Site icon Vistara News

Team India : ಸೂರ್ಯ ಅಥವಾ ಋತುರಾಜ್​; ನಾಯಕರಾಗಲು ಯಾರು ಬೆಸ್ಟ್​?

Team India

ಬೆಂಗಳೂರು: ಪಾದದ ಗಾಯದಿಂದಾಗಿ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿರುವುದರಿಂದ ನವೆಂಬರ್ 23 ರಿಂದ ಪ್ರಾರಂಭವಾಗುವ ಭಾರತ (Team India) ಮತ್ತು ಆಸ್ಟ್ರೇಲಿಯಾ ಟಿ 20 ಐ ಸರಣಿಗೆ ಟೀಮ್ ಇಂಡಿಯಾ ನಾಯಕನನ್ನು ಆಯ್ಕೆ ಮಾಡುವ ಸಂದಿಗ್ಧತೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆದಾರರು ಎದುರಿಸುತ್ತಿದ್ದಾರೆ. ಪಿಟಿಐ ಪ್ರಕಾರ, ನಿಯಮಿತ ಟಿ20 ಐ ನಾಯಕ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ವಿರುದ್ಧದ ಭಾರತದ ಮುಂಬರುವ ಐದು ಪಂದ್ಯಗಳ ಸರಣಿಗೆ ಲಭ್ಯವಿರುವುದಿಲ್ಲ, ಏಕೆಂದರೆ ಅವರು ಇನ್ನೂ ಎಡ ಪಾದದ ಅಸ್ಥಿರಜ್ಜು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಡರ್ಬನ್​ನಲ್ಲಿ ಡಿಸೆಂಬರ್ 10ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳೆಗೆ ಆಲ್ರೌಂಡರ್ ಫಿಟ್ ಆಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಖಚಿತಪಡಿಸಿದ್ದಾರೆ.

“ಹಾರ್ದಿಕ್ ಫಿಟ್ ಎಂದು ಘೋಷಿಸಲು ಮತ್ತು ಆಯ್ಕೆಗೆ ಲಭ್ಯವಿರಲು ಇನ್ನೂ ಸಮಯ ಬೇಕಾಗಿದೆ. ದಕ್ಷಿಣ ಆಫ್ರಿಕಾ ಸರಣಿಯ ಸಮಯದಲ್ಲಿ ಸಂಭಾವ್ಯ ‘ಆರ್ಟಿಪಿ’ (ರಿಟರ್ನ್ ಟು ಪ್ಲೇ) ಯೊಂದಿಗೆ ತನ್ನ ಪುನಶ್ಚೇತನ ಪೂರ್ಣಗೊಳಿಸಲು ಪ್ರಯತ್ನಿಸುವುದು ಅವರಿಗೆ ಹೆಚ್ಚು ಅನುಕೂಲಕರ. ಇದು ಖಂಡಿತವಾಗಿಯೂ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ ಸ್ಪೋರ್ಟ್ಸ್ ಸೈನ್ಸ್ ತಂಡದ ನಿರ್ಧಾರವಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: PAK vs NZ: ರಚಿನ್​ ಶತಕ; ಸಚಿನ್​ ಸೇರಿ ಹಲವು ದಿಗ್ಗಜರ ದಾಖಲೆ ಧೂಳೀಪಟ

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಋತುರಾಜ್ ಗಾಯಕ್ವಾಡ್ ಅವರಲ್ಲಿ ಒಬ್ಬರನ್ನು ಸ್ಟ್ಯಾಂಡ್-ಬೈ ನಾಯಕರಾಗಿ ಆಯ್ಕೆ ಮಾಡಲು ಆಯ್ಕೆದಾರರು ಹೆಣಗಾಡುತ್ತಿದ್ದಾರೆ. ಯಾಕೆಂದರೆ, ಸೂರ್ಯಕುಮಾರ್ ಯಾದವ್ ಟಿ20 ಐ ತಂಡದ ನಿಯೋಜಿತ ಉಪನಾಯಕರಾಗಿದ್ದಾರೆ. ಋತುರಾಜ್ ಗಾಯಕ್ವಾಡ್ ಇತ್ತೀಚೆಗೆ ಯುವ ಭಾರತೀಯ ತಂಡವನ್ನು ಕರದುಕೊಂಡು ಹೋಗಿ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ವಿಶ್ರಾಂತಿ ಕೇಳದಿದ್ದರೆ ಸೂರ್ಯ ನಾಯಕ

