ಗಳಲ್ಲಿ ಮೂರು ಶತಕಗಳು ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ.
ಪಠಾಣ್ ಆಯ್ಕೆ ಇಂತಿದೆ
ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಶುಭ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅವರನ್ನು 2023 ರ ಭಾರತದ ಅತ್ಯುತ್ತಮ ಕ್ರಿಕೆಟಿಗರು ಎಂದು ಆಯ್ಕೆ ಮಾಡಿದ್ದಾರೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಗೆ ಮೊಹಮ್ಮದ್ ಶಮಿ ಅವರ ಗಮನಾರ್ಹ ಕೊಡುಗೆಯನ್ನು ಪಠಾಣ್ ಎತ್ತಿ ತೋರಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಪಠಾಣ್, “ನಾವು ವರ್ಷದ ಉತ್ತಮ ಪ್ರದರ್ಶಕರಿಗಾಗಿ ಹುಡುಕಾಡಿದರೆ ಶುಭ್ಮನ್ ಗಿಲ್ ಅವರ ಹೆಸರು ಖಂಡಿತವಾಗಿಯೂ ಮುಂಚೂಣಿಯಲ್ಲಿ ಇರುತ್ತದೆ. ಕೆಎಲ್ ರಾಹುಲ್ – ಅವರು ಏಕದಿನ ಕ್ರಿಕೆಟ್ನಲ್ಲಿ 70 ಸರಾಸರಿಯನ್ನು ಹೊಂದಿದ್ದರು. ಗಾಯದಿಂದ ಮರಳಿದ್ದ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಾರೆ.
ರಾಹುಲ್ ಅವರ ಸೆಂಚೂರಿಯನ್ ಶತಕವನ್ನು ಮುಂಬರುವ ವರ್ಷಗಳಲ್ಲಿ ವಿಶೇಷವೆಂದು ಪರಿಗಣಿಸಲಾಗುವುದು. ವಿಶ್ವಕಪ್ನಲ್ಲಿ ಮೊಹಮ್ಮದ್ ಶಮಿ ತಮ್ಮ ಸಾಮಾನ್ಯ ಸ್ಥಾನದಲ್ಲಿ ಬೌಲಿಂಗ್ ಮಾಡದ ಕಾರಣ ಮೂರನೇ ಆಟಗಾರ ಎಂದು ನಾನು ಭಾವಿಸುತ್ತೇನೆ ಎಂದು ಪಠಾಣ್ ಹೇಳಿದ್ದಾರೆ.