ಸೇಂಟ್ ಲೂಸಿಯಾ: ಟಿ20 ವಿಶ್ವಕಪ್ನ(T20 World Cup) ಹಲವು ಲೀಗ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ಪಂದ್ಯಗಳು ರದ್ದುಗೊಂಡಿದ್ದವು. ಸೂಪರ್-8 ಹಂತಕ್ಕೇರುವಲ್ಲಿ(T20 World Cup Super 8 Stage) ಕೆಲ ತಂಡಕ್ಕೆ ಮಳೆ ಭಾರೀ ಹಿನ್ನಡೆ ಉಂಟುಮಾಡಿತ್ತು. ಇದೀಗ ಸೂಪರ್-8 ಹಂತದ ಪಂದ್ಯಗಳಿಗೂ(T20 World Cup Super 8) ಮಳೆ ಭೀತಿ ಎದುರಾಗಿದೆ.
ಜೂನ್ 19ರಂದು ನಾರ್ತ್ಸೌಂಡ್ನಲ್ಲಿ ನಡೆಯಲಿರುವ ಸೂಪರ್ 8ನ ಮೊದಲ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ಗ್ರಾಸ್ ಐಲೆಟ್, ಬ್ರಿಜ್ಟೌನ್, ಸೇಂಟ್ ವಿನ್ಸೆಂಟ್ನಲ್ಲಿ ಸೂಪರ್-8ನ ಇತರ ಪಂದ್ಯಗಳು ನಿಗದಿಯಾಗಿವೆ. ಈ ಪೈಕಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆ ಭೀತಿ ಇದೆ.
ಭಾರತ-ಆಸೀಸ್ ಪಂದ್ಯಕ್ಕೂ ಮಳೆ ಭೀತಿ
ಜೂನ್ 24ರಂದು ಗ್ರಾಸ್ ಐಲೆಟ್ನಲ್ಲಿ ನಡೆಯಲಿರುವ ಭಾರತ-ಆಸೀಸ್(Australia vs India) ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಭಾರೀ ಮಳೆಯಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಹೀಗಾಗಿ ಭಾರತ ಅಫಘಾನಿಸ್ತಾನ ಮತ್ತು ಬಾಂಗ್ಲಾ ಎದುರಿನ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಸೆಮಿಫೈನಲ್ ಟಿಕೆಟ್ ಖಾತ್ರಿಗೊಳಿಸಬೇಕು. ಜೂನ್ 29ರಂದು ಬ್ರಿಜ್ಟೌನ್ನಲ್ಲಿ ನಿಗದಿಯಾಗಿರುವ ಫೈನಲ್ ಪಂದ್ಯವೂ ಮಳೆ ಭೀತಿ ಎದುರಾಗಿದೆ.
ಇದನ್ನೂ ಓದಿ Team India: ಬಾರ್ಬಡೋಸ್ನಲ್ಲಿ ಬೀಚ್ ವಾಲಿಬಾಲ್ ಆಡಿದ ಟೀಮ್ ಇಂಡಿಯಾ; ವಿಡಿಯೊ ವೈರಲ್
ಸೂಪರ್ 8ನಲ್ಲಿ(T20 World Cup 2024) ಪ್ರತಿ ತಂಡಗಳು ತನ್ನ ಗುಂಪಿನ ಉಳಿದ ಮೂರು ತಂಡಗಳ ವಿರುದ್ದ ಆಡಲಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿ ಫೈನಲ್ ಪ್ರವೇಶಿಸಿದೆ.
ಗುಂಪು 1: ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ, ಬಾಂಗ್ಲಾದೇಶ
ಗುಂಪು 2: ಯುಎಸ್ಎ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ
ಎರಡು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಕ್ಕೆ ಮೀಸಲು ದಿನಗಳು ಜಾರಿಯಲ್ಲಿವೆ. ಒಂದೊಮ್ಮೆ ಮಳೆಯಿಂದ ಮೀಸಲು ದಿನವೂ ಸೆಮಿಫೈನಲ್ ಪಂದ್ಯ ನಡೆಯದಿದ್ದರೆ ಆಗ ರನ್ ರೇಟ್ ಆಧಾರದಲ್ಲಿ ಮುಂದಿರುವ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ. ಫೈನಲ್ನ ಮೀಸಲು ದಿನವೂ ರದ್ದುಗೊಂಡರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ವಿಜಯೀ ಎಂದು ನಿರ್ಧರಿಸಲಾಗುತ್ತದೆ.
ಬೌಂಡರಿ ಕೌಂಟ್ ಇಲ್ಲ
2019 ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೂಪರ್ ಓವರ್ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್ ಫೈನಲ್ ಪಂದ್ಯ ಟೈ ಆದರೆ ಫಲಿತಾಂಶ ಬರುವ ತನಕ ಸೂಪರ್ ಓವರ್ ಆಡಿಸಲಾಗುತ್ತದೆ.
ಭಾರತದ ಸೂಪರ್-8 ಪಂದ್ಯದ ವೇಳಾಪಟ್ಟಿ
ಎದುರಾಳಿ | ದಿನಾಂಕ | ತಾಣ | ಪ್ರಸಾರ |
ಭಾರತ-ಅಫಘಾನಿಸ್ತಾನ | ಜೂನ್ 20 | ಬಾರ್ಬಡೋಸ್ | ರಾತ್ರಿ 8ಕ್ಕೆ |
ಭಾರತ-ಬಾಂಗ್ಲಾದೇಶ | ಜೂನ್ 22 | ಆಂಟಿಗುವಾ | ರಾತ್ರಿ 8ಕ್ಕೆ |
ಭಾರತ-ಆಸ್ಟ್ರೇಲಿಯಾ | ಜೂನ್ 24 | ಸೇಂಟ್ ಲೂಸಿಯಾ | ರಾತ್ರಿ 8ಕ್ಕೆ |