Site icon Vistara News

T20 World Cup 2024: ವಿಶ್ವಕಪ್​ಗೆ ಪಂತ್​ ಮೊದಲ ಆಯ್ಕೆಯ ಕೀಪರ್​​ ಅಲ್ಲ; ಮತ್ಯಾರು?

T20 World Cup 2024

ಮುಂಬಯಿ: ಜೂನ್​ 1ರಿಂದ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ(T20 World Cup 2024) ಸೋಮವಾರ ನ್ಯೂಜಿಲ್ಯಾಂಡ್ ತನ್ನ ತಂಡವನ್ನು ಪ್ರಕಟಗೊಳಿಸಿದೆ. ಭಾರತ ತಂಡ ಯಾವಾಗ ಪ್ರಕಟಗೊಳ್ಳಿದೆ ಎಂದು ಕಾಯುತ್ತಿರುವಾಗಲೇ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ.​

ಕಾರು ಅಪಘಾತದಿಂದ ಗಾಯಗೊಂಡು ಐಪಿಎಲ್​ ಮೂಲಕ 14 ತಿಂಗಳ ಬಳಿಕ ಕ್ರಿಕೆಟ್​ ಆಡಲಿಳಿದರೂ ಕೂಡ ರಿಷಭ್​ ಪಂತ್(Rishabh Pant)​ ಅವರ ಕೀಪಿಂಗ್​ ಮತ್ತು ಬ್ಯಾಟಿಂಗ್​ ಫಾರ್ಮ್​ನಲ್ಲಿ ಯಾವುದೇ ಕೊರತೆ ಕಂಡುಬಂದಿರಲಿಲ್ಲ. ಈ ಹಿಂದಿನಂತೆ ಅವರ ಫಾರ್ಮ್​ ಕಂಡುಬಂದಿತ್ತು. ಹೀಗಾಗಿ ಪಂತ್​ ಟಿ20 ವಿಶ್ವಕಪ್​ಗೆ ಮೊದಲ ಕೀಪರ್​ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಪಂತ್​ ಮೊದಲ ಆಯ್ಕೆಯ ಕೀಪರ್​ ಎಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.

ಕ್ರಿಕ್​ ಇನ್ಫೋ ವರದಿಯ ಪ್ರಕಾರ, ಆಯ್ಕೆ ಸಮಿತಿಯು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್(Sanju Samson) ಅವರನ್ನು ಟೀಮ್ ಇಂಡಿಯಾಕ್ಕೆ ತಮ್ಮ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಪರಿಗಣಿಸಲಿದೆ, ಪಂತ್​ ದ್ವಿತೀಯ ಆಯ್ಕೆಯ ಕೀಪರ್​ ಆಗಿದ್ದಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ T20 World Cup 2024: ಸಭೆ ನಡೆಸಿದ ರೋಹಿತ್​, ಅಗರ್ಕರ್​; ಈ ಆಟಗಾರನಿಗೆ ಅವಕಾಶವಿಲ್ಲ!

ಕೆ.ಎಲ್​ ರಾಹುಲ್(KL Rahul)​, ದಿನೇಶ್​ ಕಾರ್ತಿಕ್​ ಮತ್ತು ಜಿತೇಶ್ ಶರ್ಮಾ ಕೂಡ ಕೀಪಿಂಗ್​ ರೇಸ್​ನಲ್ಲಿದ್ದರು. ಈ ಪೈಕಿ ಜಿತೇಶ್​ ಶರ್ಮ ಈ ಬಾರಿಯ ಐಪಿಎಲ್​ನಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ತೋರಿಲ್ಲ. ಹೀಗಾಗಿ ಅವರಿಗೆ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ. ಆರಂಭಿಕರಾಗಿ ರೋಹಿತ್ ಶರ್ಮಾ ಜತೆ ಇನಿಂಗ್ಸ್​ ಆರಂಭಿಸಲು ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ಋತುರಾಜ್​ ಗಾಯಕ್ವಾಡ್​ ಮಧ್ಯೆ ತೀವ್ರ ಪೈಪೋಟಿ ಇದ್ದರೂ ಎಡಗೈ ಬ್ಯಾಟರ್​​ ಆಗಿರುವ ಜೈಸ್ವಾಲ್​ಗೆ ಈ ಅವಕಾಶ ಸಿಗುವು ಸಾಧ್ಯತೆ ಅಧಿಕವಾಗಿದೆ.

ವಿಶ್ವಕಪ್​ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ವಿಂಡೀಸ್​ ನೆಲದಲ್ಲಿ ಈಗಾಗಕಲೇ ಜೈಸ್ವಾಲ್​ ಉತ್ತಮ ದಾಖಲೆ ಹೊಂದಿದ್ದಾರೆ. ಚೊಚ್ಚಲ ಟೆಸ್ಟ್​ ಪಂದ್ಯದಲ್ಲಿಯೇ ಬಿರುಸಿನ ಬ್ಯಾಟಿಂಗ್​ ಮೂಲಕ ಶತಕ ಬಾರಿಸಿ ಮಿಂಚಿದ್ದರು. ನಿಧಾನಗತಿಯ ಪಿಚ್​ನಲ್ಲಿಯೂ ಜೈಸ್ವಾಲ್​ ಉತ್ತಮ ರನ್​ ಗಳಿಸುವಲ್ಲಿ ಸಮರ್ಥರಿದ್ದಾರೆ. ಹೀಗಾಗಿ ಅವರಿಗೆ ಈ ಅವಕಾಶ ಸಿಗುವುದು ಪಕ್ಕಾ ಆಗಿದೆ.

ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಐಪಿಎಲ್​ ಪ್ರದರ್ಶನ ನೋಡಿ ಟಿ20ಯಲ್ಲಿ ಅವಕಾಶ ಸಿಗಬಹುದು ಎನ್ನಲಾಗಿತ್ತು. ಆದರೆ, ಅವರು ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೋಚಿಂಗ್ ಸ್ಟಾಫ್‌ ನ ಪ್ರಭಾವಿ ಸದಸ್ಯರಿಗೆ ಚಾಹಲ್ ಆದ್ಯತೆಯ ಆಯ್ಕೆಯಾಗಿಲ್ಲ ಎಂದು ವರದಿಯಾಗಿದೆ. ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ವಿಭಾಗದಲ್ಲಿ ಮೊದಲ ಆಯ್ಕೆಯಾಗಿದ್ದು, ಮೂರನೇ ಸ್ಪಿನ್ನರ್ ಸ್ಥಾನಕ್ಕೆ ಅಕ್ಷರ್ ಪಟೇಲ್ ಅಥವಾ ರವಿ ಬಿಷ್ಣೋಯಿ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Exit mobile version