ಬೆಂಗಳೂರು: 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ಟೀಂ ಇಂಡಿಯಾ ತನ್ನ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಜೂನ್ 1 ರಿಂದ 29 ರವರೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (USA) ಮತ್ತು ವೆಸ್ಟ್ ಇಂಡೀಸ್ನಲ್ಲಿ ಈ ಟೂರ್ನಿ ನಡೆಯಲಿದೆ. ‘ಎ’ ಗುಂಪಿನಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ, ಆತಿಥೇಯ ಅಮೆರಿಕ, ಐರ್ಲೆಂಡ್ ಮತ್ತು ಕೆನಡಾ ತಂಡಗಳಿವೆ. ಮೆನ್ ಇನ್ ಬ್ಲೂ (Men In Blue) ತಮ್ಮ ಎಲ್ಲಾ ಗುಂಪು ಪಂದ್ಯಗಳನ್ನು ಯುಎಸ್ಎಯಲ್ಲಿ ಆಡಲಿದೆ. ಅವರ ಮೊದಲ ಮೂರು ಪಂದ್ಯಗಳು ನ್ಯೂಯಾರ್ಕ್ನಲ್ಲಿ ನಡೆದರೆ, ಕೊನೆಯ ಗುಂಪು ಪಂದ್ಯವು ಲಾಡರ್ಹಿಲ್ನಲ್ಲಿ ನಡೆಯಲಿದೆ.
One jersey. One Nation.
— adidas (@adidas) May 6, 2024
Presenting the new Team India T20 jersey.
Available in stores and online from 7th may, at 10:00 AM. pic.twitter.com/PkQKweEv95
ಬಹುನಿರೀಕ್ಷಿತ ಟಿ 20 ವಿಶ್ವಕಪ್ 2024 ಪ್ರಾರಂಭವಾಗಲು ಒಂದು ತಿಂಗಳಿಗಿಂತ ಕಡಿಮೆ ಸಮಯ ಇರುವಾಗ ಭಾರತವು ಆಕರ್ಷಕ ಜೆರ್ಸಿಯನ್ನು ಅನಾವರಣಗೊಳಿಸಿದೆ. ಎಂದಿನಂತೆ ಜೆರ್ಸಿಯು ನೀಲಿ ಬಣ್ಣದಿಂದ ಕೂಡಿದೆ. ಆದರೆ, ಕೇಸರಿಯ ರಂಗು ಹೆಚ್ಚಿದೆ. ತೋಳುಗಳು ಕೇಸರಿ ಬಣ್ಣದ್ದಾಗಿವೆ. ಭುಜದ ಮೇಲೆ ಸಾಂಪ್ರದಾಯಿಕ ಬಿಳಿ ಅಡಿಡಾಸ್ ಪಟ್ಟಿಗಳಿವೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ನಲ್ಲಿ ಭಾರತದ ಜರ್ಸಿಯಲ್ಲಿ ಭುಜದ ಮೇಲೆ ತ್ರಿವರ್ಣ ಪಟ್ಟೆಗಳಿದ್ದವು.
ಇದನ್ನೂ ಓದಿ: IPL 2024 : ಮುಂಬೈ ಚಾ ರಾಜಾ ರೋಹಿತ್ ಶರ್ಮಾ ಎಂದು ಕೂಗಿದ ಹೇಡನ್ ಪುತ್ರಿ ಗ್ರೇಸ್; ಇಲ್ಲಿದೆ ವಿಡಿಯೊ
ಭಾರತದ ಜೆರ್ಸಿಯ ಮುಂಭಾಗದಲ್ಲಿ ಪ್ರಾಯೋಜಕ ‘ಡ್ರೀಮ್ 11’ ಹೆಸರನ್ನು ಸಹ ಇರಬೇಕು. ಆದರೆ ಐಸಿಸಿ ಸ್ಪರ್ಧೆಯ ಸಮಯದಲ್ಲಿ ಜೆರ್ಸಿಯಲ್ಲಿ ಯಾವುದೇ ಪ್ರಾಯೋಜಕರ ಹೆಸರನ್ನು ಹಾಕಲು ಐಸಿಸಿ ನಿಯಮವು ತಂಡಗಳಿಗೆ ಅನುಮತಿಸುವುದಿಲ್ಲ. ಹೀಗಾಗಿ ವಿಶ್ವ ಕಪ್ ನಲ್ಲಿ ಅದನ್ನು ತೆಗೆದು ಹಾಕಲಾಗಿದೆ.
ನಾಯಕ ರೋಹಿತ್ ಶರ್ಮಾ, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಜರ್ಸಿ ಅನಾವರಣದ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಧರ್ಮಶಾಲಾದ ಸುಂದರವಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
20 ವಿಶ್ವಕಪ್ ಗಾಗಿ ಭಾರತದ ತಂಡವನ್ನು ಕಳೆದ ವಾರ ಘೋಷಿಸಲಾಗಿತ್ತು. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಭಾರತ ತಂಡ ಜೂನ್ 5ರಂದು ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ಜೂನ್ 9ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಜೂನ್ 12ರಂದು ಅಮೆರಿಕ ವಿರುದ್ಧ ಸೆಣಸಲಿದ್ದು, ಜೂನ್ 15ರಂದು ಕೆನಡಾ ವಿರುದ್ಧ ಸೆಣಸಲಿದೆ.
ಭಾರತ ತಂಡ ಇ ರೀತಿ ಇದೆ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ. ಸಿರಾಜ್