ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಟಿ 20 ವಿಶ್ವಕಪ್ 2024 ರ (T20 World Cup 2024) ಪಂದ್ಯಕ್ಕೆ ಮುಂಚಿತವಾಗಿ ಐಸಿಸ್ ಬೆದರಿಕೆ ಹಾಕಿದ್ದಾರೆ. ಕಾಯುತ್ತಿದ್ದೇವೆ ನಿಮಗಾಗಿ ಎಂಬ ಬೆದರಿಕೆಯ ಪೋಸ್ಟ್ಗಳು ಹರಿದಾಡಿದ್ದವು. ಇದು ವರದಿಯಾದ ನಂತರ ಆಟಗಾರರಿಗೆ ಭದ್ರತೆ ಬಿಗಿಗೊಳಿಸಲಾಗಿದೆ. ಆದಾಗ್ಯೂ, ಇದು ಯುನೈಟೆಡ್ ಸ್ಟೇಟ್ಸ್ ಮತ್ತು ಸುತ್ತಮುತ್ತಲಿನ ಭಾರತೀಯ ಕ್ರಿಕೆಟಿಗರ ಓಡಾಟದ ಮೇಲೆ ಪರಿಣಾಮ ಬೀರಿಲ್ಲ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕ್ ಜೂನ್ 9 ರಂದು ಅಮೆರಿಕದ ನ್ಯೂಯಾರ್ಕ್ನ ಹೊರವಲಯದಲ್ಲಿರುವ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದಾರೆ. ಈ ಕುರಿತು ಮಾತನಾಡಿದ ಟೀಮ್ ಇಂಡಿಯಾ ಮೂಲಗಳು ಆಟಗಾರರಿಗೆ ಯಾವುದೇ ನಿರ್ದೇಶನ ನೀಡಲಾಗಿಲ್ಲ ಮತ್ತು ಅವರು ಸಾಮಾನ್ಯವಾಗಿ ನ್ಯೂಯಾರ್ಕ್ನಲ್ಲಿ ತಿರುಗಾಡಬಹುದು. ತಂಡವು ಅಮೆರಿಕದಲ್ಲಿ ಇಳಿದ ನಂತರದಿಂದ ಭದ್ರತೆ ಚೆನ್ನಾಘಿ ನೀಡಿದ್ದೇವೆ. ಅಭ್ಯಾಸ ಪಂದ್ಯದ ವೇಳೆಯೂ ಅತ್ಯುತ್ತಮವಾಗಿತ್ತು ಅವರು ಹೇಳಿದ್ದಾರೆ.
ಇದನ್ನೂ ಓದಿ: T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?
ವರದಿಯ ಪ್ರಕಾರ ಹಲವಾರು ಭಾರತೀಯ ಆಟಗಾರರು ನ್ಯೂಯಾರ್ಕ್ ಸುತ್ತಲೂ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಅವರಲ್ಲಿ ಕೆಲವರು ಅಪ್ರತಿಮ ಟೈಮ್ಸ್ ಸ್ಕ್ವೇರ್ಗೆ ಭೇಟಿ ನೀಡಿದ್ದರು. ಇತರರು ದೀರ್ಘ ನಡಿಗೆ ಮತ್ತು ಹೊರ ಪ್ರದೇಶಕ್ಕೆ ಊಟಕ್ಕೆ ಹೋಗಿದ್ದರು. ಶನಿವಾರ (ಜೂನ್ 1) ಬಾಂಗ್ಲಾದೇಶ ವಿರುದ್ಧದ ಭಾರತದ ಏಕೈಕ ಟಿ 20 ವಿಶ್ವಕಪ್ ಅಭ್ಯಾಸ ಪಂದ್ಯದ ಸಮಯದಲ್ಲಿ ನ್ಯೂಯಾರ್ಕ್ನಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.
