T20 World Cup 2024:​ ನೂತನ ಲೋಗೋ ವಿನ್ಯಾಸಕ್ಕೆ ಫಿದಾ ಆದ ಕ್ರಿಕೆಟ್​ ಅಭಿಮಾನಿಗಳು - Vistara News

T20 ವಿಶ್ವಕಪ್

T20 World Cup 2024:​ ನೂತನ ಲೋಗೋ ವಿನ್ಯಾಸಕ್ಕೆ ಫಿದಾ ಆದ ಕ್ರಿಕೆಟ್​ ಅಭಿಮಾನಿಗಳು

ಮುಂದಿನ ವರ್ಷ ನಡೆಯುವ ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯ ಹೊಸ ಲೋಗೋವನ್ನು ಐಸಿಸಿ ಬಿಡುಗಡೆ ಮಾಡಿದೆ.

VISTARANEWS.COM


on

2024 t20 world cup
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ: 2024ರಲ್ಲಿ ನಡೆಯುವ ಪ್ರತಿಷ್ಠಿತ ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯ ಹೊಸ ಲೋಗೋವನ್ನು ಐಸಿಸಿ ಗುರುವಾರ ಬಿಡುಗಡೆ ಮಾಡಿದೆ. ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಐಸಿಸಿ ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ಹೊಸ ಲೋಗೋ ಮತ್ತು ಇದರ ಉದ್ದೇಶವನ್ನು ತಿಳಿಸಿದೆ.

ಸದ್ಯದ ಮಾಹಿತಿ ಪ್ರಕಾರ ಪುರುಷರ 9ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳು ಜೂನ್ 4 ರಿಂದ 30ರ ವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ ಎನ್ನಲಾಗಿದೆ. ಮಹಿಳಾ ಟಿ20 ವಿಶ್ವಕಪ್ ಬಾಂಗ್ಲಾದೇಶದ ಆತಿಥ್ಯದಲ್ಲಿ ನಡೆಸಲಾಗುತ್ತದೆ. ಆದರೆ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯದ ವಿಂಡೀಸ್​ ಈ ಬಾರಿ ಟೂರ್ನಿಯ ಆತಿಥ್ಯ ವಹಿಸಿಕೊಂಡ ಕಾರಣದಿಂದ ಪಂದ್ಯಾವಳಿಯಲ್ಲಿ ಸ್ಥಾನಪಡೆದಿದೆ.

ಹೊಸ ಲೋಗೋದ ಸಂದೇಶವೇನು?

ಹೊಸ ಲೋಗೋ ಹಿಂದಿನ ಉದ್ದೇಶವನ್ನು ಐಸಿಸಿ ವಿಡಿಯೊ ಮುಲಕ ತಿಳಿಸಿದ್ದು, ಟಿ20 ಕ್ರಿಕೆಟ್‌ನ ಶಕ್ತಿಯನ್ನು ಪ್ರತಿಬಿಂಬಿಸುವ ಮೂಲಕ ಬ್ಯಾಟ್, ಬಾಲ್ ಮತ್ತು ಶಕ್ತಿಯ ಸೃಜನಶೀಲ ಮಿಶ್ರಣವಾಗಿರುವ ಸಂಕೇತ ಎಂದು ಐಸಿಸಿ ಹೇಳಿದೆ. ಟಿ20 ಸ್ವರೂಪದಲ್ಲಿ ವೇಗವಾಗಿ ಬದಲಾಗುತ್ತಿರುವ ಆಟವನ್ನು ಲೋಗೋ ಪ್ರತಿಬಿಂಬಿಸುವಂತಿದೆ. ಟೂರ್ನಿಯ ಆತಿಥೇಯ ರಾಷ್ಟ್ರದ ಟೆಕಶ್ಚರ್ ಮತ್ತು ಪ್ಯಾಟರ್ನ್‌ ಒಳಗೊಂಡಿದೆ. ಐಸಿಸಿ ತನ್ನ ಟ್ವಿಟರ್​ನಲ್ಲಿ ಬ್ಯಾಟ್​,ಬಾಲ್​ ಮತ್ತು ಎನರ್ಜಿ ಎಂದು ಬರೆದುಕೊಂಡು ಈ ಲೋಗೋವನ್ನು ಪ್ರಕಟಿಸಿದೆ.

ಇದನ್ನೂ ಓದಿ ICC T20 World Cup 2024 : ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಉಗಾಂಡ ತಂಡ

ಸ್ವರೂಪ ಬದಲು

ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್ ನಡೆಯಲಿದೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ.

