Site icon Vistara News

T20 Ind v/s Sa | ಕ್ಲಾಸೀನ್‌ ಕ್ಲಾಸಿಕ್‌ ಆಟ, ಭಾರತಕ್ಕೆ ಸತತ 2ನೇ ಸೋಲುಣಿಸಿದ ಬವುಮ ಪಡೆ

T20 Ind v/s Sa |

ನವ ದೆಹಲಿ: T20 Ind v/s Sa | ಹೆನ್ರಿಚ್‌ ಕ್ಲಾಸೀನ್‌ ಅವರ ಕ್ಲಾಸಿಕ್‌ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಟಿ20 ಸರಣಿಯಲ್ಲಿ ಸತತ ಎರಡನೇ ಸೋಲುಣಿಸಿದೆ. ಟೀಮ್‌ ಇಂಡಿಯಾ ನೀಡಿದ 149 ರನ್‌ಗಳ ಗುರಿಯನ್ನು ಇನ್ನೂ ಹತ್ತು ಎಸೆತಗಳು ಬಾಕಿ ಇರುವಂತೆಯೇ ದಾಟಿ ನಾಲ್ಕು ವಿಕೆಟ್‌ಗಳ ವಿಜಯವನ್ನು ತೆಂಬ ಬವುಮ ಪಡೆ ಸಂಪಾದಿಸಿತು.

ಕಟಕ್‌ ನಲ್ಲಿ ನಡೆದ ಈ ಪಂದ್ಯದಲ್ಲಿ ಒಂದು ಹಂತದಲ್ಲಿ ಭುವನೇಶ್ವರ್‌ ಕುಮಾರ್‌ ಅವರು ದಕ್ಷಿಣ ಆಫ್ರಿಕಾ ತಂಡದ ನಾಲ್ವರು ಅಪಾಯಕಾರಿ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಉರುಳಿಸಿ ಅದ್ಭುತ ಸಾಧನೆ ಮಾಡಿದರೂ ಕೇವಲ 46 ಎಸೆತಗಳಲ್ಲಿ 81 ರನ್‌ ಬಾರಿಸಿದ ಹೆನ್ರಿಚ್‌ ಕ್ಲಾಸೀನ್‌ ಅವರ ಕ್ಲಾಸ್‌ ಆಟದ ಮುಂದೆ ಅದು ಮಂಕಾಯಿತು. ಕ್ಲಾಸೀನ್‌ ಏಳು ಬೌಂಡರಿ, ಐದು ಸಿಕ್ಸರ್‌ ಬಾರಿಸಿದರು. ಅವರ ಈ ಆಟದಿಂದ ಭಾರತ ಎರಡನೇ ಪಂದ್ಯವನ್ನೂ ಕಳೆದುಕೊಳ್ಳುವಂತಾಯಿತು. ಮೊದಲ ಪಂದ್ಯದಲ್ಲಿ ರಿಷಭ್‌ ಪಂತ್‌ ನೇತೃತ್ವದ ಭಾರತದ ಯುವ ಕ್ರಿಕೆಟ್‌ ತಂಡ ಕಳೆದ ಪಂದ್ಯದಲ್ಲಿ ಉತ್ತಮ ಟಾರ್ಗೆಟ್‌ ನೀಡಿದ್ದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿ ಬೌಲಿಂಗ್‌ ಜತೆ ಬ್ಯಾಟಿಂಗ್‌ನಲ್ಲಿ ಕೂಡ ಟೀಮ್‌ ಇಂಡಿಯಾದ ಆಟಗಾರರು ವಿಫಲರಾಗಿದ್ದಾರೆ.

ಟಾಸ್‌ ಗೆದ್ದ ಬವುಮ

ದಕಿಣ ಆಫ್ರಿಕ ಈ ಬಾರಿಯೂ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಬವುಮ ಪಡೆ ಈ ಬಾರಿ ಬೌಲಿಂಗ್‌ನಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡಲಿಲ್ಲ. ಋತುರಾಜ್‌ ಗಾಯಕ್ವಾಡ್‌ ಅವರನ್ನು ಮೊದಲ ಓವರ್‌ನಲ್ಲೇ ಆಫ್ರಿಕಾ ತಂಡ ಪೆವಿಲಿಯನ್‌ಗೆ ಕಳುಹಿಸಿತು. ಇಷಾನ್‌ ಕಿಶನ್‌ ಹಾಗೂ ಶ್ರೇಯಸ್‌ ಅಯ್ಯರ್‌ ಸ್ವಲ್ಪ ಸಮಯ ಒಳ್ಳೆಯ ಜತೆಯಾಟ ನಡೆಸಿದರು. 21 ಬಾಲ್‌ಗೆ 34 ರನ್‌ ಗಳಿಸಿದಾಗ ಇಷಾನ್‌ ಕಿಶನ್‌ ನಾರ್ತ್‌ಜೆಗೆ ವಿಕೆಟ್‌ ಒಪ್ಪಿಸಿದರು. ಶ್ರೇಯಸ್‌ ಅಯ್ಯರ್‌ 35 ಬಾಲ್‌ಗೆ 40 ರನ್‌ ಗಳಿಸಿ ಔಟಾದರು. ಆ ಬಳಿಕ ಪಿಚ್‌ನಲ್ಲಿ ಗಟ್ಟಿಯಾಗಿ ನಿಲ್ಲಲು ಯಾರಿಂದಲೂ ಸಾಧ್ಯವಾಗಲಿಲ್ಲ.

