ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಯಾರ್ಕರ್ ಸ್ಟಾರ್ ಶಾಹೀನ್ ಅಫ್ರಿದಿ(Shaheen Afridi) ಟಿ20 ಬ್ಲಾಸ್ಟ್(T20 Blast) ಟೂರ್ನಿಯಲ್ಲಿ ಇನಿಂಗ್ಸ್ನ ಮೊದಲ ಓವರ್ನಲ್ಲಿಯೇ ನಾಲ್ಕು ವಿಕೆಟ್ಗಳನ್ನು ಕಬಳಿಸಿ ಮಿಂಚಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ. ವಿಪರ್ಯಾಸವೆಂದರೆ ಅವರ ಈ ಘಾತಕ ದಾಳಿಯ ಮಧ್ಯೆಯೂ ತಂಡ 2 ವಿಕೆಟ್ ನಿಂದ ಸೋಲು ಕಂಡಿದೆ.
ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಈ ಪಂದ್ಯದಲ್ಲಿ ನಾಟಿಂಗ್ಹ್ಯಾಮ್ ಶೈರ್(Nottinghamshire) ಪರ ಆಡಿದ ಎಡಗೈ ವೇಗಿ ಅಫ್ರಿದಿ, ಮೊದಲ ಓವರ್‌ನಲ್ಲೇ ಅಲೆಕ್ಸ್ ಡೇವಿಡ್ಸ್(0), ಕ್ರಿಸ್ ಬೆನ್ಜಮಿನ್(0), ಡ್ಯಾನ್ ಮೌಸ್ಲಿ(1) ಹಾಗೂ ಎಡ್ ಬೆರ್ನಾರ್ಡ್(0) ಅವರನ್ನು ಪೆವಿಲಿಯನ್ಗೆ ಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ(t20 world record) ಮೊದಲ ಓವರ್‌ನಲ್ಲೇ 4 ವಿಕೆಟ್ ಉರುಳಿಸಿದ ಮೊದಲ ವೇಗಿ ಎಂಬ ವಿಶ್ವದಾಖಲೆ ನಿರ್ಮಿಸಿದರು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನಾಟಿಂಗ್ಹ್ಯಾಮ್ ಶೈರ್ ಭರ್ತಿ 20 ಓವರ್ ಆಡಿ 168ಕ್ಕೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಬರ್ಮಿಂಗ್ಹ್ಯಾಮ್ ಬೇರ್ಸ್(Warwickshire) ತಂಡವು ಅಫ್ರಿದಿ ಅವರ ಘಾತಕ ಬೌಲಿಂಗ್ ದಾಳಿಯ ಮಧ್ಯೆಯೂ ದಿಟ್ಟ ಹೋರಾಟ ನೆಡೆಸಿ 19.1 ಓವರ್ಗಳಲ್ಲಿ 8 ವಿಕೆಟ್ಗೆ 172 ರನ್ ಗಳಿಸಿ ಅಮೋಗ ಗೆಲುವು ದಾಖಲಿಸಿತು. ಸೋಲು ಕಂಡ ನಾಟಿಂಗ್‌ಹ್ಯಾಮ್‌ಶೈರ್ ತಂಡವು ಕ್ವಾರ್ಟರ್ ಫೈನಲ್‌ಗೇರುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ಕೈಚೆಲ್ಲಿತು. ಆದರೆ ಶಾಹೀನ್ ಅವರ ಅಮೋಘ ಬೌಲಿಂಗ್(4-29) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ ಕೆಲವೇ ದಿನಗಳಲ್ಲಿ ನಿರುದ್ಯೋಗಿಗಳಾಗಲಿದ್ದಾರೆ ಪಾಕಿಸ್ತಾನ ಕ್ರಿಕೆಟಿಗರು!
Shaheen Afridi, you cannot do that!! 💥 https://t.co/ehXxmtz6rX pic.twitter.com/wvibWa17zA
— Vitality Blast (@VitalityBlast) June 30, 2023
ಶಾಹೀನ್ ಅಫ್ರಿದಿ ಬೌಲರ್ ಕಂಡ ಕೆಲವರು ಏಕದಿನ ವಿಶ್ವ ಕಪ್ ಕಪ್ನಲ್ಲಿ ಇದು ಎಚ್ಚರಿಕೆ ಗಂಟೆಯಾಗಿದೆ ಎಂದು ಬಣ್ಣಿಸಿದ್ದಾರೆ. ಇದಕ್ಕೆ ಕಾರಣ 2021 ಟಿ20 ವಿಶ್ವ ಕಪ್ನಲ್ಲಿ ರೋಹಿತ್,ರಾಹುಲ್ ಅವರ ವಿಕೆಟನ್ನು ಮೊದಲ ಓವರ್ನಲ್ಲಿ ಕಿತ್ತು ಭಾರತದ ಸೋಲಿಗೆ ಕಾರಣರಾಗಿದ್ದರು. ಇದೇ ಕಾರಣವನ್ನು ಮುಂದಿಟ್ಟು ಕೆಲ ಪಾಕ್ ನೆಟ್ಟಿಗರು ಈ ರೀತಿ ಹೇಳಿದ್ದಾರೆ.
ಘಾತಕ ಯಾರ್ಕರ್ ಮತ್ತು ಇನ್ಸ್ವಿಂಗ್ ಮಾಡುವಲ್ಲಿ ಸೈ ಎನಿಸಿಕೊಂಡಿರುವ ಅಫ್ರಿದಿ ವಿಶ್ವ ಕಪ್ನಲ್ಲಿಯೂ ಬೌಲಿಂಗ್ ಕಮಾಲ್ ಮಾಡಲು ಎದುರುನೋಡುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಣ ವಿಶ್ವ ಕಪ್ ಲೀಗ್ ಪಂದ್ಯ ಅಕ್ರೋಬರ್ 15ರಂದು ಅಹಮದಾಬಾದ್ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.