ಟಿ20 ವಿಶ್ವಕಪ್ 2024 ನಡೆಯುವ ಸ್ಥಳಗಳು

  • ಆಂಟಿಗುವಾ ಮತ್ತು ಬಾರ್ಬುಡಾ
  • ಬಾರ್ಬಡೋಸ್
  • ಡೊಮಿನಿಕಾ (ಹೊರತೆಗೆಯಲಾಗಿದೆ)
  • ಗಯಾನಾ
  • ಸೇಂಟ್ ಲೂಸಿಯಾ
  • ಟ್ರಿನಿಡಾಡ್ ಮತ್ತು ಟೊಬಾಗೊ
  • ಸೇಂಟ್ ವಿನ್ಸೆಂಟ್ & ದಿ ಗ್ರೆನಡೀನ್ಸ್
  • ಡಲ್ಲಾಸ್
  • ಫ್ಲೋರಿಡಾ
  • ನ್ಯೂಯಾರ್ಕ್

ಭಾರತ-ಪಾಕ್ ಪಂದ್ಯಕ್ಕೂ ಸಿದ್ಧವಾಗಿಲ್ಲ ಕ್ರೀಡಾಂಗಣ

ಇನ್ನು ಏಳು ತಿಂಗಳು ಬಾಕಿ ಇರುವಾಗ ಭಾರತ ಮತ್ತು ಪಾಕ್ ಪಂದ್ಯಕ್ಕೆ ಇನ್ನೂ ಸ್ಥಳ ಸಿದ್ಧಗೊಂಡಿಲ್ಲ . ಬ್ರಾಂಕ್ಸ್ನ ವ್ಯಾನ್ ಕಾರ್ಟ್ಲ್ಯಾಂಡ್ ಪಾರ್ಕ್ ಮೂಲ ಸ್ಥಳವಾಗಿತ್ತು. ಐಸಿಸಿ ಮತ್ತು ಸ್ಥಳೀಯ ಸಂಘಟನಾ ಸಮಿತಿಯು ಸ್ಥಳೀಯರಿಂದ ವಿರೋಧವನ್ನು ಎದುರಿಸಿತು. ಆದ್ದರಿಂದ, ನಸ್ಸಾವು ಕೌಂಟಿಯ ಐಸೆನ್ಹೋವರ್ ಪಾರ್ಕ್ ಅನ್ನು ಹೊಸ ಸ್ಥಳವಾಗಿ ಆಯ್ಕೆ ಮಾಡಲಾಯಿತು. ಆದಾಗ್ಯೂ, ಇನ್ನೂ ಯಾವುದೇ ಕ್ರಿಕೆಟ್ ಕ್ರೀಡಾಂಗಣ ಸಜ್ಜುಗೊಂಡಿಲ್ಲ. ಕೇವಲ ಏಳು ತಿಂಗಳುಗಳು ಮಾತ್ರ ಉಳಿದಿವೆ. ಮುಂಬರುವ ದಿನಗಳಲ್ಲಿ ಕಠಿಣ ಚಳಿಗಾಲವು ಬರುವ ಕಾರಣ ಕ್ರೀಡಾಂಗಣವನ್ನು ಯಾವ ರೀತಿ ಸಜ್ಜು ಮಾಡುತ್ತಾರೆ ಎಂಬ ಕೌತುಕ ಇನ್ನೂ ಉಳಿದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

T20 ವಿಶ್ವಕಪ್

Asian Games 2023: 41 ವರ್ಷಗಳ ಬಳಿಕ ಕುದುರೆ ಸವಾರಿಯಲ್ಲಿ ಚಿನ್ನ ಗೆದ್ದ ಭಾರತ

ಕುದುರೆ ಸವಾರಿ ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕ ಜಯಿಸಿದೆ. ಈ ಸಾಧನೆಯೊಂದಿಗೆ 41 ವರ್ಷಗಳ ಬಳಿಕ ಭಾರತ ತಂಡ ಈ ಸ್ಪರ್ಧೆಯಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ

VISTARANEWS.COM


on

India Win 1st Equestrian Gold
Koo

ಹ್ಯಾಂಗ್‌ಝೂ: ಏಷ್ಯನ್​ ಗೇಮ್ಸ್​ನ​(Asian Games 2023) ಕುದುರೆ ಸವಾರಿ(Equestrian) ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕ ಜಯಿಸಿದೆ. ಈ ಸಾಧನೆಯೊಂದಿಗೆ 41 ವರ್ಷಗಳ ಬಳಿಕ ಭಾರತ ತಂಡ ಈ ಸ್ಪರ್ಧೆಯಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. 1982ರಿಂದ ಆರಂಭವಾದ ಈ ಕ್ರೀಡೆಯಲ್ಲಿ ಭಾರತ ಮೊದಲ ಚಿನ್ನದ ಪದಕದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಟೀಮ್ ಡ್ರೆಸ್ಸೇಜ್ ಈವೆಂಟ್‌ನಲ್ಲಿ ಭಾರತ ತಂಡವು ಒಟ್ಟು 209.205 ಅಂಕದೊಂದಿಗೆ ಚಿನ್ನದ ಪದಕ ಜಯಿಸಿದರೆ, ಚೀನಾ 204.882 ರೊಂದಿಗೆ ಬೆಳ್ಳಿ, ಹಾಂಗ್​ಕಾಂಗ್ ಚೀನಾ 204.852.28 ಕಂಚಿನ ಪದಕ ಜಯಿಸಿತು. ಸುದೀಪ್ತಿ ಹಜೇಲಾ, ದಿವ್ಯಾಕೃತಿ ಸಿಂಗ್, ಹೃದಯ್ ಛೇಡಾ, ಅನುಷ್ ಅಗರ್ವಾಲ್​​ ಚಿನ್ನಕ್ಕೆ ಕೊರಳೊಡ್ಡಿದ ಭಾರತದ ಕ್ರೀಡಾಪಟುಗಳು. 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್ ವೇಳೆ ಭಾರತವು ಕಂಚಿನ ಪದಕ ಗೆದ್ದಿತ್ತು.

