ಕಟಕ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ (T20 Ind v/s Sa) 5 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ದಕ್ಷೀಣ ಆಫ್ರಿಕಾ ಮೊದಲ ಪಂದ್ಯದಲ್ಲೂ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತ್ತು. ಈ ಬಾರಿಯೂ ಅದೇ ರೀತಿ ಗೇಮ್ ಪ್ಲಾನ್ ಮಾಡಿಕೊಂಡು ಬೌಲಿಂಗ್ ಮಾಡುತ್ತಿದೆ.
ರಿಷಭ್ ಪಂತ್ ಟೀಮ್ ಇಂಡಿಯಾ ಗೆಲುವಿನ ಹುಮ್ಮಸ್ಸಿನಲ್ಲಿಯೇ ಬ್ಯಾಟಿಂಗ್ ಮಾಡುತ್ತಿದ್ದು,. ಕಳೆದ ಪಂದ್ಯದ ಪೆಟ್ಟಿನಿಂದ ಹೊರಬಂದು ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಲಿದೆಯೇ ಎಂದು ಕಾದು ನೋಡಬೇಕಿದೆ. ಈಗಾಗಲೇ ಬ್ಯಾಂಟಿಂಗ್ ಆರಂಭಿಸಿರುವ ಇಂಡಿಯಾ ಎರಡು ವಿಕೇಟ್ ಕಳೆದುಕೊಂಡು 50 ರನ್ ಮಾಡಿದೆ.
ಪಿಚ್ ರಿಪೊರ್ಟ್ ಏನೆನ್ನುತ್ತದೆ?
ಒಡಿಶಾದ ಬಾರಾಮತಿ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯುತ್ತಿದೆ. ಪಿಚ್‌ನಲ್ಲಿ ತೇವಾಂಶ ಇರುವ ಕಾರಣದಿಂದ ವೇಗಿ ಬೌಲರ್‌ಗಳಿಗೆ ಪೂರಕವಾಗಿದೆ. ಆದರೆ ಸ್ಪಿನ್ ಬೌಲರ್‌ಗಳಿಗೆ ಇದು ಬಾಧಕವಾಗಲಿದೆ. ಎರಡೂವರೆ ವರ್ಷದ ಬಳಿಕ ಇಲ್ಲಿ ಅಂತಾರಾಷ್ಟ್ರೀಯ ಮ್ಯಾಚ್ ನಡೆಯುತ್ತಿರುವ ಕಾರಣದದಿಂದ ಜನಸಾಗರವೇ ಹರಿದುಬಂದಿದೆ.
ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದವರು ಸರಾಸರಿ 160-170 ರನ್ ಗಳಿಸಿದ್ದಾರೆ. ಆದರೆ, ಎರಡನೇ ಬ್ಯಾಟಿಂಗ್ ಮಾಡುವವರಿಗೆ ಈ ಪಿಚ್ ಸಹಾಯಕವಾಗಿರುತ್ತದೆ. ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡಕ್ಕೆ ತಲೆನೋವಾಗುವ ಸಾಧ್ಯತೆ ಇದೆ.
ತಂಡದ ವಿವರ
ಭಾರತ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್.
ದಕ್ಷಿಣ ಆಫ್ರಿಕಾ: ರೀಜಾ ಹ್ಯಾಂಡ್ರಿಕ್ಸ್, ಟೆಂಬಾ ಬುವಾಮ, ರಸ್ಸಿ ವ್ಯಾನ್ ಡರ್ ಡಸ್ಸೆನ್, ಡೇವಿಡ್ ಮಿಲ್ಲರ್, ತ್ರಿಸ್ಟನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಡ್ವೈನ್ ಪಿಟೋರಿಯಸ್, ಕೇಶವ್ ಮಹಾರಾಜ್, ತಬ್ರಿಜ್ ಶಂಸಿ, ಕಗಿಸೊ ರಬಾಡ, ಅನ್ರಿಚ್ ನೊಕಿಯೆ.
ಇದನ್ನೂ ಓದಿ: T20 Ind v/s Sa | ಡೇವಿಡ್ ಮಿಲ್ಲರ್, ಡುಸೇನ್ ರೋಚಕ ಬ್ಯಾಟಿಂಗ್, ದೊಡ್ಡ ಟಾರ್ಗೆಟ್ ನೀಡಿದರೂ ಸೋತ ಭಾರತ