Site icon Vistara News

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ

T20 World Cup 2024

ಲಂಡನ್​/ಜೊಹಾನ್ಸ್​ಬರ್ಗ್​: ಅಮೆರಿಕಾ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಐಸಿಸಿ ಪುರುಷರ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಹಾಲಿ ಚಾಂಪಿಯನ್​ ಇಂಗ್ಲೆಂಡ್(England T20 World Cup squad)​ ಮತ್ತು ದಕ್ಷಿಣ ಆಫ್ರಿಕಾ(South Africa T20 World Cup squad) ಮಂಗಳವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮೊಣಕೈ ಗಾಯಕ್ಕೆ ತುತ್ತಾಗಿ ದೀರ್ಘಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದ ಮಾರಕ ವೇಗಿ ಜೋಫ್ರಾ ಆರ್ಚರ್​ ಇಂಗ್ಲೆಂಡ್​ ತಂಡ ಸೇರಿದ್ದಾರೆ.

ಆರ್ಚರ್​ ಅವರು 2019ರ ಏಕದಿನ ವಿಶ್ವಕಪ್​ ಬಳಿಕ ಗಾಯದ ಸಮಸ್ಯೆಗೆ ಸಿಲುಕಿದ್ದರು. ಕೆಲವು ಬಾರಿ ಚೇತರಿಕೆ ಕಂಡರೂ ಕೂಡ ಪದೇಪದೆ ಗಾಯಕ್ಕೀಡಾಗುತ್ತಲೇ ಇದ್ದರು. ಇದೇ ಕಾರಣದಿಂದ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿಯೂ ಸ್ಥಾನ ಪಡೆಯಲು ವಿಫಲರಾಗಿದ್ದರು. ಆರ್ಚರ್​ ಕಳೆದ ಒಂದುವರೆ ವರ್ಷದಿಂದ ಇಂಗ್ಲೆಂಡ್​ ಪರ ಏಕದಿನ ಮತ್ತು ಟಿ20 ಆಡಿರಲಿಲ್ಲ. ಇದೀಗ ಟಿ20 ವಿಶ್ವಕಪ್​ ಮೂಲಕ ಮತ್ತೆ ಕಮ್​ಬ್ಯಾಕ್​ ಮಾಡಲಿದ್ದಾರೆ.

ಇಂಗ್ಲೆಂಡ್​ ತಂಡವನ್ನು ಜಾಸ್​ ಬಟ್ಲರ್​ ಮುನ್ನಡೆಸಲಿದ್ದಾರೆ. ಬೆನ್​ ಸ್ಟೋಕ್ಸ್​ ಟೂರ್ನಿಯಿಂದ ಹೊರಗುಳಿದಿದ್ದಾರೆ. ಬೆನ್ ಡಕೆಟ್ ಆಲ್ ರೌಂಡರ್ ಮೊಯಿನ್ ಅಲಿ ಕೂಡ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್​ ತಂಡ ಸ್ಕಾಟ್ಲೆಂಡ್​ ವಿರುದ್ಧ ಜೂನ್​ 4 ರಂದು ಆಡುವ ಮೂಲಕ ತನ್ನ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ T20 World Cup 2024: ಇಂದು ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಸಂಭಾವ್ಯ ತಂಡ ಹೀಗಿದೆ

ಇಂಗ್ಲೆಂಡ್​ ತಂಡ


ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜ್ಯಾಕ್ಸ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಮಾರ್ಕ್ ವುಡ್.

ಬಲಿಷ್ಠ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ಕೂಡ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ತಂಡವನ್ನು ಐಡೆನ್​ ಮಾರ್ಕ್ರಮ್​ ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾ ಜೂನ್​ 3ರಂದು ನಡೆಯುವ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಶುರುಮಾಡಲಿದೆ. ಐಪಿಎಲ್​ನಲ್ಲಿ ವಿಸ್ಫೋಟಕ ಬ್ಯಾಟಿಂಗ್​ ಮೂಲಕಗ ಗಮನ ಸೆಳೆದಿರುವ ಹೆನ್ರಿಚ್​ ಕ್ಲಾಸೆನ್​, ಟ್ರಿಸ್ಟಾನ್ಸ್​ ಸ್ಟಬ್ಸ್​ ಸೇರಿ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಕ್ವಿಂಟನ್​ ಡಿಕಾಕ್​ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಬರ್ಗರ್​ ಮತ್ತು ಲುಂಗಿ ಎನ್​ಗಿಡಿ ಮೀಸಲು ಆಟಗಾರರಾಗಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ


ಐಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೊಡ್ಜಿ, ಕ್ವಿಂಟನ್ ಡಿ ಕಾಕ್, ಜಾರ್ನ್ ಫಾರ್ಟುಯಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆನ್ರಿಚ್ ನಾರ್ಜೆ, ಕಗಿಸೊ ರಬಾಡಾ, ರಿಯಾನ್ ರಿಕೆಲ್ಟನ್, ಟ್ರೀಸ್ಟಾನ್ ಸ್ಟಬ್ಸ್​, ತಬ್ರೈಜ್ ಶಂಸಿ. ಮೀಸಲು ಆಟಗಾರು: ಲುಂಗಿ ಎನ್​ಗಿಡಿ, ಬರ್ಗರ್.

ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

Exit mobile version