ಈ ಚಿನ್ನದ ಪದಕದೊಂದಿಗೆ ಭಾರತ ಸದ್ಯ ಟೂರ್ನಿಯಲ್ಲಿ ಮೂರು ಚಿನ್ನ ಗೆದ್ದಂತಾಗಿದೆ. ಇದಕ್ಕೂ ಮುನ್ನ ಮಹಿಳಾ ಕ್ರಿಕೆಟ್​ ಮತ್ತು 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಪುರುಷರ ತಂಡವು ಚಿನ್ನದ ಪದಕ ಜಯಿಸಿತ್ತು. ಸದ್ಯ ಭಾರತ 14 ಪದಕಗೆದ್ದಿದೆ.

ಪ್ರಧಾನಿ ಮೋದಿಯಿಂದ ಮೆಚ್ಚುಗೆ

ಐತಿಹಾಸಿಕ ಸಾಧನೆ ಮಾಡಿದ ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. “ಹಲವು ದಶಕಗಳ ಬಳಿಕ ನಮ್ಮ ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವುದು ಅತ್ಯಂತ ಹೆಮ್ಮೆಯ ವಿಷಯ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ರಾಷ್ಟ್ರಕ್ಕೆ ಗೌರವ ತಂದ ಸುದೀಪ್ತಿ ಹಜೇಲಾ, ದಿವ್ಯಾಕೃತಿ ಸಿಂಗ್, ಹೃದಯ್ ಛೇಡಾ, ಅನುಷ್ ಅಗರ್ವಾಲ್​ಗೆ ಅಭಿನಂದನೆಗಳು” ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

ಸೈಲಿಂಗ್​ನಲ್ಲಿ ಎರಡು ಪದಕ

ಇದಕ್ಕೂ ಮುನ್ನ ಪುರುಷರ ವಿಂಡ್‌ಸರ್ಫರ್ ಆರ್‌ಎಸ್: ಎಕ್ಸ್ ಈವೆಂಟ್‌ನಲ್ಲಿ ಇಬಾದ್​ ಅಲಿ(Eabad Ali) ಕಂಚಿನ ಪದಕ ಜಯಿಸಿದರೆ, ಮಹಿಳೆಯರ ಸಿಂಗ್ಸಲ್ಸ್​ ವಿಭಾಗದ ಸೈಲಿಂಗ್(ದೋಣಿ ಸ್ಪರ್ಧೆ) ಸ್ಪರ್ಧೆಯ ILCA4 ರೇಸ್ 11ನಲ್ಲಿ ನೇಹಾ ಠಾಕೂರ್(Neha Thakur) ಬೆಳ್ಳಿ ಪದಕ ಜಯಿಸಿದ್ದರು. ಒಟ್ಟಾರೆ ಮಂಗಳವಾರ ಭಾರತ ಮೂರು ಪದಕ ಜಯಿಸಿದಂತಾಗಿದೆ.

ಇದನ್ನೂ ಓದಿ ​Asian Games 2023: ಸೈಲಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಕಂಚಿಗೆ ತೃಪ್ತಿಪಟ್ಟ ಇಬಾದ್​ ಅಲಿ

ಮಂಗಳವಾರ ನಡೆದ ಫೈನಲ್​ ಸುತ್ತಿನ ವಿಂಡ್‌ಸರ್ಫರ್ ಆರ್‌ಎಸ್: ಎಕ್ಸ್ ಈವೆಂಟ್‌ನಲ್ಲಿ ಇಬಾದ್​ ಅಲಿ 52 ಅಂಕದೊಂದಿಗೆ ಕಂಚಿನ ಪದಕ್ಕೆ ಕೊರಳೊಡ್ಡಿದರು. ಬಾಲಕಿಯರ ಡಿಂಗಿ ಐಎಲ್ ಸಿಎ4 ಸ್ಪರ್ಧೆಯಲ್ಲಿ ನೇಹಾ ಠಾಕೂರ್ 11 ರೇಸ್​ಗಳಲ್ಲಿ ಒಟ್ಟು 27 ಅಂಕಗಳಿಸಿ ಬೆಳ್ಳಿ ಗೆದ್ದು ಈ ಸ್ಪರ್ಧೆಯಲ್ಲಿ ಭಾರತಕ್ಕೆ ಐತಿಹಾಸಿಕ ಪದಕದ ಖಾತೆ ತೆರೆದಿದ್ದರು. ಥಾಯ್ಲೆಂಡ್‌ನ ನೊಪಸೋರ್ನ್ ಖುನ್ಬೂಂಜಾನ್ 16 ಅಂಕಗಳೊಂದಿಗೆ ಚಿನ್ನ ಪದಕ, ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ 28 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು.

ಹಾಕಿಯಲ್ಲಿ ಭರ್ಜರಿ ಗೆಲುವು

ಪುರುಷರ ಹಾಕಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಸಿಂಗಪುರ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 16-1 ಗೋಲುಗಳ ಅಂತರದ ಅಧಿಕಾರಯುತ ಗೆಲುವು ಸಾಧಿಸಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇದು ಭಾರತಕ್ಕೆ ಒಲಿದ ಸತತ ಎರಡನೇ ಗೆಲುವಾಗಿದೆ. ಭಾರತ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಪಾನ್ ಸವಾಲು ಎದುರಿಸಲಿದೆ. ಈ ಪಂದ್ಯ ಗುರುವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಉಜ್ಬೇಕಿಸ್ತಾನ ವಿರುದ್ಧ 16-0 ಅಂತರದ ಜಯ ಸಾಧಿಸಿತ್ತು.

