ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಗಾಯದ ಸಮಸ್ಯೆ ಮುಂದುವರಿಸಿದೆ. ತಂಡದ ಮತ್ತೊಬ್ಬ ಆಟಗಾರ ಗಾಯದ ಸಮಸ್ಯೆಯಿಂದ ಹೊರಗುಳಿಯಲಿದ್ದಾರೆ. ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಪಾದದ ಗಾಯದಿಂದಾಗಿ ಫೆಬ್ರವರಿವರೆಗೆ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಇದರರ್ಥ ಸ್ಟಾರ್ ಬ್ಯಾಟರ್ ವಿಶ್ವ ಕಪ್ ಮೊದಲಿಗೆ ಇರುವ ನಿರ್ಣಾಯಕ ಅಫಘಾನಿಸ್ತಾನ ವಿರುದ್ಧದ ಟಿ 20 ಐ ಸರಣಿಯಿಂದ ಹೊರಗುಳಿಯಲಿದ್ದಾರೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಗಳ ಪ್ರಕಾರ, ಸೂರ್ಯಕುಮಾರ್ ಅವರ ಪಾದದ ಮೇಲೆ ಗ್ರೇಡ್ 2 ಸ್ನಾಯು ಮುರಿತ ಉಂಟಾಗಿದೆ. ಅವರಿಗೆ ಸುಮಾರು 7 ವಾರಗಳ ಕಾಲ ಆಟದಿಂದ ದೂರ ಉಳಿಯುವ ಅವಶ್ಯಕತೆ ಇದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯದ ವೇಳೆ ಸೂರ್ಯಕುಮಾರ್ ಅವರ ಪಾದ ಉಳುಕಿಸಿಕೊಂಡಿದ್ದರು. ತಕ್ಷಣವೇ ಭಾರತ ತಂಡದ ಫಿಸಿಯೋಗಳು ಅವರಿಗೆ ಚಿಕಿತ್ಸೆ ನೀಡಿದ್ದರು.
“ಅವರು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಅವರು ತಮ್ಮ ಪುನಶ್ಚೇತನಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ವರದಿ ಮಾಡಬೇಕಾಗುತ್ತದೆ. ಅವರು ಖಂಡಿತವಾಗಿಯೂ ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿಯಲಿದ್ದಾರೆ,” ಎಂದು ಮೂಲವೊಂದು ತಿಳಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ನಂತರ ಸೂರ್ಯಕುಮರ್ ಅವರು ಚೆನ್ನಾಗಿದ್ದಾರೆ. ಚೆನ್ನಾಗಿ ನಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಆಟಗಾರ ಪಾದದ ಸ್ಕ್ಯಾನ್ ಗೆ ಒಳಗಾಗಿದ್ದರು. ಸ್ಕ್ಯಾನ್ ಗಳು ಗ್ರೇಡ್ ಎರಡು ಗಾಯವನ್ನು ಬಹಿರಂಗಪಡಿಸಿದವು. ಅವರು ಫಿಟ್ ಆಗಲು ಕನಿಷ್ಠ 7 ವಾರಗಳು ಬೇಕಾಗುತ್ತವೆ.
ಪ್ರಮುಖ ಸರಣಿಯಾಗಿತ್ತು
ಸೂರ್ಯನ ಅಲಭ್ಯತೆಯಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. 2024ರ ಟಿ20 ವಿಶ್ವಕಪ್ಗೆ ಮುನ್ನ ಭಾರತ ಕೇವಲ 3 ಟಿ20 ಪಂದ್ಯಗಳನ್ನು ಆಡಲಿದೆ. ಅಫ್ಘಾನಿಸ್ತಾನ ವಿರುದ್ಧದ ತವರಿನಲ್ಲಿ ನಡೆದ ಮೂರು ಪಂದ್ಯಗಳನ್ನು ಸ್ಕೈ ತಪ್ಪಿಸಿಕೊಂಡಿರುವುದು ಮೆನ್ ಇನ್ ಬ್ಲೂಗೆ ದೊಡ್ಡ ಹಿನ್ನಡೆಯಾಗಿದೆ. ಅಫ್ಘಾನಿಸ್ತಾನ ವಿರುದ್ಧ ಭಾರತ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಜನವರಿ 11 ರಿಂದ ಜನವರಿ 17 ರವರೆಗೆ ನಡೆಯಲಿದೆ. ಫೆಬ್ರವರಿ ಮೊದಲ ವಾರದಲ್ಲಿ ಸೂರ್ಯ ಫಿಟ್ ಆಗುವ ಸಾಧ್ಯತೆ ಇರುವುದರಿಂದ, ಅವರು ಐಪಿಎಲ್ ಮೂಲಕ 2024 ರ ಟಿ 20 ವಿಶ್ವಕಪ್ಗೆ ತಯಾರಿ ನಡೆಸಲಿದ್ದಾರೆ.
