Site icon Vistara News

Suresh Raina | ಐಪಿಎಲ್‌ಗೂ ಗುಡ್ ಬೈ ಹೇಳಿದ ‘ಒಡಿಐ ಸ್ಪೆಷಲಿಸ್ಟ್’ ಸುರೇಶ್ ರೈನಾ

Suresh Raina

ನವ ದೆಹಲಿ: ಐಪಿಎಲ್ ಹಾಗೂ ದೇಶಿ ಕ್ರಿಕೆಟ್ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್‌ಗೆ ಬ್ಯಾಟ್ಸ್‌ಮನ್ ಸುರೇಶ್ ರೈನಾ (Suresh Raina) ಅವರು ನಿವೃತ್ತಿ ಘೋಷಿಸಿದ್ದಾರೆ.

ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೈನಾ ಅವರು, ಕ್ರಿಕೆಟ್‌ಗಾಗಿ ದೇಶ ಹಾಗೂ ಉತ್ತರ ಪ್ರದೇಶವನ್ನು ಪ್ರತಿನಿಧಿಸುವುದು ಪರಿಪೂರ್ಣವಾದ ಗೌರವವಾಗಿದೆ. ಎಲ್ಲ ಮಾದರಿಯ ಕ್ರಿಕೆಟ್‌ಗೆ ನಾನು ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುತ್ತಿದ್ದ ಸುರೇಶ್ ರೈನಾ ಅವರನ್ನು, ಇತ್ತೀಚೆಗೆ ನಡೆದ ಆಟಗಾರರ ಹರಾಜಿನಲ್ಲಿ ಯಾವುದೇ ಟೀಂ ಖರೀದಿಸಿರಲಿಲ್ಲ. ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದರೂ ರೈನಾ ಅವರು ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಯುಎಇನಲ್ಲಿ ನಡೆಯಲಿರುವ ಟಿ20 ಲೀಗ್‌ಗಳಲ್ಲಿ ಆಡಲಿದ್ದಾರೆ.

ಸುರೇಶ್ ರೈನಾ ಅವು 2011 ವಿಶ್ವ ಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. 226 ಒಂದು ದಿನ ಕ್ರಿಕೆಟ್ ಪಂದ್ಯ ಆಡಿರುವ ರೈನಾ 5,615 ರನ್ ಗಳಿಸಿದ್ದಾರೆ. 78 ಟಿ20 ಪಂದ್ಯಗಳಿಂದ 1605 ರನ್ ಸಂಪಾದಿಸಿದ್ದಾರೆ. 18 ಟೆಸ್ಟ್‌ಗಳಿಂದ 768 ರನ್ ಮಾಡಿದ್ದಾರೆ. ಐಪಿಎಲ್‌ನಲ್ಲೂ ಸುರೇಶ್ ರೈನಾ ಅವರ ಪ್ರದರ್ಶನವು ಅದ್ಭುತವಾಗಿತ್ತು. ಸೂಪರ್ ಚೆನ್ನೈ ಕಿಂಗ್ಸ್ ಟ್ರೂಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಒಟ್ಟು 205 ಐಪಿಎಲ್ ಪಂದ್ಯಗಳನ್ನಾಡಿರುವ ರೈನಾ ಅವರು 5528 ರನ್‌ಗಳ ಒಡೆಯರಾಗಿದ್ದಾರೆ.

ಈ ಹಿಂದೆ 2020ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ದಿನವೇ ಸುರೇಶ್ ರೈನಾ ಕೂಡ ತಮ್ಮ ವಿದಾಯವನ್ನು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ | Virat kohli | ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧ ಶತಕಗಳು ಬಾರಿಸಿದ ವಿರಾಟ್‌ ಕೊಹ್ಲಿ

Exit mobile version