ಭಾರತ ಪರ ಹರ್ಮನ್‌ಪ್ರೀತ್ (24, 39, 40, 42ನೇ ನಿಮಿಷ) ಮತ್ತು ಮಂದೀಪ್ (12, 30, 51ನೇ ನಿಮಿಷ), ಅಭಿಷೇಕ್ (51, 52ನೇ ನಿಮಿಷ), ವರುಣ್ ಕುಮಾರ್ (55, 55ನೇ ನಿಮಿಷ), ಲಲಿತ್ ಕುಮಾರ್ ಉಪಾಧ್ಯಾಯ (16ನೇ ನಿಮಿಷ), ಗುರ್ಜಂತ್ ಸಿಂಗ್ (22ನೇ ನಿಮಿಷ), ವಿವೇಕ್ ಸಾಗರ್ ಪ್ರಸಾದ್(23ನೇ ನಿಮಿಷ), ಮನ್ ಪ್ರೀತ್ ಸಿಂಗ್ (37ನೇ ನಿಮಿಷ), ಶಂಶೇರ್ ಸಿಂಗ್ (38ನೇ ನಿಮಿಷ) ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.

Continue Reading

T20 ವಿಶ್ವಕಪ್

Rohit Sharma | ಬಾಂಗ್ಲಾ ಸರಣಿಗೆ ಸಜ್ಜಾಗುತ್ತಿರುವ ರೋಹಿತ್​ ಶರ್ಮ; ನೆಟ್ಸ್​ನಲ್ಲಿ ಭರ್ಜರಿ ತಾಲೀಮು

ಬಾಂಗ್ಲಾದೇಶ ವಿರುದ್ಧದ ಸರಣಿಗೆ ಮುನ್ನ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ನೆಟ್ಸ್​ನಲ್ಲಿ ಭರ್ಜರಿ ಅಭ್ಯಾಸ ನಡೆಸಿದ್ದಾರೆ.​

VISTARANEWS.COM


on

Rohit Sharma
Koo

ಮುಂಬಯಿ: ಮುಂದಿನ ತಿಂಗಳು ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು ಏಕದಿನ ಮತ್ತು ಟೆಸ್ಟ್​ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ನಿಟ್ಟಿನಲ್ಲಿ ನಾಯಕ ರೋಹಿತ್​ ಶರ್ಮಾ ನೆಟ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ.

ನ್ಯೂಜಿಲ್ಯಾಂಡ್​ ಪ್ರವಾಸಕ್ಕೆ ವಿಶ್ರಾಂತಿ ಪಡೆದಿರುವ ರೋಹಿತ್​ ಇದೀಗ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿರುವ ಫೋಟೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ರೋಹಿತ್​ ಜತೆಗೆ ವಿರಾಟ್​ ಕೊಹ್ಲಿ, ಕೆಲ್​. ಎಲ್ ರಾಹುಲ್​ ಸೇರಿ ಪ್ರಮುಖ ಹಿರಿಯ ಆಟಗಾರರಿಗೆ ಕಿವೀಸ್​ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಆದರೆ ಈ ಎಲ್ಲ ಆಟಗಾರರು ಬಾಂಗ್ಲಾ ವಿರುದ್ಧದ ಸರಣಿಗೆ ತಂಡ ಸೇರಿಕೊಳ್ಳಲಿದ್ದಾರೆ.

ವಿರಾಟ್ ಕೊಹ್ಲಿಯೂ ಬಾಂಗ್ಲಾ ಸರಣಿಗೆ ಮುನ್ನ ಜಿಮ್​ನಲ್ಲಿ ವರ್ಕ್​ಔಟ್​ ಮಾಡಿ ಫಿಟ್​ನೆಸ್​ ಕಾಯ್ದುಕೊಳ್ಳುತ್ತಿರುವ ವಿಡಿಯೊ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ನಾಯಕ ರೋಹಿತ್ ಶರ್ಮಾ ಕೂಡ ಪ್ಯಾಡ್ ಕಟ್ಟಿ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿದ್ದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನೆಟ್ ಒಳಗಡೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಸದ್ಯ ಫಾರ್ಮ್​ನಲ್ಲಿ ಇಲ್ಲದ ರೋಹಿತ್​ಗೆ ಬಾಂಗ್ಲಾ ಸರಣಿ ಪ್ರಮುಖವಾಗಿದೆ.

ಇದನ್ನೂ ಓದಿ | Virat Kohli | ವಿಶ್ರಾಂತಿಯ ಅವಧಿಯನ್ನು ಚಾರಿಟಿ ಕೆಲಸಕ್ಕೆ ಮೀಸಲಿಟ್ಟ ವಿರಾಟ್​ ಕೊಹ್ಲಿ

Continue Reading

Latest

Fifa World Cup | ಫುಟ್ಬಾಲ್‌ ವಿಶ್ವ ಕಪ್‌ ಪಂದ್ಯಗಳು ನಡೆಯುವ ಸ್ಟೇಡಿಯಮ್‌ಗಳು ಯಾವುದೆಲ್ಲ ಗೊತ್ತೇ?

