Site icon Vistara News

ಎರಡು ದೇಶದ 9 ತಾಣಗಳಲ್ಲಿ ನಡೆಯಲಿದೆ ಟಿ20 ವಿಶ್ವಕಪ್; ಭಾರತದ ವೇಳಾಪಟ್ಟಿ ಇಲ್ಲಿದೆ

T20 World Cup 2024

ದುಬೈ: ಕ್ರಿಕೆಟ್​ ಅಭಿಮಾನಿಗಳು ಕಾದಯ ಕುಳಿತಿದ್ದ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ವೇಳಾಪಟ್ಟಿ ಶುಕ್ರವಾರ ಪ್ರಕಟಗೊಂಡಿದೆ. ಈ ಟೂರ್ನಿ ವೆಸ್ಟ್​ ಇಂಡೀಸ್​ ಮ್ತು ಅಮೆರಿಕ ಆತಿಥ್ಯದಲ್ಲಿ ನಡೆಯಲಿದೆ. ಈ ಎರಡು ದೇಶಗಳ 9 ತಾಣಗಳಲ್ಲಿ ಪಂದ್ಯಾವಳಿ ಸಾಗಲಿದೆ. ಪಂದ್ಯಾವಳಿ ಜೂನ್ 1 ರಿಂದ ಆರಂಭಗೊಂಡು ಜೂನ್​ 29ರ ತನಕ ನಡೆಯಲಿದೆ. ಒಟ್ಟು 55 ಪಂದ್ಯಗಳು ಇರಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.

ಪಂದ್ಯಗಳ ತಾಣ


ವೆಸ್ಟ್ ಇಂಡೀಸ್‌


ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್

ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್

ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನಾ

ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ಆಂಟಿಗುವಾ

ಡ್ಯಾರೆನ್ ಸ್ಯಾಮಿ ಕ್ರಿಕೆಟ್ ಮೈದಾನ, ಸೇಂಟ್ ಲೂಸಿಯಾ

ಆರ್ನೋಸ್ ವೇಲ್ ಸ್ಟೇಡಿಯಂ, ಸೇಂಟ್ ವಿನ್ಸೆಂಟ್

ಅಮೆರಿಕ


ಐಸೆನ್‌ಹೋವರ್ ಪಾರ್ಕ್, ನ್ಯೂಯಾರ್ಕ್

ಲಾಡರ್‌ಹಿಲ್, ಫ್ಲೋರಿಡಾ

ಗ್ರ್ಯಾಂಡ್ ಪ್ರೈರೀ, ಟೆಕ್ಸಾಸ್

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಬದ್ಧ ಎದುರಾಳಿ ಭಾರತ-ಪಾಕ್​ ಪಂದ್ಯ ಯಾವಾಗ?

ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಆತಿಥೇಯ ಯುಎಸ್​ಎ ತಂಡಗಳು ಕಾಣಿಸಿಕೊಂಡಿದೆ. ಒಟ್ಟು 5 ತಂಡಗಳ ನಾಲ್ಕು ಗುಂಪುಗಳನ್ನು ಮಾಡಲಾಗಿದೆ. ಟಿ20 ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 20 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

ಟೀಮ್​ ಇಂಡಿಯಾದ ವೇಳಾಪಟ್ಟಿ (ಗುಂಪು ಹಂತ)

ಜೂನ್ 5 – ಭಾರತ vs ಐರ್ಲೆಂಡ್, ನ್ಯೂಯಾರ್ಕ್

ಜೂನ್ 9- ಭಾರತ vs ಪಾಕಿಸ್ತಾನ, ನ್ಯೂಯಾರ್ಕ್

ಜೂನ್ 12- ಭಾರತ vs ಯುಎಸ್​ಎ, ನ್ಯೂಯಾರ್ಕ್

ಜೂನ್ 15- ಭಾರತ vs ಕೆನಡಾ, ಫ್ಲೋರಿಡಾ

4 ಗುಂಪುಗಳ ತಂಡಗಳ ಪಟ್ಟಿ

ಗುಂಪು ಎ- ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್​ಎ.

ಗುಂಪು ಬಿ- ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್.

ಗುಂಪು ಸಿ- ನ್ಯೂಜಿಲ್ಯಾಂಡ್​, ಅಫಘಾನಿಸ್ತಾನ, ವೆಸ್ಟ್ ಇಂಡೀಸ್, ಉಗಾಂಡಾ, ಪಿಎನ್​ಜಿ.

ಗುಂಪು ಡಿ- ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಶ್ರೀಲಂಕಾ, ನೇಪಾಳ.

ಹೊಸ ಸ್ವರೂಪ

ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್ ನಡೆಯಲಿದೆ.

Exit mobile version