Site icon Vistara News

Suryakumar Yadav: 8 ವರ್ಷಗಳ ಹಿಂದೆಯೇ ಅದ್ಭುತ ಕ್ಯಾಚ್​ ಹಿಡಿದೆ ಎಂದು ವಿವಾಹ ವಾರ್ಷಿಕೋತ್ಸವ ಆಚರಿಸಿದ ಸೂರ್ಯಕುಮಾರ್

Suryakumar Yadav

Suryakumar Yadav: 'Most important catch'; Suryakumar Yadav's post for wife on anniversary goes viral

ಮುಂಬಯಿ: ಟಿ20 ವಿಶ್ವಕಪ್ ವಿಜೇತ ಹೀರೋ ಸೂರ್ಯಕುಮಾರ್ ಯಾದವ್(Suryakumar Yadav) ಅವರು ತಮ್ಮ ಎಂಟನೇ ವಿವಾಹ ವಾರ್ಷಿಕೋತ್ಸವನ್ನು ಪತ್ನಿ ದೇವಿಶಾ ಶೆಟ್ಟಿ(Devisha Shetty) ಜತೆ ಆಚರಿಸಿಕೊಂಡಿದ್ದಾರೆ. ವಿದೇಶದಲ್ಲಿ ಈ ಜೋಡಿ ತಮ್ಮ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಂಡಿರುವ ಫೋಟೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯಕುಮಾರ್​ ಅವರು ಪತ್ನಿಗೆ ಶುಭ ಹಾರೈಸಿರುವ ಪೋಸ್ಟ್​ ಇದೀಗ ವೈರಲ್​ ಆಗಿದೆ.

ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯಕುಮಾರ್​ ಯಾದವ್ ಅದ್ಭುತ ಕ್ಯಾಚ್​ ಹಿಡಿದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೇ ಕ್ಯಾಚ್​ ಅನ್ನು ಸೂರ್ಯಕುಮಾರ್ ತಮ್ಮ ವಿವಾಹ ವಾರ್ಷಿಕೋತ್ಸ ಆಚರಣೆಯ ವೇಳೆಯೂ ಬಳಸಿಕೊಂಡಿದ್ದಾರೆ. ‘ಆ ಕ್ಯಾಚ್‌ ಹಿಡಿದು 8 ದಿನಗಗಳು ಕಳೆದಿವೆ. ಆದರೆ ನನ್ನ ಪ್ರಮುಖ ಕ್ಯಾಚ್ 8 ವರ್ಷಗಳ ಹಿಂದೆ ಹಿಡಿದದ್ದು!’ ಎಂದು ಬರೆದುಕೊಳ್ಳುವ ಮೂಲಕ ಪತ್ನಿಗೆ ವಿವಾಹ ವಾರ್ಷಿಕೋತ್ಸದ ಶುಭ ಹಾರೈಸಿದ್ದಾರೆ. ಸದ್ಯ ಸೂರ್ಯ ಅವರು ಈ ಪೋಸ್ಟ್​ ವೈರಲ್ ಆಗಿದೆ. ಜುಲೈ 7, 2016ರಲ್ಲಿ ಸೂರ್ಯ ಮತ್ತು ದೇವಿಶಾ ವಿವಾಹವಾಗಿದ್ದರು. ದೇವಿಶಾ ಶೆಟ್ಟಿ ಮೂಲತಃ ಕರಾವಳಿಯವರಾಗಿದ್ದಾರೆ.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಮಿಲ್ಲರ್​ ಔಟ್​ ಆಗುತ್ತಿದ್ದಂತೆ ಭಾರತದ ಗೆಲುವು ಕೂಡ ಖಚಿತಗೊಂಡಿತ್ತು. ಸೂರ್ಯ ಈ ಕ್ಯಾಚ್​ ಹಿಡಿಯದೇ ಹೋಗಿದ್ದರೆ ಭಾರತ ಸೋಲುವ ಸಾಧ್ಯತೆಯೂ ಅಧಿಕವಾಗಿತ್ತು.

ಇದನ್ನೂ ಓದಿ Suryakumar Yadav: ದಿಲ್ಲಿಯಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಸೂರ್ಯಕುಮಾರ್​ ಯಾದವ್​; ವಿಡಿಯೊ ವೈರಲ್​

ಸೂರ್ಯಕುಮಾರ್​ ಯಾದವ್(Suryakumar Yadav Catch)​ ಅವರು ಹಿಡಿದ ಈ ಕ್ಯಾಚ್​ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಸೂರ್ಯಕುಮಾರ್​ ಬೌಂಡರಿ ಗೆರೆಯನ್ನು ತುಳಿದಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈಗಲೂ ಕೂಡ ಈ ಚರ್ಚೆ ನಿಂತಿಲ್ಲ.

ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ರಜನೀಶ್ ಗುಪ್ತಾ ಎಂಬವರು ಸೂರ್ಯಕುಮಾರ್​ ಕ್ಯಾಚ್​ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ನಾನು ಅಂದು ಮೈದಾನದ ಟಿವಿ ಕಾಮೆಂಟರಿ ಬಾಕ್ಸ್‌ನಲ್ಲಿದ್ದೆ. ಬಿಳಿ ಗೆರೆಯು ಬೌಂಡರಿಯಾಗಿರಲಿಲ್ಲ ಎಂದು ನಾನು ಹೇಳಬಲ್ಲೆ. ಏಕೆಂದರೆ ಬೌಂಡರಿ ರೋಪ್ ವೆಡ್ಜ್ ಆ ಬಿಳಿ ಗೆರೆಯ ಹಿಂದೆ ಇತ್ತು. ಪಂದ್ಯದ ಆರಂಭದಿಂದಲೂ ಹಾಗೆಯೇ ಇತ್ತು. ಪಿಚ್ ಅನ್ನು ಬದಲಾಯಿಸಿದಾಗ, ಬೌಂಡರಿಗಳನ್ನು ಸರಿಹೊಂದಿಸಲಾಗುತ್ತದೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.

Exit mobile version