Site icon Vistara News

Suryakumar Yadav : ಮ್ಯಾಕ್ಸ್​ವೆಲ್​, ರೋಹಿತ್​ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್​

Suryakumar Yadav

ಜೋಹಾನ್ಸ್ ಬರ್ಗ್ : ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ ಸಿಡಿಸಿದ್ದಾರೆ. 55 ಎಸೆತಗಳಲ್ಲಿ 4ನೇ ಟಿ20 ಶತಕ ಬಾರಿಸಿದ 33ರ ಹರೆಯದ ಸೂರ್ಯಕುಮಾರ್​ , ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಸಾಲಿಗೆ ಸೇರಿಕೊಂಡರು. ಸೂರ್ಯಕುಮಾರ್ ಯಾದವ್ 7 ಬೌಂಡರಿ ಮತ್ತು 8 ಸಿಕ್ಸರ್​ಗಳನ್ನು ಒಳಗೊಂಡ 100 ರನ್ ಗಳಿಸುವ ಮೂಲಕ ಭಾರತವನ್ನು 201 ರನ್​ಗಳ ಕಡೆಗೆ ಮುನ್ನಡೆಸಿದರು.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ 20 ಐ ಸ್ವರೂಪದಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ಮೊದಲ ಆಟಗಾರ. ಆಸ್ಟ್ರೇಲಿಯಾದ ಸ್ಫೋಟಕ ಆಲ್​ರೌಂಡರ್​​ ಗ್ಲೆನ್ ಮ್ಯಾಕ್ಸ್​ವೆಲ್​ ಕಳೆದ ತಿಂಗಳು ಗುವಾಹಟಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ನೇ ಟಿ 20 ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಅವರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ವಿರಾಟ್​ ಕೊಹ್ಲಿಯ ದಾಖಲೆ ಮುರಿದ ಸೂರ್ಯ

ಬೆಂಗಳೂರು: ಟಿ20 ಕ್ರಿಕೆಟ್​​ನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಮುರಿದಿದ್ದಾರೆ. ಅವರು ಬ್ಯಾಟಿಂಗ್ ದಿಗ್ಗಜರನ್ನು ಹಿಂದಿಕ್ಕಿ ಆಟದ ಕಿರು ಸ್ವರೂಪದಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟಿ 20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಈ ಸಾಧನೆ ಮಾಡಿದ್ದಾರೆ. ಜೋಹಾನ್ಸ್​ಬರ್ಗ್​ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಡುವಿನ ಸರಣಿಯ ನಿರ್ಣಾಯಕ ಮೂರನೇ ಪಂದ್ಯ ನಡೆಯಿತು. . ಹಂಗಾಮಿ ನಾಯಕ ಮತ್ತೊಂದು ಬಾರಿ ಭರ್ಜರಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ್ದಾರೆ. ಈ ವೇಳೆ ಕೊಹ್ಲಿಯ ದಾಖಲೆಯನ್ನು ಮುರಿದಿದ್ದಾರೆ.

ಭಾರತವು ಶುಭ್ಮನ್ ಗಿಲ್ (12) ಮತ್ತು ತಿಲಕ್ ವರ್ಮಾ (0) ಅವರನ್ನು ಬೇಗನೆ ಕಳೆದುಕೊಂಡಾಗ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್​ಗೆ ಬಂದರು ಅವರು ​ ದಕ್ಷಿಣ ಆಫ್ರಿಕಾದ ಬೌಲರ್​ಗ:ಳನ್ನು ಅಣಕಿಸುವ ಮೂಲಕ ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಅಲ್ಲದೆ, ವಿಡಿಯೋ ಗೇಮ್ ಮಾದರಿಯ ಇನ್ನಿಂಗ್ಸ್ ಆಡಿದರು.

ಔಟ್​ ಆಫ್ ಬಾಕ್ಸ್ ಶಾಟ್​ಗಳು

ಸೂರ್ಯಕುಮಾರ್ ಯಾದವ್ ತಮ್ಮ ಇನ್ನಿಂಗ್ಸ್​​ನಲ್ಲಿ ಕೆಲವು ಔಟ್-ಆಫ್-ಬಾಕ್ಸ್ ಶಾಟ್​ಗಳನ್ನು ಆಡಿದರು. ತಮ್ಮ ಅಪರೂಪದ ಹೊಡೆಗಳ ಮೂಲಕ ಪ್ರೇಕ್ಷಕರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದರು. ಮೊದಲಿಗೆ ಅವರು ಸರಣಿಯ ಸತತ ಎರಡನೇ ಅರ್ಧಶತಕವನ್ನು ದಾಖಲಿಸಿದರು. ಈ ಮೂಲಕ ತಂಡವನ್ನು ಅಗ್ರಸ್ಥಾನದಲ್ಲಿರಿಸಿದರು. ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡರೂ, ಅವರು ಎದುರಾಳಿಗಳ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಲಿಲ್ಲ.

ಟಿ20ಐನಲ್ಲಿ 117 ಸಿಕ್ಸರ್ ಬಾರಿಸಿದ ವಿರಾಟ್ ಕೊಹ್ಲಿ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಮುರಿದಿದ್ದಾರೆ. ಅವರು ಈಗ ಕೇವಲ 57 ಇನಿಂಗ್ಸ್​​ಗಳಲ್ಲಿ 123 ಸಿಕ್ಸರ್​ಗಳನ್ನು ಹೊಂದಿದ್ದಾರೆ. ಕೊಹ್ಲಿ 107 ಇನ್ನಿಂಗ್ಸ್​​ಗಳಲ್ಲಿ 117 ಸಿಕ್ಸರ್​​ ಬಾರಿಸಿದ್ದಾರೆ. ಇದು ಸೂರ್ಯಕುಮಾಋ್​ ಯಾದವ್ ಅವರನ್ನು ಪರಿಪೂರ್ಣ ಟಿ 20 ಬ್ಯಾಟರ್ ಎಂಬುದನ್ನು ಖಚಿತಪಡಿಸುತ್ತದೆ.

ಸೂರ್ಯಕುಮಾರ್ ಯಾದವ್ ಅವರಿಗಿಂತ ರೋಹಿತ್ ಶರ್ಮಾ ಮುಂದಿದ್ದಾರೆ. ರೋಹಿತ್​​ 140 ಇನಿಂಗ್ಸ್​ಗಳಲ್ಲಿ 182 ಸಿಕ್ಸರ್​ ಬಾರಿಸಿದ್ದಾರೆ. ಆದರೆ, ಸೂರ್ಯ ಸದ್ಯ ಬ್ಯಾಟಿಂಗ್ ಮಾಡುತ್ತಿರುವ ರೀತಿಯನ್ನು ನೋಡಿದರೆ ಅವರು ಹಿರಿಯ ಆರಂಭಿಕ ಆಟಗಾರನನ್ನು ಮೀರಿಸಬಹುದು.

ಟಿ20ಐನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರು

Exit mobile version