ದುಬೈ: ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತವನ್ನು ಐಸಿಸಿ ಸೋಮವಾರ ಪ್ರಕಟಿಸಿದೆ. ಗೆದ್ದ ತಂಡಕ್ಕೆ ಭರ್ಜರಿ ನಗುದು ಬಹುಮಾನ ಸಿಗಲಿದೆ. ಚಾಂಪಿಯನ್ ತಂಡಕ್ಕೆ 20 ಕೋಟಿ ರೂ. ಸಿಗಲಿದೆ. ಇದು ಈ ವರೆಗಿನ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲೇ ಅತ್ಯಧಿಕ ಮೊತ್ತದ ಬಹುಮಾನವಾಗಿದೆ. ಒಟ್ಟು ನಗದು ಬಹುಮಾನ ಮೊತ್ತ 93.50 ಕೋಟಿ ರೂ. ಆಗಿದೆ.
ಈಗಾಗಲೇ ಟೂರ್ನಿಯಲ್ಲಿ ಮೂರು ಪಂದ್ಯಗಳು ನಡೆದಿವೆ. ಟೂರ್ನಿಯ ಜಂಟಿ ಆತಿಥ್ಯವಹಿಸಿಕೊಂಡಿರುವ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆಡಿದ ಮೊದಲ ಪಂದ್ಯದಲ್ಲೇ ಗೆದ್ದು ಶುಭಾರಂಭ ಕಂಡಿದೆ. ಒಟ್ಟು ಈ ಬಾರಿ 20 ತಂಡಗಳು ಕಣಕ್ಕಿಳಿಯುತ್ತಿವೆ. ಇದೀಗ ಚಾಂಪಿಯನ್ ತಂಡಕ್ಕೆ ಸಿಗುವ ಮೊತ್ತವನ್ನು ಐಸಿಸಿ ಪ್ರಕಟಿಸಿದೆ.
ಈ ಬಾರಿಯ ವಿಶ್ವಕಪ್ ಬಹುಮಾನದ ಗಾತ್ರ 11.25 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಇದು ಭಾರತೀಯ ರೂಪಾರಿಯಲ್ಲಿ ಸುಮಾರು ರೂ 93.50 ಕೋಟಿ ರೂ. ಆಗಿದೆ. ಚಾಂಪಿಯನ್ ತಂಡಕ್ಕೆ 2.45 ಮಿಲಿಯನ್ ಡಾಲರ್ (ಸುಮಾರು 20 ಕೋಟಿ ರೂ.) ಬಹುಮಾನ ಸಿಗಲಿದೆ. 1.28 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 10.64 ಕೋಟಿ ರೂ. ಬಹುಮಾನ ಸಿಗಲಿದೆ.
ಕಳೆದ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಇಂಗ್ಲೆಂಡ್ ತಂಡವು 13.84 ಕೋಟಿ ನಗದು ಬಹುಮಾನ ಪಡೆದುಕೊಂಡಿತ್ತು. ರನ್ನರ್ ಅಪ್ ಪಾಕಿಸ್ತಾನ ತಂಡವು 7.4 ಕೋಟಿ ಪಡೆದಿತ್ತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ಭಾರತ 4.5 ಕೋಟಿ ರೂ., ಪಾಕಿಸ್ತಾನ ವಿರುದ್ಧ ಸೋತ ನ್ಯೂಜಿಲ್ಯಾಂಡ್ 4.19 ಕೋಟಿ ರೂ. ಬಹುಮಾನ ಪಡೆದಿತ್ತು.
ಇದನ್ನೂ ಓದಿ T20 World Cup 2024 : ಒಮಾನ್ ವಿರುದ್ಧ ಹೊಸ ದಾಖಲೆ ಬರೆದ ನಮೀಬಿಯಾ ತಂಡದ ರುಬೆನ್ ಟ್ರಂಪೆಲ್ಮನ್
ಸೋತ ತಂಡಗಳಿಗೂ ನಗದು ಬಹುಮಾನ
ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೂ ಈ ಬಾರಿ ಭರ್ಜರಿ ಬಹುಮಾನ ಸಿಗಲಿದೆ. ಅದರಂತೆ ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ 6.55 ಕೋಟಿ ರೂ. ಸಿಗಲಿದೆ. ಸೂಪರ್ 8 ಹಂತದಲ್ಲಿ ಸೋತು ಲೀಗ್ನಿಂದ ಹೊರಬಿಳುವ ಪ್ರತಿಯೊಂದು ತಂಡಗಳಿಗೆ 3.18 ಕೋಟಿ ರೂ., ಹಾಗೆಯೇ ಪ್ರತಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆಯುವ ತಂಡಗಳಿಗೆ 2.06 ಕೋಟಿ ರೂ., ಉಳಿದ ತಂಡಗಳಿಗೆ 1.87 ಕೋಟಿ ರೂ. ಪ್ರೋತ್ಸಾಹಕ ಬಹುಮಾನ ಸಿಗಲಿದೆ. ಇದು ಮಾತ್ರವಲ್ಲದೆ, ಸೂಪರ್ 8 ಹಂತದವರೆಗೆ ಪ್ರತಿ ಪಂದ್ಯವನ್ನು ಗೆಲ್ಲುವ ತಂಡಗಳಿಗೆ 25.9 ಲಕ್ಷ ರೂಗಳನ್ನು ಬಹುಮಾನ ಮೊತ್ತ ಸಿಗಲಿದೆ.