ಕ್ರಿಕೆಟ್ ವಿಶ್ವಕಪ್ ನಂತರ ಸೂರ್ಯಕುಮಾರ್ ಸ್ವತಃ ವಿಶ್ರಾಂತಿ ಕೇಳದಿದ್ದರೆ, ಅವರು ತಂಡವನ್ನು ಮುನ್ನಡೆಸುವ ನೆಚ್ಚಿನ ಆಟಗಾರ ಎಂದು ಪಿಟಿಐ ವರದಿ ಮಾಡಿದೆ. ನವೆಂಬರ್ 15 ರಂದು ನಡೆಯಲಿರುವ ವಿಶ್ವಕಪ್ ಸೆಮಿಫೈನಲ್ ನಂತರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ 20 ಪಂದ್ಯಗಳಿಗೆ ತಂಡವನ್ನು ಘೋಷಿಸುವ ಸಾಧ್ಯತೆಯಿದೆ. ಅನುಭವಿ ವೇಗಿ ಭುವನೇಶ್ವರ್ ಕುಮಾರ್ 12 ತಿಂಗಳ ಅಂತರದ ನಂತರ ಭಾರತ ತಂಡಕ್ಕೆ ಮರಳುವ ಸಾಧ್ಯತೆಯಿದೆ. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೂಡ ಸರಣಿಗಾಗಿ ಟಿ 20 ಐ ಸೆಟಪ್​ಗೆ ಮರಳಲು ಸಜ್ಜಾಗಿದ್ದಾರೆ. ಅರ್ಶ್​ದೀಪ್​ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್ ಕೂಡ 5 ಪಂದ್ಯಗಳ ಟಿ 20 ಐ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್​ಗೆ ಪಂತ್​ ರೆಡಿ?

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ. ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್​ ರಿಷಭ್ ಪಂತ್ (Rishabh Pant) ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲು ಇನ್ನು ಹೆಚ್ಚು ದಿನಗಳು ಬಾಕಿ ಇಲ್ಲ . ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ 4 ದಿನಗಳ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಭಾಗವಹಿಸಲು ದೆಹಲಿಯ ಸ್ಟಾರ್ ಆಟರಾಗ ಕೋಲ್ಕೊತಾಗೆ ತೆರಳಿದ್ದಾರೆ. ಹೀಗಾಗಿ ಅವರು ಶೀಘ್ರದಲ್ಲಿಯೇ ಮರಳುವ ಸೂಚನೆ ನೀಡಿದಂತಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ, 26ರ ಹರೆಯದ ರಿಷಭ್​ ಉತ್ತಮ ಸ್ಥಿತಿಯಲ್ಲಿದ್ದು, 2024ರ ಐಪಿಎಲ್ ಆವೃತ್ತಿಯಲ್ಲಿ ಆಡಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.

“ರಿಷಭ್ ಪಂತ್ ಉತ್ತಮ ಫಾರ್ಮ್​ನಲ್ಲಿದ್ದ ಅವರು ಮುಂದಿನ ಋತುವಿನಿಂದ ಆಡಲಿದ್ದಾರೆ. ಅವರು ಈಗ ಅಭ್ಯಾಸ ಮಾಡುವುದಿಲ್ಲ. ಅವರು ನವೆಂಬರ್ 11 ರವರೆಗೆ ಇಲ್ಲಿರುತ್ತಾರೆ. ಮುಂಬರುವ ಹರಾಜನ್ನು ಗಮನದಲ್ಲಿಟ್ಟುಕೊಂಡು ಪಂತ್ ತಂಡದ ನಾಯಕರಾಗಿರುವುದರಿಂದ ನಾವು ಅವರೊಂದಿಗೆ ತಂಡದ ಬಗ್ಗೆ ಚರ್ಚಿಸಿದ್ದೇವೆ,” ಎಂದು ಗಂಗೂಲಿ ಡಿಯಾ ಟುಡೇಗೆ ಮಾಹಿತಿ ನೀಡಿದ್ದಾರೆ. ಶಿಬಿರದ ಸಮಯದಲ್ಲಿ ರಿಷಭ್ ಪಂತ್ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version