T20 ವಿಶ್ವಕಪ್
T20 World Cup | ತಂಡದ ಆಯ್ಕೆ ವಿಚಾರದಲ್ಲಿ ಬಾಬರ್ ಅಜಮ್ ಜಾಣರಲ್ಲ; ವಾಸಿಂ ಅಕ್ರಂ ಆರೋಪ
ತಂಡದ ಆಯ್ಕೆ ವಿಚಾರದಲ್ಲಿ ಬಾಬರ್ ಅಜಂಗೆ ಪರಿಪೂರ್ಣ ಅನುಭವವಿಲ್ಲ ಎಂದು ಪಾಕ್ ಮಾಜಿ ವೇಗಿ ವಾಸಿಂ ಅಕ್ರಂ ಹೇಳಿದ್ದಾರೆ.
ಸಿಡ್ನಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರು ತಂಡದ ಆಯ್ಕೆ ವಿಚಾರದಲ್ಲಿ ಅಷ್ಟೇನೂ ಜಾಣರಲ್ಲ ಎಂದು ಪಾಕ್ ಮಾಜಿ ವೇಗಿ ವಾಸಿಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಟಿ20 ವಿಶ್ವ ಕಪ್ (T20 World Cup) ಟೂರ್ನಿಯಲ್ಲಿ ಅನುಭವಿ ಶೋಯೆಬ್ ಮಲಿಕ್ ಅವರಿಗೆ ಅವಕಾಶ ನೀಡದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಾಸಿಂ ಅಕ್ರಂ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಿದೆ. ಶೋಯೆಬ್ ಮಲಿಕ್ ತಂಡದಲ್ಲಿ ಇಲ್ಲದಿರುವುದು ಅದಕ್ಕೆ ಕಾರಣ. ನಾನು ನಾಯಕನಾಗಿದ್ದರೆ ಅವರನ್ನು ಆಯ್ಕೆ ಮಾಡುತ್ತಿದ್ದೆ.
ವಿಶ್ವ ಕಪ್ ಗೆದ್ದು ಕೊಡುವ ಸಾಮರ್ಥ್ಯ ಇರುವ ಆಟಗಾರರನ್ನು ಮೊದಲು ತಂಡಕ್ಕೆ ಆಯ್ಕೆ ಮಾಡಬೇಕು ಹೊರತಾಗಿ ಗೆಳೆಯರಿಗೆ, ಆತ್ಮೀಯರಿಗೆ ತಂಡದಲ್ಲಿ ಸ್ಥಾನ ನೀಡುವುದಲ್ಲ ಎಂದು ಅಕ್ರಂ ಗರಂ ಆಗಿಯೇ ಆಯ್ಕೆ ಸಮಿತಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಒಂದೊಮ್ಮೆ ನಾನು ನಾಯಕನಾಗಿದ್ದರೆ ಪಂದ್ಯವನ್ನು ಗೆಲ್ಲಿಸುವಂಥ ಆಟಗಾರರಿಗೆ ಮೊದಲ ಆದ್ಯತೆ ನೀಡಬೇಕೆಂದು ಆಯ್ಕೆ ಸಮಿತಿ ಮುಖ್ಯಸ್ಥರಿಗೆ ಮನವರಿಕೆ ಮಾಡುತ್ತಿದ್ದೆ. ನನ್ನ ಆಯ್ಕೆಯಂತೆ ತಂಡ ಇರದಿದ್ದರೆ ತಂಡ ಮುನ್ನಡೆಸುವುದಿಲ್ಲ ಎನ್ನುತ್ತಿದ್ದೆ ಎಂದು ಕ್ರೀಡಾವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಾಸಿಂ ಅಕ್ರ ಹೇಳಿದ್ದಾರೆ.