ಭದ್ರತೆ ಉಲ್ಲಂಘಿಸಿದ
ಅಭ್ಯಾಸ ಪಂದ್ಯದಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದ. ಆಟದ ಅಖಾಡಕ್ಕೆ ಪ್ರವೇಶಿಸಿದ್ದ. ಭದ್ರತಾ ಸಿಬ್ಬಂದಿ ಮೈದಾನಕ್ಕೆ ಬರುವ ಮೊದಲು ಅವರು ಭಾರತದ ನಾಯಕ ರೋಹಿತ್ ಅವರನ್ನು ತಬ್ಬಿಕೊಂಡಿದ್ದ. ಇತರ ಸ್ಥಳಗಳಿಗಿಂತ ಭಿನ್ನವಾಗಿ ಆತ ನೆಲಕ್ಕೆ ಬಿದ್ದು ಸಿಬ್ಬಂದಿಗೆ ಆತನನ್ನು ಹೊರಕ್ಕೆ ಕಳಹಿಸಲು ಕಷ್ಟವಾಯಿತು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ಲಿಪ್ನಲ್ಲಿ ರೋಹಿತ್ ಪೊಲೀಸ್ ಅಧಿಕಾರಿಗಳಿಗೆ ಅಭಿಮಾನಿಗೆ ಹೊಡೆಯಬೇಡಿ ಮತ್ತು ಆತನಿಗೆ ನೋವುಂಟು ಮಾಡಬೇಡಿ ಎಂದು ಹೇಳುತ್ತಿರುವುದು ಕಂಡುಬರುತ್ತದೆ.
ಟಿ 20 ವಿಶ್ವಕಪ್ 2024 ರಲ್ಲಿ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ನ್ಯೂಯಾರ್ಕ್ ನಗರ ಪೊಲೀಸ್ ಇಲಾಖೆ ನಸ್ಸಾವು ಕೌಂಟಿಯಲ್ಲಿ ‘ಬಿಗಿ ಭದ್ರತೆ’ ಪ್ರಾರಂಭಿಸಿದೆ. ಬಹುನಿರೀಕ್ಷಿತ ಮುಖಾಮುಖಿಯ ಈ ಭದ್ರತಾ ಪರಿಸ್ಥಿತಿಯನ್ನು ಕಳೆದ ಬುಧವಾರ (ಮೇ 29) ನಸ್ಸಾವು ಕೌಂಟಿಯ ಪೊಲೀಸ್ ಆಯುಕ್ತ ಪ್ಯಾಟ್ರಿಕ್ ರೈಡರ್ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.
ನೀವು ಇಷ್ಟು ದೊಡ್ಡ ಪಂದ್ಯ ಮತ್ತು ಅಪಾಯ ಸಂಖ್ಯೆಯ ಪ್ರೇಕ್ಷಕರನ್ನು ಹೊಂದಿರುವಾಗ ಎಲ್ಲವೂ ನಾವಯ ವಿಶ್ವಾಸಾರ್ಹ ಭದ್ರತೆ ನೀಡುತ್ತೇವೆ. ನಸ್ಸಾವು ಕೌಂಟಿಯ ನಿವಾಸಿಗಳ ಭದ್ರತೆ ಮತ್ತು ಸುರಕ್ಷತೆಯ ವಿಷಯಕ್ಕೆ ಬಂದಾಗ ನಾವು ಪ್ರತಿಯೊಂದು ವಿವರಗಳನ್ನು ಪರಿಶೀಲಿಸುತ್ತೇವೆ. ಈ ಕೌಂಟಿಯ ಇತಿಹಾಸದಲ್ಲಿ ನಾವು ಮಾಡಬೇಕಾದ ಅತಿದೊಡ್ಡ ಭದ್ರತೆ ಇದು ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ ಎಂದು ಹೇಳಿದ್ದರು.
ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ರ ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಯುಎಸ್ಎ ಸ್ಥಾನ ಪಡೆದಿವೆ. ಮೆನ್ ಇನ್ ಬ್ಲೂ ತಂಡ ಜೂನ್ 5ರಂದು ನ್ಯೂಯಾರ್ಕ್ ನಲ್ಲಿ ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.