Site icon Vistara News

IPL 2023: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಹೈದರಾಬಾದ್​

Sunrisers Hyderabad vs Lucknow Super Giants

ಹೈದರಾಬಾದ್​: ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಟಾಸ್​ ಗೆದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಹೈದರಾಬಾದ್‌ಗೆ ಪ್ಲೇ ಆಫ್ ಬಾಗಿಲು ಬಹುತೇಕ ಮುಚ್ಚಿದೆಯಾದರೂ ಲಕ್ನೋಗೆ ಮೇಲೇರಲು ಈ ಪಂದ್ಯ ಮಹತ್ವದ್ದಾಗಿದೆ.

ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಇತ್ತಂಡಗಳ ಹೋರಾಟ ನಡೆಯುತ್ತಿದೆ. ಹೈದರಾಬಾದ್​ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದರೆ, ಲಕ್ನೋ ತಂಡ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಪಂದ್ಯದ ಲೆಕ್ಕಾಚಾರದಲ್ಲಿ ಹೈದರಾಬಾದ್​ ಕಡಿಮೆ ಪಂದ್ಯ ಆಡಿದೆ. ಲಕ್ನೋಗೆ ಇದು 12ನೇ ಪಂದ್ಯವಾದರೆ ಹೈದರಾಬಾದ್ 11ನೇ ಪಂದ್ಯ.

ನಾಯಕ ರಾಹುಲ್​ ಅವರು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದು ಆಘಾತದಲ್ಲಿರುವ ಲಕ್ನೋ ತಂಡಕ್ಕೆ ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ರಾಹುಲ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಕೃಣಾಲ್​ ಪಾಂಡ್ಯ ಅವರು ತಮ್ಮ ಹಾರ್ದಿಕ್​ ಪಾಂಡ್ಯರಂತೆ ಉತ್ತಮ ಯೋಜನೆ ರೂಪಿಸಬೇಕಿದೆ. ಗುಜರಾತ್​ ವಿರುದ್ಧ ಆಡುವ ಮೂಲಕ ಈ ಆವೃತ್ತಿಯ ಮೊದಲ ಐಪಿಎಲ್​ ಪಂದ್ಯವನ್ನಾಡಿದ ಕ್ವಿಂಟನ್​ ಡಿ ಕಾಕ್​ ಅವರ ಮೇಲೆ ತಂಡ ಈ ಪಂದ್ಯದಲ್ಲಿಯೂ ಹೆಚ್ಚಿನ ನಿರೀಕ್ಷೆ ಇರಿಸಿದೆ.

ಸಂಭಾವ್ಯ ತಂಡ

ಲಕ್ನೋ ಸೂಪರ್ ಜೈಂಟ್ಸ್: ಕೈಲ್ ಮೇಯರ್ಸ್, ಕ್ವಿಂಟನ್​ ಡಿ ಕಾಕ್​, ಮನನ್ ವೋಹ್ರಾ, ಆಯುಷ್ ಬದೋನಿ, ಮಾರ್ಕಸ್ ಸ್ಟೊಯ್ನಿಸ್​, , ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ (ನಾಯಕ), ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಅಮಿತ್​ ಮಿಶ್ರಾ.

ಇದನ್ನೂ ಓದಿ IPL 2023: ಪ್ಲೇ ಆಫ್​ಗೇರಲು ಚೆನ್ನೈಗೆ ಇನ್ನೊಂದೆ ಹೆಜ್ಜೆ ಬಾಕಿ; ಕೆಕೆಆರ್​ ಎದುರಾಳಿ

ಸನ್​ರೈಸರ್ಸ್​ ಹೈದರಾಬಾದ್:​ ಹ್ಯಾರಿ ಬ್ರೂಕ್, ಅಭಿಷೇಕ್ ಶರ್ಮಾ/ಮಯಾಂಕ್​ ಅಗರ್ವಾಲ್​, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಮ್​ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್.

Exit mobile version