Site icon Vistara News

Suryakumar Yadav : ಟೀಮ್​ ಬಸ್​ನಲ್ಲಿ ಅರ್ಶ್​ದೀಪ್​ ಸಿಂಗ್​ ನಿಂದಿಸಿದ ಸೂರ್ಯಕುಮಾರ್​ ಯಾದವ್​!

Suryakumar Yadav 1

ಬೆಂಗಳೂರು: ಭಾರತದ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಟಿ 20 ಪಂದ್ಯಗಳಲ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಅವರು ಈ ಮಾದರಿಯಲ್ಲಿ ರನ್​ಗಳನ್ನು ಸೂರೆಗೈಯುತ್ತಿದ್ದಾರೆ. ಜೋಹಾನ್ಸ್​​ಬರ್ಗ್​ನ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಡಿಸೆಂಬರ್ 15ರ ಗುರುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ 33 ವರ್ಷದ ಆಟಗಾರ ಶತಕ ಬಾರಿಸಿದ್ದಾರೆ. ಇದು ಕಿರು ಸ್ವರೂಪದಲ್ಲಿ ಸ್ಫೋಟಕ ಬ್ಯಾಟರ್​​ನ ನಾಲ್ಕನೇ ಶತಕ ತಂಡವನ್ನು ಮುನ್ನಡೆಸಿದ ಅವರು 56 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎಂಟು ಸಿಕ್ಸರ್​ಗಳ ಸಮೇತ ಬಾರಿಸಿ 100 ರನ್​ಗಳ ಬಾರಿಸಿದ್ದರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು .ಪ್ರತಿಯಾಗಿ ಎದುರಾಳಿ ತಂಡವನ್ನು 95 ರನ್​ಗಳಿಗೆ ನಿಯಂತ್ರಿಸಿದ 106 ರನ್ ಗಳ ಜಯ ಸಾಧಿಸಿತು. ಇದರೊಂದಿಗೆ ಸರಣಿಯನ್ನು 1-1ರಿಂದ ಸಮಬಲಗೊಂಡಿತು. ಏತನ್ಮಧ್ಯೆ ಅವರು ಫೀಲ್ಡಿಂಗ್ ವೇಳೆ ಗಾಯಗೊಂಡರು. ಪಂದ್ಯ ಮುಗಿದ ನಂತರ ಸೂರ್ಯಕುಮಾರ್ ಕೂಡ ತಂಡದ ಬಸ್​​ನಲ್ಲಿ ವೇಗದ ಬೌಲರ್​ ಅರ್ಶ್​ದೀಪ್ ಸಿಂಗ್​ ಅವರೊಂದಿಗೆ ಕೋಪದಿಂದ ಮಾತನಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಸೂರ್ಯಕುಮಾರ್ ಅರ್ಶ್​ದೀಪ್​ ಕಡೆಗೆ ಬೆರಳು ತೋರಿಸಿ ನಿಂದಿಸುತ್ತಿರುವುದು ಕಂಡು ಬಂದಿದೆ. ಭಾರತದ ಸ್ಟಾರ್ ಬ್ಯಾಟರ್​ ನಿಜವಾಗಿಯೂ ಕೋಪಗೊಂಡಿದ್ದಾರೆಯೇ ಅಥವಾ ವೇಗದ ಬೌಲರ್ ಮೇಲೆ ತಮಾಷೆ ಮಾಡುತ್ತಿದ್ದರೇ ಎಂಬುದು ಸ್ಪಷ್ಟವಿಲ್ಲ.

ಇದನ್ನೂ ಓದಿ : Suryakumar Yadav : ವಿರಾಟ್​ ಕೊಹ್ಲಿಯ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್​​

ಏತನ್ಮಧ್ಯೆ, ಮೂರನೇ ಟಿ 20 ಯಲ್ಲಿ ತಮ್ಮ ರೋಚಕ ಶತಕದೊಂದಿಗೆ, ಸೂರ್ಯಕುಮಾರ್ ಯಾದವ್ ಅವರು ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಒಳಗೊಂಡ ಎಲೈಟ್ ಕ್ಲಬ್​ಗೆ ಸೇರಿದ್ದಾರೆ. ವಿಶೇಷವೆಂದರೆ, ಈ ಮೂವರೂ ತಲಾ ನಾಲ್ಕು ಶತಕಗಳನ್ನು ಹೊಂದಿದ್ದಾರೆ, ಆದಾಗ್ಯೂ, ಸೂರ್ಯಕುಮಾರ್ ಈ ಮೈಲಿಗಲ್ಲನ್ನು ತಲುಪಲು ಕನಿಷ್ಠ ಸಂಖ್ಯೆಯ ಇನಿಂಗ್ಸ್​ಗಳನ್ನು (57 ಇನ್ನಿಂಗ್ಸ್) ತೆಗೆದುಕೊಂಡಿದ್ದಾರೆ.

ಸೂರ್ಯನ ಅಬ್ಬರದ ಬ್ಯಾಟಿಂಗ್​

ಸೂರ್ಯಕುಮಾರ್ ಯಾದವ್ ಕಳೆದ ಒಂದು ವರ್ಷದಿಂದ ಟಿ20 ಕ್ರಿಕೆಟ್​​ನಲ್ಲಿ ನಂ.1 ಬ್ಯಾಟ್ಸ್ಮನ್ ಆಗಿದ್ದಾರೆ.
ಅವರು ಪ್ರಸ್ತುತ ಟಿ 20 ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ 865 ರೇಟಿಂಗ್ಸ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಅಗ್ರಸ್ಥಾನದಲ್ಲಿ ತಮ್ಮ ಪಾರಮ್ಯ ಮುಂದುವರಿಸಿದ್ದಾರೆ. ಮೂರನೇ ಟಿ 20 ಐನಲ್ಲಿ ಕುಲ್ದೀಪ್ ಯಾದವ್ ಕೂಡ ಮಿಂಚಿದ್ದಾರೆ. ಅವರು ತಮ್ಮ ಹುಟ್ಟುಹಬ್ಬದಂದು ಟಿ 20 ಐ ಮಾದರಿಯಲ್ಲಿ ಎರಡು ಬಾರಿ ಐದು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಎಡಗೈ ಸ್ಪಿನ್ನರ್ ಡೇವಿಡ್ ಮಿಲ್ಲರ್ ಅವರ ಅಮೂಲ್ಯ ವಿಕೆಟ್ ಸೇರಿದಂತೆ 2.5 ಓವರ್​ಗಳಲ್ಲಿ 17 ರನ್​ಗೆ 5 ವಿಕೆಟ್ ಉರುಳಿಸಿದ್ದಾರೆ. ಇದು ಭಾರತಕ್ಕೆ ದಕ್ಷಿಣ ಆಫ್ರಿಕಾವನ್ನು 95 ರನ್​ಗಳಿಗೆ ಕಟ್ಟಿಹಾಕಲು ಸಹಾಯ ಮಾಡಿತು. ಡಿಸೆಂಬರ್ 17 ರ ಭಾನುವಾರದಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸುತ್ತಿರುವುದರಿಂದ ಯಾದವ್ ತಮ್ಮ ಫಾರ್ಮ್ ಅನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ.

Exit mobile version