ಕತಾರ್​ನಲ್ಲಿ ನಡೆಯಲಿರುವ ಫಿಫಾ ವಿಶ್ವ ಕಪ್​ ಫುಟ್ಬಾಲ್​ ಪಂದ್ಯಗಳ 8 ವರ್ಣರಂಜಿತ ಕ್ರೀಡಾಂಗಣಗಳ ಸಂಪೂರ್ಣ ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

VISTARANEWS.COM


on

fifa world cup 2022 8 stadiums
Koo

ದೋಹಾ: ಕತಾರ್​ನಲ್ಲಿ ನಡೆಯಲಿರುವ ಫಿಫಾ ವಿಶ್ವ ಕಪ್(Fifa World Cup)​ ಕಾಲ್ಚೆಂಡಿನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಈ ಫುಟ್ಬಾಲ್ ಹಬ್ಬ ಆರಂಭವಾಗಲಿದೆ. ಇದೀಗ ಈ ಕಾಲ್ಚೆಂಡಿನ ವಿಶ್ವ ಸಮರಕ್ಕೆ ಆತಿಥ್ಯ ವಹಿಸಿದ ವರ್ಣರಂಜಿತ 8 ಸ್ಟೇಡಿಯಂಗಳ ಪರಿಚಯ ಇಲ್ಲಿದೆ.

ಲುಸೈಲ್​ ಕ್ರೀಡಾಂಗಣ

ಕತಾರ್​ ಫಿಫಾ ವಿಶ್ವ ಕಪ್​ನ 8 ಕ್ರೀಡಾಂಗಣದಲ್ಲಿ ಲುಸೈಲ್​ ಅತಿದೊಡ್ಡದು ಎಂಬ ಹೆಗ್ಗಳಿಕೆ ಗಳಿಸಿದೆ. 80,000 ಆಸನ ಸಾಮರ್ಥ್ಯ ಹೊಂದಿದ್ದು, ಫೈನಲ್​ ಪಂದ್ಯವೂ ಇದೇ ಮೈದಾನದಲ್ಲಿ ನಡೆಯಲಿದೆ. ಈ ಸ್ಟೇಡಿಯಮ್‌ ಅರಬ್​ ದೇಶದಲ್ಲಿ ಜಯಪ್ರೀಯವಾಗಿರುವ ಬಟ್ಟಲಿನ ಆಕಾರ ಹೊಂದಿದೆ. ಪಂದ್ಯದ ವೇಳೆ ಬಿಸಿ ಗಾಳಿಯನ್ನು ತೆಡೆಯಲು ಪಾಲಿಟ್ರೆಟಾ ಫ್ಲೋರೊಎಥಲಿನ್​ ಎಂಬ ರಾಸಾಯನಿಕವನ್ನು ಬಳಸಿ ಆಟಗಾರಿಗೆ ಬಿಸಿ ತಟ್ಟದಂತೆ ಮಾಡಲಾಗಿದೆ. ಈ ಮೈದಾನದಲ್ಲಿ ಒಟ್ಟು ಹತ್ತು ಪಂದ್ಯಗಳು ನಡೆಯಲಿವೆ.

ಅಹಮದ್​ ಬಿನ್​ ಅಲಿ ಸ್ಟೇಡಿಯಮ್‌, ಅಲ್​ ವಕ್ರಾ

ಕತಾರ್‌​ನ ನೂತನ ಸ್ಟೇಡಿಯಮ್‌ ಇದಾಗಿದ್ದು. 2015ರಲ್ಲಿ ನಿರ್ಮಾಣವಾಗಿದ್ದ ಕ್ರೀಡಾಂಗಣ ನೆಲಸಮ ಮಾಡಿ ಹೊಸ ಕ್ರೀಡಾಂಗಣವನ್ನು ಕಟ್ಟಲಾಗಿದೆ. ಇದು ಓಪನ್​ ಕ್ರೀಡಾಂಗಣವಾಗಿದ್ದು ಹವಾ ನಿಯಂತ್ರಿತ ವ್ಯವಸ್ಥೆಯನ್ನೂ ಒಳಗೊಂಡಿದೆ. ಅದರಂತೆ ಪಂದ್ಯಗಳ ವೇಳೆ 26 ಡಿಗ್ರಿ ತಾಪಮಾನ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಮರುಭೂಮಿಯ ತುತ್ತ ತುದಿಯಲ್ಲಿರುವ ಈ ಮೈದಾನದಲ್ಲಿ ಒಟ್ಟು ಏಳು ಪಂದ್ಯಗಳು ನಡೆಯಲಿದ್ದು, 44,740 ಆಸನ ಸಾಮರ್ಥ್ಯ ಹೊಂದಿದೆ.

