Site icon Vistara News

ಕೊಹ್ಲಿಯ ದಾಖಲೆ ಸರಿಗಟ್ಟಿ, ರಾಹುಲ್​ ದಾಖಲೆ ಮುರಿದ ಸೂರ್ಯಕುಮಾರ್​

Suryakumar Yadav

ಗ್ಕೆಬರ್ಹಾ: ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ(South Africa vs India, 2nd T20) ಭಾರತ ತಂಡ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​(Suryakumar Yadav) ಅವರು ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿಯ(Virat Kohli) ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಜತೆಗೆ ಕೆ.ಎಲ್​ ರಾಹುಲ್(KL Rahul)​ ಅವರ ದಾಖಲೆಯನ್ನು ಮುರಿದಿದ್ದಾರೆ.

ಇಲ್ಲಿನ ಗ್ಕೆಬರ್ಹಾ ಸೇಂಟ್ ಜಾರ್ಜ್ ಪಾರ್ಕ್​ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್​ ಅವರು 15 ರನ್​ ಗಳಿಸಿದ ವೇಳೆ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ್​ ರನ್​ ಪೂರೈಸಿದ ದಾಖಲೆ ಬರೆದರು. ಈ ಮೂಲಕ ಭಾರತ ಪರ ವೇಗವಾಗಿ ಈ ಸಾಧನೆ ಮಾಡಿದ ವಿರಾಟ್​ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದರು. ಕೊಹ್ಲಿ ಈ 56 ಇನ್ನಿಂಗ್ಸ್​ನಲ್ಲಿ ಈ ಮೈಲುಗಲ್ಲು ನಿರ್ಮಿಸಿದ್ದರು. ಇದೀಗ ಸೂರ್ಯ ಕೂಡ 56 ಇನ್ನಿಂಗ್ಸ್​ನಲ್ಲಿಯೇ ಈ ದಾಖಲೆಯನ್ನು ನಿರ್ಮಿಸಿ ಜಂಟಿಯಾಗಿ ಕೊಹ್ಲಿ ಜತೆ ಕಾಣಿಸಿಕೊಂಡಿದ್ದಾರೆ.

ರಾಹುಲ್​ ದಾಖಲೆ ಪತನ

ಕನ್ನಡಿಗ ಕೆ.ಎಲ್​ ರಾಹುಲ್​ ಅವರು 58 ಇನಿಂಗ್ಸ್​ನಲ್ಲಿ ಈ ದಾಖಲೆ ನಿರ್ಮಿಸಿ 2ನೇ ಸ್ಥಾನದಲ್ಲಿದ್ದರು. ಆದರೆ ಇದೀಗ ಸೂರ್ಯ 56 ಇನ್ನಿಂಗ್ಸ್​ನಲ್ಲಿ 2 ಸಾವಿರ ರನ್​ ಗಡಿ ದಾಟಿ ಅವರುನ್ನು ಹಿಂದಿಕ್ಕಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್​ ಅವರು ತಮ್ಮ ಎಂದಿನ ಶೈಲಿಯಲ್ಲೇ ಹೊಡಿ ಬಡಿ ಆಟವಾಡಿ ಅರ್ಧಶತಕ ಬಾರಿಸಿದರು.

ಇದನ್ನೂ ಓದಿ IND vs SA: ರಿಂಕು, ಸೂರ್ಯ ಅರ್ಧಶತಕ; ಪಂದ್ಯಕ್ಕೆ ಮಳೆ ಅಡ್ಡಿ​

ಒಟ್ಟು 36 ಎಸೆತ ಎದುರಿಸಿದ ಅವರು ಸೊಗಸಾದ 5 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 56 ರನ್​ ಬಾರಿಸಿದರು. ರಿಂಕು ಜತೆಗೂಡಿ 4ನೇ ವಿಕೆಟ್​ಗೆ 70 ರನ್​ ಒಟ್ಟುಗೂಡಿಸಿದರು. ಅರ್ಧಶತಕ ಬಾರಿಸಿದ ಬಳಿಕ ತಬ್ರೆಜ್ ಶಂಸಿ ಅವರ ಓವರ್​ನಲ್ಲಿ ಸಿಕ್ಸರ್​ ಬಾರಿಸಲು ಹೋಗಿ ಲಾಂಗ್​ ಆನ್​ನಲ್ಲಿ ಜಾನ್ಸೆನ್​ಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು.

ದಾಖಲೆ ಪಾಕ್​ ಆಟಗಾರರ ಹೆಸರಿನಲ್ಲಿದೆ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ವೇಗವಾಗಿ 2 ಸಾವಿರ ರನ್​ ಬಾರಿಸಿದ ದಾಖಲೆ ಜಂಟಿಯಾಗಿ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್​ ಅಜಂ ಮತ್ತು ಮೊಹಮ್ಮದ್​ ರಿಜ್ವಾನ್ ಹಸರಿನಲ್ಲಿದೆ. ಉಭಯ ಆಟಗಾರರು 52 ಇನಿಂಗ್ಸ್​ನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ.

ವೇಗವಾಗಿ ಟಿ20ಯಲ್ಲಿ 2 ಸಾವಿರ ರನ್​ ಬಾರಿಸಿದ ಆಟಗಾರರು

ಬಾಬರ್​ ಅಜಂ- 52 ಇನಿಂಗ್ಸ್​

ಮೊಹಮ್ಮದ್​ ರಿಜ್ವಾನ್​-52 ಇನಿಂಗ್ಸ್​

ವಿರಾಟ್​ ಕೊಹ್ಲಿ-56 ಇನ್ನಿಂಗ್ಸ್​

ಸೂರ್ಯಕುಮಾರ್​ ಯಾದವ್​-56 ಇನಿಂಗ್ಸ್​

ಕೆ.ಎಲ್​ ರಾಹುಲ್​-58 ಇನಿಂಗ್ಸ್​

Exit mobile version