ನವ ದೆಹಲಿ : T20 Ind v/s Sa | ದಕ್ಷಿಣ ಆಫ್ರಿಕ ವಿರುದ್ಧ ದೊಡ್ಡ ಮಟ್ಟದ ಟಾರ್ಗೆಟ್ ನೀಡಿದರೂ ಭಾರತಕ್ಕೆ ಮ್ಯಾಚ್ ಗೆಲ್ಲಲು ಸಾಧ್ಯವಾಗಲಿಲ್ಲ. ಐದು ಪಂದ್ಯಗಳ T20 ಸರಣಿ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ಭಾರತದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಬ್ಯಾಟಿಂಗ್‌ನಲ್ಲಿ ಪೌರುಷ ತೋರಿದ ಭಾರತ ತಂಡವು ಬೌಲಿಂಗ್‌ನಲ್ಲಿ ಸಪ್ಪೆಯಾಯಿತು. ಡೇವಿಡ್ ಮಿಲ್ಲರ್ ಹಾಗೂ ವಾನ್‌ಡರ್ ಡುಸೇನ್ ರೋಚಕ ಜತೆಯಾಟ 211 ರನ್ ಚೇಸ್ ಮಾಡುವಲ್ಲಿ ಪೂರಕವಾಯಿತು. ಇದರಿಂದ ಭಾರತ ವಿಶ್ವ ದಾಖಲೆ ಬರೆಯುವ ಅವಕಾಶವನ್ನು ಕಳೆದುಕೊಂಡಿದೆ.
ಟಾಸ್ ಗೆದ್ದು ದಕ್ಷಿಣ ಆಫ್ರಿಕಾ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಪರ ಇಬ್ಬರು ಹೊಸ ಓಪನರ್‌ಗಳು ಅದ್ಭುತ ಆರಂಭ ನೀಡಿದರು. ಋತುರಾಜ್ ಗಾಯಕ್‌ವಾಡ್ ಅವರ ಜೋಡಿ ಈ ಪಂದ್ಯದಲ್ಲಿ ಹೊಸ ಭರವಸೆಯನ್ನು ಹುಟ್ಟಿಹಾಕಿತು. ಅಂತಿಮ ಹಂತದಲ್ಲಿ ಕೆ.ಎಲ್ ರಾಹುಲ್ ಗಾಯಾಳು ಆದ ಕಾರಣದಿಂಧ ಸರಣಿಯಿಂದ ಹೊರ ಉಳಿಯಬೇಕಾಯಿತು. ರಿಷಭ್ ಪಂತ್ ನೇತೃತ್ವದಲ್ಲಿ 211 ರನ್ ಬಾರಿಸಿ ದೊಡ್ಡ ಟಾರ್ಗೆಟ್ ನೀಡುವಲ್ಲಿ ಭಾರತ ಯಶಸ್ವಿಯಾಯಿತು.
ಇಷನ್ ಕಿಶನ್ ರೋಚಕ ಆಟ!
ಶುರುವಿನಿಂದಲೇ ಅಗ್ರೆಸ್ಸಿವ್ ಆಟ ಪ್ರದರ್ಶಿಸಿದ ಇಷನ್ ಕಿಶನ್ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡಂತೆ ಆಡಿದರು. 48 ಬಾಲ್‌ನಲ್ಲಿ 76 ರನ್ ಬಾರಿಸುವ ಮೂಲಕ ಇಷನ್ ಭರ್ಜರಿ ಆಟವಾಡಿದರು. ಅವರ ಒಂದೊಂದು ಶಾಟ್ ಕೂಡ ನೋಡುಗರು ಶಿಳ್ಳೆ ಹೊಡೆಯುವ ಹಾಗಿತ್ತು. ಇಷನ್ ಕಿಶನ್ ಒಬ್ಬರಿಂದಲೇ ಈ ದೊಡ್ಡ ಸ್ಕೋರ್ ಕಲೆಹಾಕಲು ಸಾಧ್ಯವಾದುದಲ್ಲ. ತಂಡದ ಪ್ರತಿಯೊಬ್ಬ ಆಟಗಾರನೂ ಪಂದ್ಯದಲ್ಲಿ ತಮ್ಮ ಜವಾಬ್ದಾರಿ ಮೆರೆದರು. ಮುಂಬರಲಿರುವ ಟಿ20 ವಿಶ್ವಕಪ್‌ಗೆ ಈ ಸರಣಿ ಮಾನದಂಡವಾಗಬಹುದು ಎಂದು ಅರಿತುಕೊಂಡಿರುವ ಆಟಗಾರರು ಪೂರ್ಣ ಪರಿಶ್ರಮದಿಂದ ಆಡಿದ್ದರು. ಆದರೆ ಗುಣಮಟ್ಟದ ಬೌಲಿಂಗ್ ಮಾಡುವಲ್ಲಿ ಭಾರತ ವಿಫಲವಾಗಿದೆ.
