Site icon Vistara News

T20 World Cup 2024:​ ನೂತನ ಲೋಗೋ ವಿನ್ಯಾಸಕ್ಕೆ ಫಿದಾ ಆದ ಕ್ರಿಕೆಟ್​ ಅಭಿಮಾನಿಗಳು

2024 t20 world cup

ದುಬೈ: 2024ರಲ್ಲಿ ನಡೆಯುವ ಪ್ರತಿಷ್ಠಿತ ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯ ಹೊಸ ಲೋಗೋವನ್ನು ಐಸಿಸಿ ಗುರುವಾರ ಬಿಡುಗಡೆ ಮಾಡಿದೆ. ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಐಸಿಸಿ ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ಹೊಸ ಲೋಗೋ ಮತ್ತು ಇದರ ಉದ್ದೇಶವನ್ನು ತಿಳಿಸಿದೆ.

ಸದ್ಯದ ಮಾಹಿತಿ ಪ್ರಕಾರ ಪುರುಷರ 9ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳು ಜೂನ್ 4 ರಿಂದ 30ರ ವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ ಎನ್ನಲಾಗಿದೆ. ಮಹಿಳಾ ಟಿ20 ವಿಶ್ವಕಪ್ ಬಾಂಗ್ಲಾದೇಶದ ಆತಿಥ್ಯದಲ್ಲಿ ನಡೆಸಲಾಗುತ್ತದೆ. ಆದರೆ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯದ ವಿಂಡೀಸ್​ ಈ ಬಾರಿ ಟೂರ್ನಿಯ ಆತಿಥ್ಯ ವಹಿಸಿಕೊಂಡ ಕಾರಣದಿಂದ ಪಂದ್ಯಾವಳಿಯಲ್ಲಿ ಸ್ಥಾನಪಡೆದಿದೆ.

ಹೊಸ ಲೋಗೋದ ಸಂದೇಶವೇನು?

ಹೊಸ ಲೋಗೋ ಹಿಂದಿನ ಉದ್ದೇಶವನ್ನು ಐಸಿಸಿ ವಿಡಿಯೊ ಮುಲಕ ತಿಳಿಸಿದ್ದು, ಟಿ20 ಕ್ರಿಕೆಟ್‌ನ ಶಕ್ತಿಯನ್ನು ಪ್ರತಿಬಿಂಬಿಸುವ ಮೂಲಕ ಬ್ಯಾಟ್, ಬಾಲ್ ಮತ್ತು ಶಕ್ತಿಯ ಸೃಜನಶೀಲ ಮಿಶ್ರಣವಾಗಿರುವ ಸಂಕೇತ ಎಂದು ಐಸಿಸಿ ಹೇಳಿದೆ. ಟಿ20 ಸ್ವರೂಪದಲ್ಲಿ ವೇಗವಾಗಿ ಬದಲಾಗುತ್ತಿರುವ ಆಟವನ್ನು ಲೋಗೋ ಪ್ರತಿಬಿಂಬಿಸುವಂತಿದೆ. ಟೂರ್ನಿಯ ಆತಿಥೇಯ ರಾಷ್ಟ್ರದ ಟೆಕಶ್ಚರ್ ಮತ್ತು ಪ್ಯಾಟರ್ನ್‌ ಒಳಗೊಂಡಿದೆ. ಐಸಿಸಿ ತನ್ನ ಟ್ವಿಟರ್​ನಲ್ಲಿ ಬ್ಯಾಟ್​,ಬಾಲ್​ ಮತ್ತು ಎನರ್ಜಿ ಎಂದು ಬರೆದುಕೊಂಡು ಈ ಲೋಗೋವನ್ನು ಪ್ರಕಟಿಸಿದೆ.

ಇದನ್ನೂ ಓದಿ ICC T20 World Cup 2024 : ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಉಗಾಂಡ ತಂಡ

ಸ್ವರೂಪ ಬದಲು

ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್ ನಡೆಯಲಿದೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ.

ಟಿ20 ವಿಶ್ವಕಪ್ 2024 ನಡೆಯುವ ಸ್ಥಳಗಳು

ಭಾರತ-ಪಾಕ್ ಪಂದ್ಯಕ್ಕೂ ಸಿದ್ಧವಾಗಿಲ್ಲ ಕ್ರೀಡಾಂಗಣ

ಇನ್ನು ಏಳು ತಿಂಗಳು ಬಾಕಿ ಇರುವಾಗ ಭಾರತ ಮತ್ತು ಪಾಕ್ ಪಂದ್ಯಕ್ಕೆ ಇನ್ನೂ ಸ್ಥಳ ಸಿದ್ಧಗೊಂಡಿಲ್ಲ . ಬ್ರಾಂಕ್ಸ್ನ ವ್ಯಾನ್ ಕಾರ್ಟ್ಲ್ಯಾಂಡ್ ಪಾರ್ಕ್ ಮೂಲ ಸ್ಥಳವಾಗಿತ್ತು. ಐಸಿಸಿ ಮತ್ತು ಸ್ಥಳೀಯ ಸಂಘಟನಾ ಸಮಿತಿಯು ಸ್ಥಳೀಯರಿಂದ ವಿರೋಧವನ್ನು ಎದುರಿಸಿತು. ಆದ್ದರಿಂದ, ನಸ್ಸಾವು ಕೌಂಟಿಯ ಐಸೆನ್ಹೋವರ್ ಪಾರ್ಕ್ ಅನ್ನು ಹೊಸ ಸ್ಥಳವಾಗಿ ಆಯ್ಕೆ ಮಾಡಲಾಯಿತು. ಆದಾಗ್ಯೂ, ಇನ್ನೂ ಯಾವುದೇ ಕ್ರಿಕೆಟ್ ಕ್ರೀಡಾಂಗಣ ಸಜ್ಜುಗೊಂಡಿಲ್ಲ. ಕೇವಲ ಏಳು ತಿಂಗಳುಗಳು ಮಾತ್ರ ಉಳಿದಿವೆ. ಮುಂಬರುವ ದಿನಗಳಲ್ಲಿ ಕಠಿಣ ಚಳಿಗಾಲವು ಬರುವ ಕಾರಣ ಕ್ರೀಡಾಂಗಣವನ್ನು ಯಾವ ರೀತಿ ಸಜ್ಜು ಮಾಡುತ್ತಾರೆ ಎಂಬ ಕೌತುಕ ಇನ್ನೂ ಉಳಿದಿದೆ.

Exit mobile version