Site icon Vistara News

Suryakumar Yadav : ವಿರಾಟ್​ ಕೊಹ್ಲಿಯ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್​​

Suryakumar Yadva

ಬೆಂಗಳೂರು: ಟಿ20 ಕ್ರಿಕೆಟ್​​ನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಮುರಿದಿದ್ದಾರೆ. ಅವರು ಬ್ಯಾಟಿಂಗ್ ದಿಗ್ಗಜರನ್ನು ಹಿಂದಿಕ್ಕಿ ಆಟದ ಕಿರು ಸ್ವರೂಪದಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟಿ 20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಈ ಸಾಧನೆ ಮಾಡಿದ್ದಾರೆ. ಜೋಹಾನ್ಸ್​ಬರ್ಗ್​ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಡುವಿನ ಸರಣಿಯ ನಿರ್ಣಾಯಕ ಮೂರನೇ ಪಂದ್ಯ ನಡೆಯಿತು. . ಹಂಗಾಮಿ ನಾಯಕ ಮತ್ತೊಂದು ಬಾರಿ ಭರ್ಜರಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ್ದಾರೆ. ಈ ವೇಳೆ ಕೊಹ್ಲಿಯ ದಾಖಲೆಯನ್ನು ಮುರಿದಿದ್ದಾರೆ.

ಭಾರತವು ಶುಭ್ಮನ್ ಗಿಲ್ (12) ಮತ್ತು ತಿಲಕ್ ವರ್ಮಾ (0) ಅವರನ್ನು ಬೇಗನೆ ಕಳೆದುಕೊಂಡಾಗ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್​ಗೆ ಬಂದರು ಅವರು ​ ದಕ್ಷಿಣ ಆಫ್ರಿಕಾದ ಬೌಲರ್​ಗ:ಳನ್ನು ಅಣಕಿಸುವ ಮೂಲಕ ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಅಲ್ಲದೆ, ವಿಡಿಯೋ ಗೇಮ್ ಮಾದರಿಯ ಇನ್ನಿಂಗ್ಸ್ ಆಡಿದರು.

ಔಟ್​ ಆಫ್ ಬಾಕ್ಸ್ ಶಾಟ್​ಗಳು

ಸೂರ್ಯಕುಮಾರ್ ಯಾದವ್ ತಮ್ಮ ಇನ್ನಿಂಗ್ಸ್​​ನಲ್ಲಿ ಕೆಲವು ಔಟ್-ಆಫ್-ಬಾಕ್ಸ್ ಶಾಟ್​ಗಳನ್ನು ಆಡಿದರು. ತಮ್ಮ ಅಪರೂಪದ ಹೊಡೆಗಳ ಮೂಲಕ ಪ್ರೇಕ್ಷಕರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದರು. ಮೊದಲಿಗೆ ಅವರು ಸರಣಿಯ ಸತತ ಎರಡನೇ ಅರ್ಧಶತಕವನ್ನು ದಾಖಲಿಸಿದರು. ಈ ಮೂಲಕ ತಂಡವನ್ನು ಅಗ್ರಸ್ಥಾನದಲ್ಲಿರಿಸಿದರು. ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡರೂ, ಅವರು ಎದುರಾಳಿಗಳ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಲಿಲ್ಲ.

ಟಿ20ಐನಲ್ಲಿ 117 ಸಿಕ್ಸರ್ ಬಾರಿಸಿದ ವಿರಾಟ್ ಕೊಹ್ಲಿ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಮುರಿದಿದ್ದಾರೆ. ಅವರು ಈಗ ಕೇವಲ 57 ಇನಿಂಗ್ಸ್​​ಗಳಲ್ಲಿ 123 ಸಿಕ್ಸರ್​ಗಳನ್ನು ಹೊಂದಿದ್ದಾರೆ. ಕೊಹ್ಲಿ 107 ಇನ್ನಿಂಗ್ಸ್​​ಗಳಲ್ಲಿ 117 ಸಿಕ್ಸರ್​​ ಬಾರಿಸಿದ್ದಾರೆ. ಇದು ಸೂರ್ಯಕುಮಾಋ್​ ಯಾದವ್ ಅವರನ್ನು ಪರಿಪೂರ್ಣ ಟಿ 20 ಬ್ಯಾಟರ್ ಎಂಬುದನ್ನು ಖಚಿತಪಡಿಸುತ್ತದೆ.

ಸೂರ್ಯಕುಮಾರ್ ಯಾದವ್ ಅವರಿಗಿಂತ ರೋಹಿತ್ ಶರ್ಮಾ ಮುಂದಿದ್ದಾರೆ. ರೋಹಿತ್​​ 140 ಇನಿಂಗ್ಸ್​ಗಳಲ್ಲಿ 182 ಸಿಕ್ಸರ್​ ಬಾರಿಸಿದ್ದಾರೆ. ಆದರೆ, ಸೂರ್ಯ ಸದ್ಯ ಬ್ಯಾಟಿಂಗ್ ಮಾಡುತ್ತಿರುವ ರೀತಿಯನ್ನು ನೋಡಿದರೆ ಅವರು ಹಿರಿಯ ಆರಂಭಿಕ ಆಟಗಾರನನ್ನು ಮೀರಿಸಬಹುದು.

ಟಿ20ಐನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರು

ಅತಿ ವೇಗದ 2000 ರನ್

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು 36 ಎಸೆತಗಳಲ್ಲಿ 56 ರನ್ ಗಳಿಸಿದ್ದರು ಅವರ ಇನಿಂಗ್ಸ್​ನಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್​ಗಳಿದ್ದವು.

ಇದನ್ನೂ ಓದಿ : ಕೊಹ್ಲಿಯ ದಾಖಲೆ ಸರಿಗಟ್ಟಿ, ರಾಹುಲ್​ ದಾಖಲೆ ಮುರಿದ ಸೂರ್ಯಕುಮಾರ್​

ಆ ಇನ್ನಿಂಗ್ಸ್ನಲ್ಲಿ, ಅವರು ಕೆಎಲ್ ರಾಹುಲ್ ಅವರನ್ನು ಹಿಂದಿಕ್ಕಿ ವೇಗವಾಗಿ 2000 ರನ್ ಗಳಿಸಿದ ಭಾರತದ ಜಂಟಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 56 ಇನಿಂಗ್ಸ್​​ನಲ್ಲಿ 2000 ರನ್ ಮಾಡಿದರು. ಅಷ್ಟೇ ಸಂಖ್ಯೆಯ ಇನಿಂಗ್ಸ್​​ಗಳಲ್ಲಿ ಈ ಸಾಧನೆ ಮಾಡಿದ ವಿರಾಟ್ ಕೊಹ್ಲಿ ಅವರೊಂದಿಗೆ ಜಂಟಿ ಸಾಧನೆ ಮಾಡಿದರು. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಟಿ20ಐನಲ್ಲಿ ಕಡಿಮೆ ಇನಿಂಗ್ಸ್​ಗಳಲ್ಲಿ 2000 ರನ್ ಗಳಿಸಿದವರು

Exit mobile version