Site icon Vistara News

T20 World Cup | ತಂಡದ ಆಯ್ಕೆ ವಿಚಾರದಲ್ಲಿ ಬಾಬರ್​ ಅಜಮ್‌ ಜಾಣರಲ್ಲ; ವಾಸಿಂ ಅಕ್ರಂ ಆರೋಪ

t20

ಸಿಡ್ನಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಅಜಂ ಅವರು ತಂಡದ ಆಯ್ಕೆ ವಿಚಾರದಲ್ಲಿ ಅಷ್ಟೇನೂ ಜಾಣರಲ್ಲ ಎಂದು ಪಾಕ್​ ಮಾಜಿ ವೇಗಿ ವಾಸಿಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಟಿ20 ವಿಶ್ವ ಕಪ್‌ (T20 World Cup) ಟೂರ್ನಿಯಲ್ಲಿ ಅನುಭವಿ ಶೋಯೆಬ್‌ ಮಲಿಕ್‌ ಅವರಿಗೆ ಅವಕಾಶ ನೀಡದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಾಸಿಂ ಅಕ್ರಂ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಿದೆ. ಶೋಯೆಬ್‌ ಮಲಿಕ್‌ ತಂಡದಲ್ಲಿ ಇಲ್ಲದಿರುವುದು ಅದಕ್ಕೆ ಕಾರಣ. ನಾನು ನಾಯಕನಾಗಿದ್ದರೆ ಅವರನ್ನು ಆಯ್ಕೆ ಮಾಡುತ್ತಿದ್ದೆ.
ವಿಶ್ವ ಕಪ್‌ ಗೆದ್ದು ಕೊಡುವ ಸಾಮರ್ಥ್ಯ ಇರುವ ಆಟಗಾರರನ್ನು ಮೊದಲು ತಂಡಕ್ಕೆ ಆಯ್ಕೆ ಮಾಡಬೇಕು ಹೊರತಾಗಿ ಗೆಳೆಯರಿಗೆ, ಆತ್ಮೀಯರಿಗೆ ತಂಡದಲ್ಲಿ ಸ್ಥಾನ ನೀಡುವುದಲ್ಲ ಎಂದು ಅಕ್ರಂ ಗರಂ ಆಗಿಯೇ ಆಯ್ಕೆ ಸಮಿತಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಒಂದೊಮ್ಮೆ ನಾನು ನಾಯಕನಾಗಿದ್ದರೆ ಪಂದ್ಯವನ್ನು ಗೆಲ್ಲಿಸುವಂಥ ಆಟಗಾರರಿಗೆ ಮೊದಲ ಆದ್ಯತೆ ನೀಡಬೇಕೆಂದು ಆಯ್ಕೆ ಸಮಿತಿ ಮುಖ್ಯಸ್ಥರಿಗೆ ಮನವರಿಕೆ ಮಾಡುತ್ತಿದ್ದೆ. ನನ್ನ ಆಯ್ಕೆಯಂತೆ ತಂಡ ಇರದಿದ್ದರೆ ತಂಡ ಮುನ್ನಡೆಸುವುದಿಲ್ಲ ಎನ್ನುತ್ತಿದ್ದೆ ಎಂದು ಕ್ರೀಡಾವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಾಸಿಂ ಅಕ್ರ ಹೇಳಿದ್ದಾರೆ.

ತಂಡದ ಆಯ್ಕೆ ವಿಚಾರದಲ್ಲಿ ಬಾಬರ್‌ ಜಾಣತನ ತೋರಿಲ್ಲ. ಇದೇನು ಗಲ್ಲಿ ಕ್ರಿಕೆಟ್‌ ಅಲ್ಲ. ವಿಶ್ವ ಕಪ್‌ ನಡೆಯುತ್ತಿರುವುದು ಆಸ್ಟ್ರೇಲಿಯಾದಲ್ಲಿ. ಶಾರ್ಜಾ, ದುಬೈ ಅಥವಾ ಪಾಕಿಸ್ತಾನವಲ್ಲ. ಹೀಗಿರುವಾಗ ತಂಡದಲ್ಲಿ ಒಬ್ಬ ಅನುಭವಿ ಆಟಗಾರರನ್ನಾದರು ಆಯ್ಕೆ ಮಾಡಬೇಕು. ಈ ವಿಚಾರದಲ್ಲಿ ಬಾಬರ್​ ಎಡವಿದ್ದೇ ಸತತ ಸೋಲಿಗೆ ಕಾರಣ ಎಂದು ಅಕ್ರಂ ತಿಳಿಸಿದರು.

ಇದನ್ನೂ ಓದಿ | T20 World Cup | ಪಾಕಿಸ್ತಾನದಿಂದ ಪಿಚ್‌ ಕೂಡ ತೆಗೆದುಕೊಂಡು ಹೋಗಿ, ಬಾಬರ್‌ ಬಳಗದ ಬಗ್ಗೆ ಅಕ್ರಮ್‌ ಕ್ರೋಧ ನುಡಿ

Exit mobile version