ಮುಂಬಯಿ: ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಭಾನುವಾರ ನಡೆದ ಐಪಿಎಲ್ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ತಂಡ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ ಐದು ವಿಕೆಟ್ಗಳ ವಿಜಯ ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಫಾರ್ಮ್ಗೆ ಮರಳಿ 25 ಎಸೆತಗಳಲ್ಲಿ 43 ರನ್ ಬಾರಿಸಿದ್ದರು. ಅದೇ ರೀತಿ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ವೆಂಕಟೇಶ್ ಅಯ್ಯರ್ (104 ರನ್) ಚೊಚ್ಚಲ ಶತಕವನ್ನು ಬಾರಿಸಿದ್ದರು. ಈ ಎರಡು ಸಾಧನೆಗಳ ನಡುವೆ ವೆಸ್ಟ್ ಇಂಡೀಸ್ ತಂಡದ ಸ್ಪಿನ್ ಬೌಲರ್ ಸುನೀಲ್ ನರೈನ್ ಐಪಿಎಲ್ ಇತಿಹಾಸದಲ್ಲಿ ವೈಯಕ್ತಿಕ ಕಳಪೆ ದಾಖಲೆಯೊಂದನ್ನು ಮಾಡಿದ್ದಾರೆ.
ಸುನೀಲ್ ನರೈನ್ ಈ ಪಂದ್ಯದಲ್ಲಿ ಮೂರು ಓವರ್ಗಳ ಸ್ಪೆಲ್ ಎಸೆದಿದ್ದರು. 18 ಎಸೆತಗಳಲ್ಲಿ ಅವರು 41 ರನ್ ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಇದುವರೆಗಿನ ತಮ್ಮ ಐಪಿಎಲ್ ಅನುಭವದಲ್ಲಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟಿರುವ ಕಳಪೆ ದಾಖಲೆ ಮಾಡಿದರು.
ಸುನೀಲ್ ನೈರನ್ ಐಪಿಎಲ್ನಲ್ಲಿ ಅತಿ ಕಡಿಮೆ 13.66 ಎಕಾನಮಿಯನ್ನು ಹೊಂದಿರುವ ಬೌಲರ್. ಈ ಹಿಂದೆ ಅವರು 2019ರ ಐಪಿಎಲ್ ಹಾಗೂ 2020ರ ಐಪಿಎಲ್ನಲ್ಲಿ ಕ್ರಮವಾಗಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಓವರ್ ಒಂದಕ್ಕೆ 13 ರನ್ಗಳಿಂತೆ ಬಾರಿಸಿತ್ತು.
ಇದನ್ನೂ ಓದಿ : IPL 2023: ಗಾಯದ ಮಧ್ಯೆಯೂ ಶತಕ ಸಿಡಿಸಿದ ವೆಂಕಟೇಶ್ ಅಯ್ಯರ್; ಮುಂಬೈ ಗೆಲುವಿಗೆ 186 ರನ್ ಸವಾಲು
ಕೋಲ್ಕೊತಾ ತಂಡದ ಈ ಬಲಗೈ ಸ್ಪಿನ್ನರ್ ಹಾಲಿ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು 8.31 ಎಕಾನಮಿ ರೇಟ್ನಂತೆ ಆರ್ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂತೆಯೆ ಒಟ್ಟಾರೆ 153 ಐಪಿಎಲ್ ಪಂದ್ಯಗಳನ್ನು ಆಡಿರುವ ಸುನೀಲ್ ನೈರನ್ 158 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಅವರು ಎಕಾನಮಿ ರೇಟ್ನಲ್ಲಿ ಎರಡನೇ ಸ್ಥಾನ ಹಾಗೂ ಅತಿ ಹೆಚ್ಚು ವಿಕೆಟ್ ಪಡೆದಿರುವ ಸಾಲಿನಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದಾರೆ.
ಏತನ್ಮಧ್ಯೆ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 6 ವಿಕೆಟ್ಗೆ 185 ರನ್ ಬಾರಿಸಿತು. ಇದೇ ವೇಳೆ ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್ ತಮ್ಮ ಮೊದಲ ಐಪಿಎಲ್ ಶತಕವನ್ನು ದಾಖಲಿಸಿದರು. ಆದರೆ ಇಶಾನ್ ಕಿಶನ್ 25 ಎಸೆತಗಳಲ್ಲಿ 58 ಮತ್ತು ಸೂರ್ಯಕುಮಾರ್ ಅವರ 43 ರನ್‌ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ಗುರಿಯನ್ನು 14 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು. ಕೋಲ್ಕತ್ತಾ ಪರ, ಸುಯಾಶ್ ಶರ್ಮಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.