ಅಡಿಲೇಡ್: ಮೈದಾನದ ಎಲ್ಲ ಕಡೆ ಲೀಲಾಜಾಲವಾಗಿ ನಟರಾಜ ಭಂಗಿಯಲ್ಲಿ ಬೌಂಡರಿ, ಸಿಕ್ಸರ್ ಸಿಡಿಸುವ ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಅಭಿಮಾನಿಗಳು ಮಿಸ್ಟರ್ ೩೬೦ ಬ್ಯಾಟರ್ ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ತಳ್ಳಿಹಾಕಿದ ಸೂರ್ಯ ಕ್ರಿಕೆಟ್ ಜಗತ್ತಿಗೆ ಎಬಿ ಡಿ ವಿಲಿಯರ್ಸ್ ಒಬ್ಬರೇ ಮಿಸ್ಟರ್ ೩೬೦ ಡಿಗ್ರಿ ಆಟಗಾರ ಎಂದು ಹೇಳಿದ್ದಾರೆ.
ಕಳೆದ ಜಿಂಬಾಬ್ಬೆ ವಿರುದ್ಧದ ಪಂದ್ಯದಲ್ಲಿ 25 ಎಸೆತಗಳಲ್ಲಿ ೬ ಬೌಂಡರಿ ಮತ್ತು ೪ ಸಿಕ್ಸರ್ ನೆರವಿನಿಂದ ಅಜೇಯ ೬೧ ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯದ ಬಳಿಕ ಟ್ವೀಟ್ ಮಾಡಿದ ಸೂರ್ಯಕುಮಾರ್ ಯಾದವ್ ಅಭಿಮಾನಿಗಳು ನನ್ನ ಆಟವನ್ನು ಕಂಡು ಮಿಸ್ಟರ್ ೩೬೦ ಡಿಗ್ರಿ ಆಟಗಾರ ಎಂದು ಕರೆಯಲಾರಂಭಿಸಿದ್ದಾರೆ. ಆದರೆ ನಾನು ಮಿಸ್ಟರ್ ೩೬೦ ಬ್ಯಾಟರ್ ಅಲ್ಲ ಅವರಂತೆ ಬ್ಯಾಟಿಂಗ್ ನಡೆಸಲು ಪ್ರಯತ್ನಿಸುತ್ತಿದ್ದೇನೆ. ಕ್ರಿಕೆಟ್ ಜಗತ್ತಿಗೆ ಏನಿದ್ದರೂ ದಕ್ಷಿಣ ಆಫ್ರಿಕಾದ ಬ್ಯಾಟರ್ ಎಬಿ ಡಿ ವಿಲಿಯರ್ಸ್ ಮಾತ್ರ ಮಿಸ್ಟರ್ ೩೬೦ ಆಟಗಾರ ಅವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಸೂರ್ಯಕುಮಾರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಎಬಿ ಡಿ ವಿಲಿಯರ್ಸ್ “ಆದಷ್ಟು ಬೇಗ ನೀವು ನನಗಿಂದ ಅತ್ಯುತ್ತಮ 360 ಡಿಗ್ರಿ ಪ್ಲೇಯರ್ ಆಗುತ್ತೀರಿ. ಜಿಂಬಾಬ್ವೆ ವಿರುದ್ಧ ಉತ್ತಮವಾಗಿ ಆಡಿದ್ದೀರಿ.” ಎಂದು ಎಬಿಡಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | T20 World Cup | ಡೇವಿಡ್ ಮಲಾನ್‌ಗೆ ಗಾಯ; ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ ?