Site icon Vistara News

T20 Ind vs Sa | ಟಾಸ್‌ ಸೋತ ಪಂತ್‌, ಭಾರತ ಬ್ಯಾಟಿಂಗ್‌ ಫಸ್ಟ್‌, ದಿನೇಶ್‌ ಕಾರ್ತಿಕ್‌ಗೆ ಚಾನ್ಸ್‌

rishab panth

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಬಹು ನಿರೀಕ್ಷಿತ ಟಿ20 (T20 ind vs sa) ಸರಣಿಗೆ ಚಾಲನೆ ಸಿಕ್ಕಿದೆ. 5 ಪಂದ್ಯಗಳ ಸರಣಿಯ ಮೊದಲ ಮ್ಯಾಚ್‌ನಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬುವಾಮಾ ಬೌಲಿಂಗ್‌ ಆಯ್ದುಕೊಂಡರು.

ಇದೇ ಮೊದಲ ಬಾರಿಗೆ ನಾಯಕನಾಗಿ ರಿಷಬ್‌ ಪಂತ್‌ ಟೀಂ ಇಂಡಿಯಾ ಮುನ್ನಡೆಸುತ್ತಿದ್ದಾರೆ. ಕೆ.ಎಲ್‌. ರಾಹುಲ್‌ ಅನುಪಸ್ಥಿತಿಯಲ್ಲಿ ಋತುರಾಜ್‌ ಗಾಯಕ್ವಾಡ್‌ ಹಾಗೂ ಇಷನ್‌ ಕಿಷನ್‌ ಇನಿಂಗ್ಸ್‌ ಆರಂಭಿಸುತ್ತಿದ್ದು, ಹಲವು ವರ್ಷಗಳ ಬಳಿಕ ದಿನೇಶ್‌ ಕಾರ್ತಿಕ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡದ ವಿವರ

ಭಾರತ: ಋತುರಾಜ್‌ ಗಾಯಕ್ವಾಡ್‌, ಇಷನ್‌ ಕಿಷನ್‌, ಶ್ರೇಯಸ್‌ ಅಯ್ಯರ್‌, ರಿಷಬ್‌ ಪಂತ್, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌, ಅಕ್ಷರ್‌ ಪಟೇಲ್‌, ಯುಜ್ವೇಂದ್ರ ಚಹಾಲ್‌, ಭುವನೇಶ್ವರ್‌ ಕುಮಾರ್‌, ಹರ್ಷಲ್‌ ಪಟೇಲ್‌, ಆವೇಶ್‌ ಖಾನ್‌.

ದಕ್ಷಿಣ ಆಫ್ರಿಕಾ: ಕ್ವಿಂಟಾನ್‌ ಡಿ ಕಾಕ್‌, ಟೆಂಬಾ ಬುವಾಮ, ರಸ್ಸಿ ವಾನ್‌ಡರ್‌ ಡುಸಾನ್‌, ಡೇವಿಡ್‌ ಮಿಲ್ಲರ್‌, ತ್ರಿಸ್ಟನ್‌ ಸ್ಟಬ್ಸ್‌, ವಾಯ್ನೆ ಪಾರ್ನೆಲ್‌, ಡ್ವೈನ್‌ ಪ್ರೆಟೊರಿಸ್‌, ಕೇಶವ್‌ ಮಹಾರಾಜ್‌, ತಬ್ರಿಜ್‌ ಶಂಸಿ, ಕಗಿಸೊ ರಬಾಡ, ಅನ್ರಿಚ್‌ ನೊಕಿಯೆ.

Exit mobile version