Site icon Vistara News

T20 World Cup 2024 : ಸೂಪರ್​ 8 ಹಂತದ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಭಾರತಕ್ಕೆ47 ರನ್ ಭರ್ಜರಿ ಜಯ

T20 World Cup 2024

ಬ್ರಿಜ್​ಟೌನ್​ (ವೆಸ್ಟ್​ ಇಂಡೀಸ್​) : ಟಿ20 ವಿಶ್ವ ಕಪ್​ನ (T20 World Cup 2024) ಸೂಪರ್​ 8 ಹಂತದಲ್ಲಿ ಭಾರತ ತಂಡ ಅಫಘಾನಿಸ್ತಾನ ತಂಡದ ವಿರುದ್ಧ.. ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಗುಂಪು 2ರಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ. ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ತಂಡ ಆಫಘಾನಿಸ್ತಾನ ತಂಡದ ವಿರುದ್ಧ ಸುಲಭ ವಿಜಯ ತನ್ನದಾಗಿಸಿಕೊಂಡಿತು. ಸೂರ್ಯಕುಮಾರ್ ಯಾದವ್​ (53 ರನ್​, 28 ಎಸೆತ, 5 ಫೊರ್, 3 ಸಿಕ್ಸರ್) ಹಾಗೂ ಜಸ್​ಪ್ರಿತ್ ಬುಮ್ರಾ (3 ವಿಕೆಟ್​, 4 ಓವರ್​, 7 ರನ್​) ಬಾರತ ತಂಡದ ಗೆಲುವಿನ ರೂವಾರಿಗಳೆನಿಸಿಕೊಂಡರು. ಭಾರತ ತಂಡ ಸೂಪರ್ 8 ಹಂತದ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಇಲ್ಲಿನ ಕೆನ್ಸಿಂಗ್ಟನ್​ ಓವಲ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 181 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 134 ರನ್ ಬಾರಿಸಿ ಆಲ್​ಔಟ್​ ಆಗಿ 47 ರನ್​ಗಳ ಸೋಲಿಗೆ ಒಳಗಾಯಿತು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಆಫ್ಘಾನ್ ಬಳಗಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಆರಂಭಿಕರಾದ ರಹ್ಮನುಲ್ಲಾ ಗುರ್ಬಜ್​ (11 ರನ್​), ಹಜರತುಲ್ಲಾ ಝಝೈ (2) ಬುಮ್ರಾ ಬೌಲಿಂಗ್​ಗೆ ಔಟಾದರು. ಇಬ್ರಾಹಿ ಝದ್ರಾನ್​ 8 ರನ್​ ಬಾರಿಸಿ ಅಕ್ಷರ್ ಪಟೇಲ್​ಗೆ ವಿಕೆಟ್​ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಜ್ಮತುಲ್ಲಾ ಒಮರ್ಜೈ (26 ರನ್​), ನಜೀಬುಲ್ಲಾ ಝದ್ರಾನ್​ (19) ರನ್​ ಬಾರಿಸಿ ಸ್ವಲ್ಪ ಪ್ರತಿರೋಧ ತೋರಿದರು. ಆದರೆ ಆಟವನ್ನು ಮುಂದುವರಿಸಲು ಭಾರತೀಯ ಬೌಲರ್​ಗಳು ಅವಕಾಶ ಕೊಡಲಿಲ್ಲ. ಜಡೇಜಾ ಹಾಗೂ ಬುಮ್ರಾ ಅವರಿಬ್ಬರನ್ನು ವಾಪಸ್​​ ಕಳಹಿಸಿದರು.ಮೊಹಮ್ಮದ್ ನಬಿ 14 ರನ್ ಬಾರಿಸಿ ಔಟಾಗುವ ವೇಳೆ ಅಫಘಾನಿಸ್ತಾನ ತಂಡದ ಸೋಲು ನಿಶ್ಚಯವಾಗಿತ್ತು.

ಇದನ್ನೂ ಓದಿ: Team India : ಗೌತಮ್​ ಗಂಭೀರ್ ಅಲ್ಲ, ವಿವಿಎಸ್​​ ಲಕ್ಷ್ಮಣ್​ ಟೀಮ್ ಇಂಡಿಯಾಗೆ ಹೆಡ್​ ಕೋಚ್​​!

ಸೂರ್ಯಕುಮಾರ್ ಅರ್ಧ ಶತಕ

ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ನಾಯಕ ರೋಹಿತ್ ಶರ್ಮಾ (8 ರನ್​) ಮತ್ತೆ ವೈಫಲ್ಯ ಎದುರಿಸಿದರು. ವಿರಾಟ್ ಕೊಹ್ಲಿ 24 ರನ್ ಬಾರಿಸಿ ಅಭಿಮಾನಿಗಳಿಗೆ ಸಮಾಧಾನ ತಂದರು . ರಿಷಭ್ ಪಂತ್ ಒಂದು ಜೀವದಾನ ಪಡೆದ ಹೊರತಾಗಿಯೂ 20 ರನ್​ಗೆ ಸೀಮಿತಗೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಸೂರ್ಯಕುಮಾರ್​ ಯಾದವ್ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಮೈದಾನ ತುಂಬಾ ಅಬ್ಬರಿಸಿದ ಅವರು 53 ರನ್ ಬಾರಿಸಿದರು. ಅಫಘಾನಿಸ್ತಾನದ ಬೌಲರ್​ಗಳು ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಹೊರತಾಗಿಯೂ ಅವರು ಬೌಂಡರಿ, ಸಿಕ್ಸರ್​ಗಳನ್ನು ಬಾರಿಸಿ ಮಿಂಚಿದರು. ಇವರಿಗೆ ಹಾರ್ದಿಕ್ ಪಾಂಡ್ಯ ಉತ್ತಮ ಬೆಂಬಲ ಕೊಟ್ಟರು. 24 ಎಸೆತಕ್ಕೆ 32 ರನ್ ಬಾರಿಸಿದರು. ಪಾಂಡ್ಯ ಇನಿಂಗ್ಸ್​ನಲ್ಲಿ 3 ಫೋರ್​ ಹಾಗೂ 1 ಸಿಕ್ಸರ್ ಸೇರಿಕೊಂಡಿದೆ. ಈ ನಡುವೆ ಶಿವಂ ದುಬೆ 10 ರನ್ ಬಾರಿಸಿ ಔಟಾದರು. ಕೊನೆಯಲ್ಲಿ ರವೀಂದ್ರ ಜಡೇಜಾ 7 ರನ್ ಬಾರಿಸಿದರೆ ಅಕ್ಷರ್ ಪಟೇಲ್​ 12 ರನ್ ಕೊಡುಗೆ ಕೊಟ್ಟರು.

Exit mobile version