ಮುಂಬಯಿ: ವಿಶ್ವದ ನಂಬರ್ ಒನ್ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಜಿಯೊ ಸಿನಿಮಾ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದೆ. ಜಿಯೊ ಸಿನಿಮಾ ಮುಂಬರುವ ಐಪಿಎಲ್ (IPL 2023) ಲೈವ್ ಸ್ಟ್ರೀಮಿಂಗ್ನ ಹಕ್ಕನ್ನು ತನ್ನದಾಗಿಸಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳ ಮನಮುಟ್ಟುವ ಉದ್ದೇಶದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಅಂಬಾಸಿಡರ್ ಆಗಿ ಆಯ್ಕೆ ಮಾಡಿದೆ.
ಕಳೆದ 18 ತಿಂಗಳಿನಿಂದ ವೈಟ್ ಬಾಲ್ ಕ್ರಿಕೆಟ್ನಲ್ಲಿ ರನ್ ಪ್ರವಾಹ ಹರಿಸಿರುವ ಸೂರ್ಯಕುಮಾರ್ ಅವರು ಟಾಟಾ ಐಪಿಎಲ್ ವೇಳೆ ಜಿಯೊ ಸಿನಿಮಾದ ಡಿಜಿಟಲ್ ಪ್ರಸಾರ ಹೆಚ್ಚು ಜನರಿಗೆ ತಲುಪುವಂತೆ ಮಾಡಲಿದೆ.
ಇದನ್ನೂ ಓದಿ : E20 Petrol : ಭಾರತದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಸ್ಟೇಷನ್ ಸ್ಥಾಪಿಸಲಿದೆ ಜಿಯೊ- ಬಿಪಿ
‘ಮುಂಬರುವ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಜಿಯೋ ಸಿನಿಮಾದ ಜೊತೆ ಕೈಜೋಡಿಸಲು ಖುಷಿಯಾಗುತ್ತಿದೆ. ಜಗತ್ತಿನೆಲ್ಲೆಡೆಯ ಕ್ರೀಡಾ ಅಭಿಮಾನಿಗಳಿಗೆ ಡಿಜಿಟಲ್ ವೀಕ್ಷಣೆಯ ಅನುಭವವನ್ನು ಜಿಯೋ ಸಿನಿಮಾ ಉತ್ಕೃಷ್ಟ ಮಟ್ಟಕ್ಕೆ ಏರಿಸಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವು ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆಯಲಿರುವ ಐಪಿಎಲ್ 2023ಯ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಸೆಣಸಾಡಲಿದೆ. ಮಾರ್ಚ್ 31ರಂದು ನಡೆಯುವ ಈ ಪಂದ್ಯ ಸೇರಿದಂತೆ ಐಪಿಎಲ್ನ ಎಲ್ಲ ಹಣಾಹಣಿಗಳು ಜಿಯೋ ಸಿನಿಮಾದಲ್ಲಿ ನೇರಪ್ರಸಾರವಾಗಲಿದೆ. ಜಿಯೋ ಸಿನಿಮಾ 4ಕೆ ಫೀಡ್ ಪೂರೈಸಲಿದೆ. ಇದರಲ್ಲಿ ಬಹುಭಾಷೆ ಮತ್ತು ಬಹು ಕ್ಯಾಮೆರಾಗಳ ಆಯ್ಕೆಯೂ ಇರಲಿದೆ.