ಅಲ್​ ಜನೌಬ್​​ ಸ್ಟೇಡಿಯಮ್‌, ಅಲ್ ವಕ್ರಾ

ಸಾಂಪ್ರದಾಯಿಕ ಧೌ ದೋಣಿಗಳನ್ನು ಹೋಲುವ ಈ ಕ್ರೀಡಾಂಗಣದಲ್ಲಿ ಏಳು ಪಂದ್ಯಗಳು ನಡೆಯಲಿವೆ. ಏಕಕಾಲಕ್ಕೆ 40,000 ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಸಾಧ್ಯವಿದೆ. ಇನ್ನು ಈ ಮೈದಾನದಲ್ಲಿಯೂ ಹವಾನಿಯಂತ್ರಿತ ವ್ಯವಸ್ಥೆ ಇರಲಿದೆ. ಇಲ್ಲಿ ವಿಶ್ವ ಕಪ್​ ಪಂದ್ಯ ಮುಕ್ತಾಯದ ಬಳಿಕ ಆಸನಗಳ ಸಾಮರ್ಥ್ಯವನ್ನು 20,000ಕ್ಕೆ ಇಳಿಕೆ ಮಾಡಲಾಗುವುದು ಎಂದು ಫಿಫಾ ಹೇಳಿದೆ.

ಎಜುಕೇಶನ್​ ಸಿಟಿ ಕ್ರೀಡಾಂಗಣ, ಅಲ್​ ರಯ್ಯನ್​

ಕ್ರೀಡಾಂಗಣದ ಸುತ್ತ ಮುತ್ತ ವಿಶ್ವವಿದ್ಯಾಲಯಗಳು ಇರುವ ಕಾರಣದಿಂದ ಈ ಸ್ಟೇಡಿಯಂಗೆ ಎಜುಕೇಶನ್​ ಸಿಟಿ ಸ್ಟೇಡಿಯಮ್‌ ಎಂದು ಹೆಸರಿಡಲಾಗಿದೆ. ತ್ರಿಕೋನಾಕೃತಿ ಈ ಕ್ರೀಡಾಂಗಣ ವಜ್ರದ ರೀತಿ ಕಾಣುತ್ತದೆ. ಜಾಗತಿಕ ಸುಸ್ಥಿರತೆಯ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಫೈವ್​ಸ್ಟಾರ್​ ರೇಟಿಂಗ್​ ಹೊಂದಿದೆ. ಒಟ್ಟು 8 ಪಂದ್ಯಗಳು ನಡೆಯಲಿದ್ದು, 40,000 ಆಸನ ಸಾಮರ್ಥ್ಯ ಹೊಂದಿದೆ.

ಖಲಿಫಾ ಮೈದಾನ

ಕತಾರ್​ನ ಅತ್ಯಂತ ಹಳೆಯ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಕ್ರೀಡಾಂಗಣ ಇದಾಗಿದ್ದು ಈ ಬಾರಿ 8 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಅದರಂತೆ ಇಲ್ಲಿ ಏಕಕಾಲಕ್ಕೆ 45,416 ಮಂದಿಗೆ ಪಂದ್ಯ ವೀಕ್ಷಿಸಬಹುದಾಗಿದೆ. 2006ರ ಏಷ್ಯನ್​ ಗೇಮ್ಸ್​ ಸೇರಿ ಹಲವು ಐತಿಹಾಸಿಕ ಕ್ರೀಡಾಕೂಟಗಳಿಗೆ ಈ ಸ್ಟೇಡಿಯಮ್‌ ಸಾಕ್ಷಿಯಾಗಿದೆ.

ಅಲ್​ ಥುಮಾಮ ಮೈದಾನ, ದೋಹಾ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಈ ಕ್ರೀಡಾಂಗಣವನ್ನು ಫಿಫಾ ವಿಶ್ವ ಕಪ್​ ಟೂರ್ನಿಗೋಸ್ಕರವೇ ನಿರ್ಮಾಣ ಮಾಡಲಾಗಿದೆ. ವಿಶ್ವ ಕಪ್​ ಬಳಿಕ ಇಲ್ಲಿನ ಆಸನ ಸಾಮರ್ಥ್ಯವನ್ನು 40,000ರಿಂದ 20,000ಕ್ಕೆ ಇಳಿಸಿ ಹೆಚ್ಚುವರಿ ಆಸನಗಳನ್ನು ಬಡ ರಾಷ್ಟ್ರಗಳಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಖಾಲಿಯಾಗುವ ಜಾಗದಲ್ಲಿ ಐಷಾರಾಮಿ ಹೋಟೆಲ್​ ನಿರ್ಮಾಣ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಅರಬ್​ ಪ್ರಾಂತ್ಯದಲ್ಲಿ ಬಳಸುವ ಸಾಂಪ್ರದಾಯಿಯ “ಗಹ್ಫಿಯಾ” ಟೋಪಿಯ ಆಕಾರದಲ್ಲಿರುವ ಈ ಮೈದಾನದಲ್ಲಿ ಒಟ್ಟು 8 ಪಂದ್ಯಗಳು ನಡೆಯಲಿವೆ.

ಅಲ್​ ಬೇತ್​ ಸ್ಟೇಡಿಯಂ, ಅಲ್​ ಖೋರ್​

ದೋಹಾದ ರಾಜಧಾನಿಯಿಂದ 35 ಕಿ.ಮೀ ದೂರದಲ್ಲಿರುವ ಈ ಕ್ರೀಡಾಂಗಣದಲ್ಲಿ ವಿಶ್ವ ಕಪ್​ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಕ್ರೀಡಾಂಗಣ ಕತಾರ್​ನಲ್ಲಿ ವಾಸಿಸುವ ಅಲೆಮಾರಿ ಜನರು ಬಳಸುವ ಟೆಂಟ್​ಗಳ ಆಕಾರದಲ್ಲಿದೆ. ಒಟ್ಟು 9 ಪಂದ್ಯಗಳು ಇಲ್ಲಿ ನಡೆಯಲಿದ್ದು, 60,000 ಆಸನ ಸಾಮರ್ಥ್ಯ ಹೊಂದಿದೆ.

