Site icon Vistara News

Suryakumar Yadav : ಮುಂದಿನ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ನಾಯಕತ್ವವೂ ನಷ್ಟ

Suryakumar Yadav:

ಬೆಂಗಳೂರು: ಟಿ 20 ವಿಶ್ವಕಪ್​​ನಲ್ಲಿ ಭಾರತ ತಂಡದ ವಿಜಯ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ (Hardik Pandya) ಅವರ ಅದೃಷ್ಟ ಬದಲಾಗಿದೆ ಎಂದರೆ ಸುಳ್ಳು. ಯಾಕೆಂದರೆ ಅವರು ಭಾರತ ಟಿ20 ತಂಡದ ಸ್ಥಾನ ಕಳೆದುಕೊಂಡಿದ್ದಾರೆ. ಅವರನ್ನು ಮುಂಬರುವ ಲಂಕಾ ಪ್ರವಾಸಕ್ಕೆ ಭಾರತ ತಂಡದ ನಾಯಕತ್ವ ಬಿಡಿ, ಕನಿಷ್ಠ ಉಪನಾಯಕತ್ವವೂ ಕೊಟ್ಟಿಲ್ಲ. ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕರಾಗಿದ್ದರೆ, ಶುಭ್​ಮನ್ ಗಿಲ್​ ಉಪನಾಯಕರಾಗಿದ್ದಾರೆ. ಇವೆಲ್ಲದರ ಹಿನ್ನೆಲೆಯಲ್ಲಿ ಅವರನ್ನು ಮುಂದಿನ ವರ್ಷ ಮುಂಬೈ ಇಂಡಿಯನ್ಸ್​​ ತಂಡದ ನಾಯಕತ್ವದಿಂದಲೂ ತೆಗೆದು ಹಾಕಲಾಗುತ್ತದೆ ಎನ್ನಲಾಗಿದೆ.

ಭಾರತದ ಆಲ್ರೌಂಡರ್ ಕಳೆದ ಆವೃತ್ತಯ ಐಪಿಎಲ್ ಸಮಯದಲ್ಲಿ ತೀವ್ರ ಟೀಕೆ ಮತ್ತು ಟ್ರೋಲ್​​ಗಳನ್ನು ಎದುರಿಸಿದ್ದರು. ಅಲ್ಲಿ ಅವರು ನಾಯಕನಾಗಿ ಮತ್ತು ಆಲ್​ರೌಂಡರ್ ಆಗಿ ಪ್ರಭಾವ ಬೀರಲು ವಿಫಲಗೊಂಡಿದ್ದರು. ರೋಹಿತ್ ಶರ್ಮಾ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ಮಾಡಿದ್ದಕ್ಕಾಗಿ ಅವರನ್ನು ಪಂದ್ಯಾವಳಿಯುದ್ದಕ್ಕೂ ಅಭಿಮಾನಿಗಳು ಗುರಿಯಾಗಿಸಿದ್ದರು. ಆದರೆ, ಟಿ20 ವಿಶ್ವ ಕಪ್​ನಲ್ಲಿ ಪಾಂಡ್ಯ ಪರಿಸ್ಥಿತಿಯನ್ನು ತಮ್ಮ ಕಡೆಗೆ ಒಲಿಸಿಕೊಂಡರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ 117 ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವಿವರ ಇಲ್ಲಿದೆ

ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಭಾವ ಬೀರಿದರು ಮತ್ತು 17 ವರ್ಷಗಳ ಸುದೀರ್ಘ ಅಂತರದ ನಂತರ ಭಾರತವು ಟಿ 20 ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದರು. ಟೂರ್ನಿಯಲ್ಲಿ ಅವರ ಅದ್ಭುತ ಆಲ್​ರೌಂಡ್​ ಪ್ರದರ್ಶನವು ಅವರನ್ನು ಮತ್ತೊಮ್ಮೆ ಮೇಲಕ್ಕೆ ಕೊಂಡೊಯ್ದಿತು. ಹೀಗಾಗಿ ರೋಹಿತ್​ ಸ್ಥಾನ ತುಂಬಲು ಟಿ20 ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಟಿ 20 ವಿಶ್ವಕಪ್​ನಲ್ಲಿ ಪಾಂಡ್ಯ ಉಪನಾಯಕರಾಗಿದ್ದರೂ, ಸೂರ್ಯಕುಮಾರ್ ಯಾದವ್​ಗೆ ಆಟದ ಕಿರು ಸ್ವರೂಪದಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗಿದೆ. ಅಷ್ಟೇ ಅಲ್ಲ, ಪಾಂಡ್ಯ ತಂಡದ ಉಪನಾಯಕನನ್ನೂ ಕಳೆದುಕೊಂಡಿದ್ದಾರೆ.

ಮುಂದಿನ ಐಪಿಎಲ್​ ಕತೆ?

ಮುಂಬರುವ ತಿಂಗಳುಗಳಲ್ಲಿ ಹಾರ್ದಿಕ್ ಪಾಂಡ್ಯಗೆ ಎಲ್ಲವೂ ತಮ್ಮ ಪರವಾಗಿ ಹೋಗಲಿಕ್ಕಿಲ್ಲ. ವರದಿಯ ಪ್ರಕಾರ, ಐಪಿಎಲ್​​ನ ಮುಂದಿನ ಋತುವಿಗೆ ಮುಂಚಿತವಾಗಿ ಮುಂಬೈ ಇಂಡಿಯನ್ಸ್​​ ಕೆಲವೊಂದು ಬದಲಾವಣೆ ಮಾಡಬಹುದು. ಮೆಗಾ ಹರಾಜು ನಡೆಯಬೇಕಾಗಿರುವುದರಿಂದ, ಫ್ರಾಂಚೈಸಿ ಹಲವಾರು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪಾಂಡ್ಯ ಅವರನ್ನು ಉಳಿಸಿಕೊಳ್ಳುವಲ್ಲಿ ಅವರು ಯಾವುದೇ ದೊಡ್ಡ ಸವಾಲನ್ನು ಎದುರಿಸುವುದಿಲ್ಲವಾದರೂ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರನ್ನು ಉಳಿಸಿಕೊಳ್ಳುವಾಗ ಅವರಿಗೆ ಎಲ್ಲವೂ ಸಲೀಸಾಗಿಲ್ಲ. ನಾಯಕ ಸ್ಥಾನದಿಂದ ನಿರ್ಗಮಿಸಿದ ನಂತರ ರೋಹಿತ್ ಫ್ರಾಂಚೈಸಿಯನ್ನು ತೊರೆಯಲು ನಿರ್ಧರಿಸಬಹುದು. ಹಾಗಾದರೂ ಸೂರ್ಯಕುಮಾರ್ ಅವರು ನಾಯಕರಾಗಬಹುದು.

ಬುಮ್ರಾ ನಾಯಕತ್ವದ ಪಾತ್ರವನ್ನು ಪ್ರೀತಿಸುತ್ತಾರೆ ಮತ್ತು ಮುಂಬೈ ಇಂಡಿಯನ್ಸ್ ಅವರನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಬಹುದು ಇವೆಲ್ಲವೂ ಪಾಂಡ್ಯ ಅವರನ್ನು ಕೇವಲ ಒಂದೇ ಒಂದು ಋತುವಿನ ಮುಂಬೈ ಇಂಡಿಯನ್ ನಾಯಕರನ್ನಾಗಿ ಮಾಡಬಹುದು.

Exit mobile version