Site icon Vistara News

ಕ್ರಿಕೆಟ್​ ಲೆಜೆಂಡ್​ ಗವಾಸ್ಕರ್​ ಎದೆ ಮೇಲೆ ಆಟೋಗ್ರಾಫ್​ ಹಾಕಿದ ಕೂಲ್​ ಕ್ಯಾಪ್ಟನ್​ ಎಂ​ ಎಸ್​ ಧೋನಿ

Sunil gavaskar. MS Dhoni

#image_title

ಚೆನ್ನೈ: ಐಪಿಎಲ್​ 16ನೇ ಆವೃತ್ತಿಯ 61ನೇ ಪಂದ್ಯ ಮುಕ್ತಾಯಗೊಂಡ ಬಳಿಕ ಸ್ಟೇಡಿಯಮ್​ನಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆಯಿತು. ಟೂರ್ನಿಯಲ್ಲಿ ತವರಿನ ಸ್ಟೇಡಿಯಮ್​ನಲ್ಲಿ ಕೊನೇ ಪಂದ್ಯವಾಡಿದ ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ಮಹೇಂದ್ರ ಸಿಂಗ್​ ಧೋನಿ ಎಲ್ಲರಿಗೂ ಆಟೋಗ್ರಾಫ್​ ನೀಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಭಾರತೀಯ ಕ್ರಿಕೆಟ್ ಕ್ಷೇತ್ರದ ಮಾಜಿ ದಿಗ್ಗಜ ಸುನೀಲ್​ ಗವಾಸ್ಕರ್ ಅವರು ತಾವೂ ಎದೆ ಮೇಲೆ ಹಸ್ತಾಕ್ಷರ ಪಡೆದುಕೊಂಡರು. ಈ ಕ್ಷಣ ಕ್ರಿಕೆಟ್ ಕ್ಷೇತ್ರದ ಅತ್ಯಂತ ಭಾವಾನಾತ್ಮಕ ಹಾಗೂ ಗೌರವ ಪೂರ್ವಕ ಕ್ಷಣ ಎನಿಸಿಕೊಂಡಿತು.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಇಬ್ಬರು ದಂತಕಥೆಗಳನ್ನು ಹುರಿದುಂಬಿಸುತ್ತಿದ್ದಂತೆ ಎಂಎಸ್ ಧೋನಿ ಸುನಿಲ್ ಗವಾಸ್ಕರ್ ಅವರ ಶರ್ಟ್​​ ಮೇಲೆ ಸಹಿ ಹಾಕಿದರು. ಐಪಿಎಲ್​ನ ಅಧಿಕೃತ ನೇರ ಪ್ರಸಾರ ಸಂಸ್ಥೆಯಾಗಿರುವ ಸ್ಟಾರ್​ ಸ್ಪೋರ್ಟ್ಸ್​ನ ಕರ್ತವ್ಯದಲ್ಲಿದ್ದರು. ಧೋನಿ ಮೈದಾನ ತೊರೆಯುವ ಮೂಲಕ ಸ್ಥಳೀಯ ಪ್ರೇಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಬ್ಯಾಟಿಂಗ್ ದಂತಕಥೆ ಗವಾಸ್ಕರ್​ ತಮ್ಮ ಎದೆ ಮೇಲೆ ಹಸ್ತಾಕ್ಷರ ಹಾಕುವಂತೆ ಕೋರಿಕೊಂಡರು.

ಕಿಕ್ಕಿರಿದು ತುಂಬಿದ್ದ ಚೆಪಾಕ್ ಆಟಗಾರರು ರೋಮಾಂಚನಗೊಂಡರೆ, ಬ್ಯಾಟಿಂಗ್ ದಂತಕಥೆ ಗವಾಸ್ಕರ್ ಧೋನಿ ಬಳಿ ಬಂದು ವಿಶೇಷ ಆಟೋಗ್ರಾಫ್ ಪಡೆದರು. ಬ್ಯಾಟಿಂಗ್ ದಂತಕಥೆಯ ವಿನಂತಿಯನ್ನು ಒಪ್ಪಿಕೊಂಡ ಧೋನಿ ಅವರು ಗವಾಸ್ಕರ್ ಅವರ ಶರ್ಟ್​​ಗೆ ಸಹಿ ಹಾಕಿದರು.