ನಂತರ ಬಂದ ದಿನೇಶ್‌ ಕಾರ್ತಿಕ್‌ ಉತ್ತಮವಾಗಿ ಆಡಿ ತಂಡದ ಸ್ಕೋರ್‌ 147ಕ್ಕೆ ಕೊಂಡೊಯ್ದರು. 21 ಬಾಲ್‌ಗೆ 30 ರನ್‌ ಗಳಿಸುವ ಮೂಲಕ ದಿನೇಶ್‌ ಮಿಂಚಿದರು. ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌ ಹಾಗೂ ನಾಯಕ ರಿಷಭ್‌ ಪಂತ್‌ ಯಾರೊಬ್ಬರಿಂದಲೂ ಸಮಾಧಾನಕರ ಆಟ ಕಂಡು ಬರಲಿಲ್ಲ.

ಭಾರತದ ಬೌಲಿಂಗ್‌ ಆರಂಭದಲ್ಲಿ ಅದ್ಭುತವಾಗಿತ್ತು. ಭುವನೇಶ್ವರ್‌ ಕುಮಾರ್‌ ಮೊದಲ ಓವರ್‌ನಲ್ಲೇ ರೀಝಾ ಹೆಂಡ್ರಿಕ್ಸ್‌ ಅವರ ವಿಕೆಟ್‌ ಪಡೆದರು. ಪ್ರೆಟೊರಿಯಸ್‌ ಹಾಗೂ ವ್ಯಾನ್‌ಡರ್‌ ಡುಸೇನ್‌ ಅವರ ವಿಕೆಟ್‌ ಕೂಡ ಭುವನೇಶ್ವರ ಕುಮಾರ್‌ ಪಾಲಾಯಿತು. ಆದರೆ, ಕ್ಲಾಸೀನ್‌ ಅವರ ಅದ್ಭುತ ಆಟ (81 ರನ್‌) ದಕ್ಷಿಣ ಆಫ್ರಿಕ ತಂಡದ ಗೆಲುವಿಗೆ ಕಾರಣವಾಯಿತು. 46 ಬಾಲ್‌ಗೆ 81 ರನ್‌ ಗಳಿಸಿ ಕ್ಲಾಸೀನ್‌ ಕ್ಲಾಸಿಕ್ ಆಟವನ್ನಾಡಿದರು. ಅವರಿಗೆ ತಂಡದ ನಾಯಕ ಬವುಮ ಉತ್ತಮ ಸಾಥ್‌ ನೀಡಿದರು. ಇನ್ನೂ ಹತ್ತು ಎಸೆತಗಳು ಇರುವಂತೆಯೇ ದಕ್ಷಿಣ ಆಫ್ರಿಕಾ ವಿಜಯ ಪತಾಕೆ ಹಾರಿಸಿತು. ಭುವನೇಶ್ವರ್‌ ಒಬ್ಬರು ನಾಲ್ಕು ವಿಕೆಟ್‌ ಕಿತ್ತದ್ದು ಬಿಟ್ಟರೆ ಭಾರತದ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಸಮಾಧಾನಕರವಾಗಿರಲಿಲ್ಲ. ಸರಣಿಯಲ್ಲಿ ಇನ್ನೂ ಮೂರು ಪಂದ್ಯಗಳಿದ್ದು, ಭಾರತ ಮುಂದಿನ ಪಂದ್ಯಗಳೆಲ್ಲವನ್ನೂ ಗೆದ್ದರೆ ಮಾತ್ರ ಸರಣಿ ವಿಜಯ ಸಿಗಲಿದೆ.

ಇದನ್ನೂ ಓದಿ: T20 Ind v/s Sa | ಎರಡನೇ ಪಂದ್ಯದಲ್ಲೂ ಟಾಸ್‌ ಸೋತ ಪಂತ್‌ ಪಡೆ, ಬೌಲಿಂಗ್ ಆಯ್ಕೆ ಮಾಡಿಕೊಂಡ ದ.ಆಫ್ರಿಕಾ

Exit mobile version