ಉಳಿದವರ ಸ್ಕೋರ್:
ಋತುರಾಜ್ ಗಾಯಕ್ವಾಡ್: 23(15)
ಶ್ರೇಯಸ್ ಅಯ್ಯರ್: 36(27)
ರಿಷಭ್ ಪಂತ್: 29(16)
ಹಾರ್ದಿಕ್ ಪಾಂಡ್ಯ: 29(16)
212 ರನ್ ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕ ತಂಡ ಮೂರನೇ ಓವರ್‌ನಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ಬುವಾಮ ಕೇವಲ 8 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬ್ಯಾಟಿಂಗ್ ಮಾಡಿದ ಕ್ವಿಂಟನ್ ಡಿ ಕಾಕ್, ಹಾಗೂ ಪ್ರೆಟೊರಿಯಸ್ ಒಳ್ಳೆಯ ಜತೆಯಾಟ ನಡೆಸಿ ತಂಡಕ್ಕೆ ಒಳ್ಳೆಯ ರನ್ ರೇಟ್ ತಂದುಕೊಟ್ಟರು. ಆದರೆ ಪ್ರೆಟೊರಿಯಸ್ ಅವರ ವಿಕೆಟ್ ಪಡೆಯುವ ಮೂಲಕ ಹರ್ಷಲ್ ಪಟೇಲ್ ಈ ಜತೆಯಾಟವನ್ನು ಬ್ರೇಕ್ ಮಾಡಿದರು. ಡೇವಿಡ್ ಮಿಲ್ಲರ್ ಪಿಚ್‌ಗೆ ಬಂದ ನಂತರ ದಕ್ಷಿಣ ಆಫ್ರಿಕ ತಂಡಕ್ಕೆ ಹೊಸ ಭರವಸೆ ಮೂಡಿದಂತಾಯಿರು. ದಕ್ಷಿಣ ಆಫ್ರಿಕಕ್ಕೆ ಕೊನೆಯ 6 ಓವರ್‌ನಲ್ಲಿ 78 ರನ್ ಅವಶ್ಯಕತೆಯಿತ್ತು. ಡೇವಿಡ್ ಮಿಲ್ಲರ್ ಹಾಗೂ ವ್ಯಾನ್ ಡರ್ ಹುಸ್ಸೇನ್ ಅದ್ಭುತ ಜತೆಯಾಟ ನಡೆಸಿ ದಕ್ಷಿಣ ಆಫ್ರಿಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಡೇವಿಡ್ ಮಿಲ್ಲರ್: 64(31)
ವ್ಯಾನ್ ಡರ್ ಡುಸೇನ್ 75(46)
ಇದನ್ನೂ ಓದಿ: T20 Ind vs Sa | ಟಾಸ್ ಸೋತ ಪಂತ್, ಭಾರತ ಬ್ಯಾಟಿಂಗ್ ಫಸ್ಟ್, ದಿನೇಶ್ ಕಾರ್ತಿಕ್‌ಗೆ ಚಾನ್ಸ್