Site icon Vistara News

ಕ್ರಿಕೆಟ್​ ಇತಿಹಾಸದ ಅತ್ಯದ್ಭುತ​ ಕ್ಯಾಚ್ ಕಂಡು ಸ್ಟನ್​ ಆದ ಕ್ರಿಕೆಟ್​ ಜಗತ್ತು!; ಇಲ್ಲಿದೆ ವಿಡಿಯೊ

Nick Kelly

ಸಿಡ್ನಿ: ಸೂಪರ್ ಸ್ಮ್ಯಾಶ್ ಲೀಗ್​ನಲ್ಲಿ(Super Smash) ವೆಲ್ಲಿಂಗ್ಟನ್ ನಾಯಕ ನಿಕ್ ಕೆಲ್ಲಿ(Wellington captain Nick Kelly) ಮತ್ತು ಟ್ರಾಯ್ ಜಾನ್ಸನ್(Troy Johnson) ಸೇರಿ ಹಿಡಿದ ಕ್ಯಾಚ್​ ಒಂದರ ವಿಡಿಯೊ ಬಾರಿ ವೈರಲ್(viral video)​ ಆಗಿದೆ. ಈ ಕ್ಯಾಚನ್ನು ಗ್ರೇಟೆಸ್ಟ್​ ಕ್ಯಾಚ್ ಆಫ್​ ಆಲ್​ ಟೈಮ್​​ ಎಂದು ಹಲವು ಕ್ರಿಕೆಟ್ ಪಂಡಿತರು ಬಣ್ಣಿಸಿದ್ದಾರೆ.

ಶನಿವಾರ ನಡೆದ ಸೆಂಟ್ರಲ್ ಡಿಸ್ಟ್ರಿಕ್ಟ್ ವಿರುದ್ಧದ ಪಂದ್ಯದಲ್ಲಿ ನಿಕ್ ಕೆಲ್ಲಿ ಮತ್ತು ಟ್ರಾಯ್ ಜಾನ್ಸನ್ ಅವರು ಅತ್ಯದ್ಭುತ ರೀತಿಯ ಕ್ಯಾಚ್ ಪಡೆದು ಮಿಂಚಿದರು. ಸೆಂಟ್ರಲ್ ಡಿಸ್ಟ್ರಿಕ್ಟ್‌ ತಂಡದ ಆರಂಭಿಕ ಆಟಗಾರ ವಿಲ್ ಯಂಗ್ ಚೆಂಡನ್ನು ನೇರವಾಗಿ ಲಾಂಗ್ ಆನ್ ಕಡೆಗೆ ಬಾರಿಸಿದರು. ಮಿಡ್-ಆನ್​ನಲ್ಲಿ ಫೀಲ್ಡಿಂಗ್​ ನಡೆಸುತ್ತಿದ್ದ ನಿಕ್ ಕೆಲ್ಲಿ ಚೆಂಡನ್ನು ಹಿಡಿಯಲು ಚಿರತೆ ಬೇಗದಲ್ಲಿ ಹಿಮ್ಮುಖವಾಗಿ ಓಡಿದರು.

ಚೆಂಡನ್ನು ಹಿಡಿಯುವಲ್ಲಿ ನಿಕ್ ಕೆಲ್ಲಿ ಯಶಸ್ವಿಯಾದರೂ ಕೂಡ ಓಡಿದ ವೇಗಕ್ಕೆ ನಿಯಂತ್ರಣ ಕಳೆದುಕೊಂಡು ಬೌಂಡರಿ ಲೈನ್​ನಿಂದ ಹೊರಗೋಗುವುದನ್ನು ಮನಗಂಡ ಅವರು ಕಣ್​ ರೆಪ್ಪೆ ಮಿಟುಕಿಸುವಷ್ಟರಲ್ಲಿ ಉಲ್ಟಾ ಪಟ್ಟಿ ಹೊಡೆದು ಚೆಂಡನ್ನು ಮೈದಾನದ ಒಳಗೆ ಫಿಲ್ಡಿಂಗ್​ ನಡಸುತ್ತಿದ್ದ ಜಾನ್ಸನ್ ಕಡೆಗೆ ಎಸೆದರು. ಜಾನ್ಸನ್ ಕ್ಯಾಚ್​ ಪಡೆದರು. ವಿಲ್​ ಯಂಗ್​ ವಿಕೆಟ್​ ಕೈಚೆಲ್ಲಿದರು. ಈ ಕ್ಯಾಚ್​ ಕಂಡು ಒಂದು ಕ್ಷಣ ಸ್ಟೇಡಿಯಂಮಲ್ಲಿದ್ದ ಪ್ರೇಕ್ಷಕರು ದಂಗಾದರು. ಅತ್ತ ಕಾಮೆಂಟ್ರಿ ಮಾಡುತ್ತಿದ್ದವರು ಕೂಡ ದಿಗ್ಭ್ರಮೆಗೊಂಡರು. ಈ ವಿಡಿಯೊ ವೈರಲ್​ ಆಗಿದೆ.


ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಲ್ಲಿಂಗ್ಟನ್ ಬೇಸಿನ್ ರಿಸರ್ವ್‌ನಲ್ಲಿ 8 ವಿಕೆಟ್​ಗೆ 147 ಸಾಧಾರಣ ಮೊತ್ತವನ್ನು ದಾಖಲಿಸಿತು. ಗುರಿ ಬೆನ್ನಟ್ಟಿದ ಸೆಂಟ್ರಲ್ ಡಿಸ್ಟ್ರಿಕ್ಟ್ ತಂಡ 16.5 ಓವರ್​ಗಳಲ್ಲಿ 4 ವಿಕೆಟ್​ಗೆ 148 ರನ್​ ಬಾರಿಸಿ ಗೆಲುವು ಸಾಧಿಸಿತು.

ಇಂದೋರ್​ನಲ್ಲಿ ಇಳಿದ ತಕ್ಷಣ ಎಳನೀರು ಕುಡಿದ ರೋಹಿತ್ ಶರ್ಮಾ


ಅಫಘಾನಿಸ್ತಾನ ವಿರುದ್ಧ ಇಂದು ನಡೆಯುವ ದ್ವಿತೀಯ ಟಿ20 ಪಂದ್ಯಕ್ಕಾಗಿ ಟೀಮ್ ಇಂಡಿಯಾ ಶನಿವಾರ ಇಂದೋರ್​ಗೆ ಬಂದಿಳಿದಿದೆ. ಈ ವೇಳೆ ನಾಯಕ ರೋಹಿತ್ ಶರ್ಮಾ ಅವರು ಎಳನೀರು ಕುಡಿಯುತ್ತಿರುವ ವಿಡೊಯೊ ವೈರಲ್​ ಆಗಿದೆ.

Exit mobile version