ಭಾರತದ ಅತ್ಯಂತ ನಿಸ್ವಾರ್ಥಿ ಕ್ರಿಕೆಟಿಗನನ್ನು ಹೆಸರಿಸಿದ ಸೈಮಲ್ ಡಲ್
ಬೆಂಗಳೂರು: ಏಕದಿನ ವಿಶ್ವಕಪ್ 2023 ರ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಹೀನಾಯ ಸೋಲಿನ ನಂತರ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಇತರ ಕೆಲವು ಕ್ರಿಕೆಟಿಗರು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ವಿರಾಮ ತೆಗೆದುಕೊಂಡಿದ್ದಾರೆ. ಈ ಮೂವರೂ ಡಿಸೆಂಬರ್ 26 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮರಳಲಿದ್ದಾರೆ. ವಿಶ್ವಕಪ್ ನಂತರ ಮೊದಲ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಳ್ಳುವ ಮೊದಲು, ನ್ಯೂಜಿಲೆಂಡ್ನ ಮಾಜಿ ಅಂತರರಾಷ್ಟ್ರೀಯ ಆಟಗಾರ ಸೈಮನ್ ಡೌಲ್ ಭಾರತ ತಂಡದಲ್ಲಿ ಒಬ್ಬೊಬ್ಬರ ಮೌಲ್ಯವನ್ನು ವಿಶ್ಲೇಷಣೆ ಮಾಡಿದ್ದಾರೆ. ಈ ವೇಳೆ ಅವರು 36 ವರ್ಷದ ಆಟಗಾರನನ್ನು ಅತ್ಯಂತ ನಿಸ್ವಾರ್ಥಿ ಆಟಗಾರ ಎಂದು ಹೇಳಿದ್ದಾರೆ. ಯಾವುದೇ ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಯೋಚಿಸದೆ ಕೆಲವು ಭಾರತ ತಂಡಕ್ಕಾಗಿ (Team India) ಅದ್ಭುತ ಕ್ರಿಕೆಟ್ ಆಡಿದ್ದಕ್ಕಾಗಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಪ್ಯಾಲೆಸ್ತೀನ್ಗೆ ಬೆಂಬಲ ಸೂಚಿಸಿದ ಆಸೀಸ್ ಆಟಗಾರನಿಗೆ ಛೀಮಾರಿ ಹಾಕಿದ ಐಸಿಸಿ
ರೋಹಿತ್ ಅವರ ನಿಸ್ವಾರ್ಥ ಬ್ಯಾಟಿಂಗ್ ವಿಧಾನವು ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ನಲ್ಲಿ ಭಾರತಕ್ಕೆ ಸಂಪೂರ್ಣವಾಗಿ ನೆರವಾಗಿತ್ತು. ಟೆಸ್ಟ್ ಸರಣಿಯಲ್ಲಿ ಆರಂಭಿಕ ಆಟಗಾರ ಅದೇ ಬ್ರಾಂಡ್ ಕ್ರಿಕೆಟ್ ಆಡಬೇಕೆಂದು ಡೌಲ್ ಹೇಳಿದ್ದಾರೆ. ಏಕೆಂದರೆ ಇದು ದಕ್ಷಿಣ ಆಫ್ರಿಕಾದಲ್ಲಿ ಪ್ರವಾಸಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಬೇಕಾದರೆ ರೋಹಿತ್ ಅಬ್ಬರಿಸಬೇಕು. ಆ ನೆಲದಲ್ಲಿ ಭಾರತ ತಂಡ ಎಂದಿಗೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಹೀಗಾಗಿ ರೋಹಿತ್ ಮಿಂಚಲಿದ್ದಾರೆ. ಅವರ ಅವರು ನಾನು ದೀರ್ಘಕಾಲದಿಂದ ನೋಡಿದ ‘ಅತ್ಯಂತ ನಿಸ್ವಾರ್ಥ ಭಾರತೀಯ ಕ್ರಿಕೆಟಿಗ’ ಎಂದು ಡೌಲ್ ಹೇಳಿದ್ದಾರೆ.