ಸ್ಟೇಡಿಯಂ 974

ವಿಶ್ವ ಕಪ್​ ಪಂದ್ಯಗಳ ಆತಿಥ್ಯಕ್ಕೆ ಕತಾರ್​ ಹೊಸದಾಗಿ ಕ್ರೀಡಾಂಗಣಗಳ ನಿರ್ಮಾಣಕ್ಕೆ ಮುಂದಾದಾಗ
ಸಾಮಗ್ರಿಗಳನ್ನು ಹೊತ್ತು ತಂಡ ಹಡಗುಗಳ ಕಂಟೈನರ್​ಗಳನ್ನೇ ಬಳಸಿ ಸ್ಟೇಡಿಯಮ್‌ ಒಂದನ್ನು ಕಟ್ಟುವ ಯೋಜನೆಯನ್ನು ಆಯೋಜನಾ ಸಮಿತಿ ರೂಪಿಸಿತ್ತು. ಅದರಂತೆ 974 ಕಂಟೈನರ್​ಗಳಿಂದ ನಿರ್ಮಾಣವಾದ ಇದಕ್ಕೆ ಸ್ಟೇಡಿಯಂ 947 ಎಂದು ಹೆಸರಿಡಲಾಗಿದೆ. ಇನ್ನೊಂದು ವಿಶೇಷವೆಂದರೆ 947 ಎನ್ನುವ ಸಂಖ್ಯೆ ಕತಾರ್​ ದೇಶದ ಅಂತಾರಾಷ್ಟ್ರೀಯ ಡಯಲಿಂಗ್​ ಕೋಡ್​ ಕೂಡ ಆಗಿದೆ. ಇಲ್ಲಿ ಒಟ್ಟು 7 ಪಂದ್ಯಗಳು ನಡೆಯಲಿದ್ದು, 40,000 ಆಸನ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ | Fifa World Cup 2022 | ಗೋಲ್ಡನ್ ಬೂಟ್ ಪ್ರಶಸ್ತಿ ವಿಜೇತ ಟಾಪ್​ 5 ಆಟಗಾರರು

Continue Reading

Latest

BCCI: ಚೇತನ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಯ್ಕೆ ಸಮಿತಿಗೆ ಗೇಟ್​ಪಾಸ್​ ನೀಡಿದ ಬಿಸಿಸಿಐ!

ಟಿ20 ವಿಶ್ವ ಕಪ್​ನಲ್ಲಿ ಭಾರತ ತಂಡ ವೈಫಲ್ಯ ಅನುಭವಿಸಿದ ಕಾರಣದಿಂದ ಚೇತನ್​ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ಶುಕ್ರವಾರ ಬಿಸಿಸಿಐ ವಜಾಗೊಳಿಸಿದೆ.

VISTARANEWS.COM


on

BCCI Scraps Selection Committee Led By Chetan Sharma
Koo

ನವದೆಹಲಿ: ದುಬೈ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಎರಡು ಐಸಿಸಿ ಟಿ20 ವಿಶ್ವ ಕಪ್‌ ಕ್ರಿಕೆಟ್​ ಟೂರ್ನಿಗಳಲ್ಲಿ ಭಾರತ ತಂಡ ಟ್ರೋಫಿ ಗೆಲ್ಲಲು ವಿಫಲವಾದ ಬೆನ್ನಲ್ಲೇ ಕಠಿಣ ನಿರ್ಧಾರ ತೆಗೆದುಕೊಂಡಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಮಾಜಿ ವೇಗಿ ಚೇತನ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಯ್ಕೆ ಸಮಿತಿಯನ್ನು ವಜಾಗೊಳಿಸಿದೆ. ಅದರಂತೆ ಬಿಸಿಸಿಐ ಈಗಾಗಗಲೇ ಹೊಸ ಆಯ್ಕೆ ಸಮಿತಿ ರಚಿಸುವ ಸಲುವಾಗಿ ಖಾಲಿ ಇರುವ 5 ಹುದ್ದೆಗಳಿಗೆ ಅರ್ಜಿ ಕೂಡ ಆಹ್ವಾನಿಸಿದೆ.

ಚೇತನ್‌ ಶರ್ಮಾ ಸಾರಥ್ಯದ ಆಯ್ಕೆ ಸಮಿತಿಯಲ್ಲಿ ಸುನಿಲ್‌ ಜೋಶಿ, ಹವಿಂದರ್‌ ಸಿಂಗ್‌ ಮತ್ತು ದೇಬಾಶಿಶ್‌ ಮೊಹಾಂತಿ ಅವರಂತಹ ಮಾಜಿ ಆಟಗಾರರು ಇದ್ದರು. ಇದೀಗ ಹೊಸ ಆಯ್ಕೆ ಸಮಿತಿಗೆ ಸೇರಬಯಸುವ ಆಸಕ್ತರು ನವೆಂಬರ್‌ 28ರ ಒಳಗೆ ಅರ್ಜಿ ಸಲ್ಲಿಸಬೇಕಾಗಿದೆ.