ಚೆಪಾಕ್​ನ ತವರಿನ ಅಭಿಮಾನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಧೋನಿ ಟೆನಿಸ್​ ರ್ಯಾಕೆಟ್​ ಮೂಲಕ ಪ್ರೇಕ್ಷಕರಿಗೆ ಕೆಲವು ಚೆಂಡುಗಳನ್ನು ಹೊಡೆದರು. ಚೆಪಾಕ್​ನಲ್ಲಿ ಜರ್ಸಿಗಳನ್ನು ಎಸೆಯುವುದರಿಂದ ಹಿಡಿದು ಪೊಲೀಸರೊಂದಿಗೆ ಕೈಕುಲುಕಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗವಾಸ್ಕರ್, ಸಿಎಸ್​ಕೆ ತಂಡ ಕೊನೇ ಪಂದ್ಯ ಆಡುತ್ತಿದೆ ಎಂಬ ಕಾರಣಕ್ಕೆ ಮೊದಲೇ ಪೆನ್​ ಸಿದ್ಧಪಡಿಸಿಕೊಂಡಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : IPL 2023 : ಧೋನಿಯ ತಂತ್ರಗಾರಿಕೆಯನ್ನು ಸಿಕ್ಕಾಪಟ್ಟೆ ಹೊಗಳಿದ ಮಹಿಳಾ ಕ್ರಿಕೆಟರ್​

ಮಹೇಂದ್ರ ಸಿಂಗ್​ ಧೋನಿ ಆಟೋಗ್ರಾಫ್ ಅನ್ನು ಪ್ರದರ್ಶಿಸುತ್ತಿದ್ದಂತೆ ಗವಾಸ್ಕರ್ ಕ್ಯಾಮೆರಾಮನ್ ಗೆ ತಮ್ಮ ಶರ್ಟ್ ಗೆ ಜೂಮ್ ಮಾಡಲು ಅವಕಾಶ ನೀಡಿದರು.

“ಯಾರು ಧೋನಿಯನ್ನು ಪ್ರೀತಿಸುವುದಿಲ್ಲ? ಹಲವು ವರ್ಷಗಳಿಂದ ಅವರು ಭಾರತೀಯ ಕ್ರಿಕೆಟ್​ಗೆ ನೀಡಿದ್ದೆಲ್ಲೂ ಅದ್ಭುತ ಕೊಡುಗೆಗಳು. ಎಲ್ಲಕ್ಕಿಂತ ಮುಖ್ಯವಾದುದು ಅವರು ಎಲ್ಲರಿಗೂ ರೋಲ್ ಮಾಡೆಲ್ ಆಗಿದ್ದಾರೆ. ಅನೇಕ ಯುವ ಕ್ರಿಕೆಟಿಗರು ಅವರನ್ನು ನೋಡಿ ಕಲಿಯುತ್ತಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್​ಗಳಿಂದ ಸೋಲು ಅನುಭವಿಸಿದರೂ ಧೋನಿ ಹಸ್ತಾಕ್ಷರ ನೀಡಿದ ಕ್ಷಣ ಗಮನ ಸೆಳೆಯಿತು.

ಮಹೇಂದ್ರ ಸಿಂಗ್​ ಧೋನಿ ಅವರಿಗೆ ಇದು ಕೊನೆಯ ಐಪಿಎಲ್. ಈ ಸೀಸನ್ ಬಳಿಕ ಧೋನಿ ಕ್ರಿಕೆಟ್ ಲೋಕದಿಂದ ದೂರವಾಗಲಿದ್ದಾರಂತೆ ಸದ್ಯ ಚೆನ್ನೈ ಆಡಿರುವ 13 ಪಂದ್ಯಗಳಲ್ಲಿ 7 ಗೆಲುವು, 5 ಸೋಲು ಕಂಡು 15 ಅಂಕ ಸಂಪಾದಿಸಿ ದ್ವಿತೀಯ ಸ್ಥಾನದಲ್ಲಿದೆ. ಸಿಎಸ್​ಕೆ ಇನ್ನೂ ಪ್ಲೇ ಆಫ್​ಗೆ ಲಗ್ಗೆಯಿಟ್ಟಿಲ್ಲ. ಒಂದು ವೇಳೆ ಪ್ಲೇ ಆಫ್ ಪ್ರವೇಶಿಸಲು ವಿಫಲವಾದರೆ ಭಾನುವಾರ ನಡೆದ ಪಂದ್ಯ ಚೆಪಾಕ್​ನಲ್ಲಿ ಕೊನೆಯ ಮ್ಯಾಚ್ ಆಗಲಿದೆ.

Exit mobile version