ಚೇತನ್​ ಶರ್ಮಾ ಆಯ್ಕೆ ಸಮಿತಿಯ ಅವಧಿಯಲ್ಲಿ ಆಡಲಾದ 2021ರ ಐಸಿಸಿ ಟಿ20 ಕ್ರಿಕೆಟ್‌ ವಿಶ್ವ ಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೂಪರ್‌-12 ಹಂತದಲ್ಲೇ ಮುಗ್ಗರಿಸಿತ್ತು. ಇತ್ತೀಚೆಗೆ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ 2022ರ ಸಾಲಿನ ಟಿ20 ವಿಶ್ವ ಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿಯೂ ಹೀನಾಯವಾಗಿ ಸೋತು ನಿರಾಸೆ ಮೂಡಿಸಿತ್ತು. ಜತೆಗೆ ಇವರ ಆಯ್ಕೆ ಸಮಿತಿಯಲ್ಲಿ ಭಾರತ ತಂಡ ಒಂದೂ ಐಸಿಸಿ ಟ್ರೋಫಿಯನ್ನು ಗೆಲ್ಲವಲ್ಲಿ ಯಶಸ್ವಿಯಾಗಿರಲಿಲ್ಲ. ಇದರಿಂದ ಬಿಸಿಸಿಐ ಈ ಆಯ್ಕೆ ಸಮಿತಿಗೆ ಗೇಟ್​ಪಾಸ್​ ನೀಡಿದೆ.

ಚೇತನ್​ ಶರ್ಮಾ ಭಾರತ ಪರ ಒಟ್ಟು 23 ಟೆಸ್ಟ್​ ಮತ್ತು 65 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್​ನಲ್ಲಿ (61), ಏಕದಿನದಲ್ಲಿ(67) ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ | IND VS NZ | ಕಿವೀಸ್​​ ವಿರುದ್ಧದ ಮೊದಲ ಟಿ20 ಮಳೆಯಿಂದ ರದ್ದು; ಭಾರತದ ಯುವ ಆಟಗಾರರಿಗೆ ನಿರಾಸೆ

Continue Reading
Advertisement
Actor Darshan rally police deny permission
ಸ್ಯಾಂಡಲ್ ವುಡ್3 mins ago

Actor Darshan: ನಟ ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದು!

Drinking water supply to be disrupted in Bengaluru tomorrow
ಬೆಂಗಳೂರು10 mins ago

Water supply : ಬೆಂಗಳೂರಲ್ಲಿ ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Pune Police 60 Hours Operation; Drugs worth more than Rs 1300 crore seized
ಪ್ರಮುಖ ಸುದ್ದಿ22 mins ago

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

gold wear bride
ಚಿನ್ನದ ದರ23 mins ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಬಂಗಾರದ ಧಾರಣೆ ಗಮನಿಸಿ, ಖರೀದಿಸಿ

Elderly woman murdered in Bengaluru accused did not give any reason
ಕ್ರೈಂ31 mins ago

Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

Pralhad Joshi Jaishankar Nirmala Seetaraman
ಹುಬ್ಬಳ್ಳಿ34 mins ago

Pralhad Joshi : ಜೈಶಂಕರ್, ನಿರ್ಮಲಾ ಸ್ಪರ್ಧೆ ಖಚಿತ ಎಂದ ಪ್ರಹ್ಲಾದ್‌ ಜೋಶಿ; ಯಾವ ಕ್ಷೇತ್ರ?

india poverty
ದೇಶ54 mins ago

India Poverty: ದೇಶದಲ್ಲಿ ಬಡವರ ಸಂಖ್ಯೆ 5%ಕ್ಕಿಂತ ಇಳಿಕೆ; ಆಹಾರಕ್ಕಿಂತ ಓಡಾಟ, ಮನರಂಜನೆಗೇ ಹೆಚ್ಚು ಖರ್ಚು!

Janardhana Reddy meets CM Siddaramaiah and DCM DK Shivakumar
ರಾಜಕೀಯ1 hour ago

Rajya Sabha Election: ಸಿಎಂ, ಡಿಸಿಎಂ ಭೇಟಿ ಮಾಡಿದ ಜನಾರ್ದನ ರೆಡ್ಡಿ; ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ?

Namma Metro Farmer
ಬೆಂಗಳೂರು1 hour ago

Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಪ್ರವೇಶ ನಿರಾಕರಿಸಿದ ಮೆಟ್ರೋ; ನೆಟ್ಟಿಗರ ಆಕ್ರೋಶ

Siddharth Bodke and Titeeksha Tawade to get married
ಸಿನಿಮಾ1 hour ago

Siddharth Bodke: ಮರಾಠಿ ನಟಿ ತಿತೀಕ್ಷಾ- ʻದೃಶ್ಯಂʼ ನಟ ಸಿದ್ಧಾರ್ಥ್ ಬೋಡ್ಕೆ ಜೋಡಿಯ ಅದ್ಧೂರಿ ಮದುವೆ ಇಂದು

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 26 2024
ಭವಿಷ್ಯ8 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು4 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

ಟ್ರೆಂಡಿಂಗ್‌