ತಂಡದ ಆಯ್ಕೆ ವಿಚಾರದಲ್ಲಿ ಬಾಬರ್ ಜಾಣತನ ತೋರಿಲ್ಲ. ಇದೇನು ಗಲ್ಲಿ ಕ್ರಿಕೆಟ್ ಅಲ್ಲ. ವಿಶ್ವ ಕಪ್ ನಡೆಯುತ್ತಿರುವುದು ಆಸ್ಟ್ರೇಲಿಯಾದಲ್ಲಿ. ಶಾರ್ಜಾ, ದುಬೈ ಅಥವಾ ಪಾಕಿಸ್ತಾನವಲ್ಲ. ಹೀಗಿರುವಾಗ ತಂಡದಲ್ಲಿ ಒಬ್ಬ ಅನುಭವಿ ಆಟಗಾರರನ್ನಾದರು ಆಯ್ಕೆ ಮಾಡಬೇಕು. ಈ ವಿಚಾರದಲ್ಲಿ ಬಾಬರ್ ಎಡವಿದ್ದೇ ಸತತ ಸೋಲಿಗೆ ಕಾರಣ ಎಂದು ಅಕ್ರಂ ತಿಳಿಸಿದರು.
ಇದನ್ನೂ ಓದಿ | T20 World Cup | ಪಾಕಿಸ್ತಾನದಿಂದ ಪಿಚ್ ಕೂಡ ತೆಗೆದುಕೊಂಡು ಹೋಗಿ, ಬಾಬರ್ ಬಳಗದ ಬಗ್ಗೆ ಅಕ್ರಮ್ ಕ್ರೋಧ ನುಡಿ
T20 ವಿಶ್ವಕಪ್
Rohit Sharma | ಬಾಂಗ್ಲಾ ಸರಣಿಗೆ ಸಜ್ಜಾಗುತ್ತಿರುವ ರೋಹಿತ್ ಶರ್ಮ; ನೆಟ್ಸ್ನಲ್ಲಿ ಭರ್ಜರಿ ತಾಲೀಮು
ಬಾಂಗ್ಲಾದೇಶ ವಿರುದ್ಧದ ಸರಣಿಗೆ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನೆಟ್ಸ್ನಲ್ಲಿ ಭರ್ಜರಿ ಅಭ್ಯಾಸ ನಡೆಸಿದ್ದಾರೆ.
ಮುಂಬಯಿ: ಮುಂದಿನ ತಿಂಗಳು ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ನಿಟ್ಟಿನಲ್ಲಿ ನಾಯಕ ರೋಹಿತ್ ಶರ್ಮಾ ನೆಟ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ವಿಶ್ರಾಂತಿ ಪಡೆದಿರುವ ರೋಹಿತ್ ಇದೀಗ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿರುವ ಫೋಟೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ರೋಹಿತ್ ಜತೆಗೆ ವಿರಾಟ್ ಕೊಹ್ಲಿ, ಕೆಲ್. ಎಲ್ ರಾಹುಲ್ ಸೇರಿ ಪ್ರಮುಖ ಹಿರಿಯ ಆಟಗಾರರಿಗೆ ಕಿವೀಸ್ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಆದರೆ ಈ ಎಲ್ಲ ಆಟಗಾರರು ಬಾಂಗ್ಲಾ ವಿರುದ್ಧದ ಸರಣಿಗೆ ತಂಡ ಸೇರಿಕೊಳ್ಳಲಿದ್ದಾರೆ.
ವಿರಾಟ್ ಕೊಹ್ಲಿಯೂ ಬಾಂಗ್ಲಾ ಸರಣಿಗೆ ಮುನ್ನ ಜಿಮ್ನಲ್ಲಿ ವರ್ಕ್ಔಟ್ ಮಾಡಿ ಫಿಟ್ನೆಸ್ ಕಾಯ್ದುಕೊಳ್ಳುತ್ತಿರುವ ವಿಡಿಯೊ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ನಾಯಕ ರೋಹಿತ್ ಶರ್ಮಾ ಕೂಡ ಪ್ಯಾಡ್ ಕಟ್ಟಿ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿದ್ದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೆಟ್ ಒಳಗಡೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಸದ್ಯ ಫಾರ್ಮ್ನಲ್ಲಿ ಇಲ್ಲದ ರೋಹಿತ್ಗೆ ಬಾಂಗ್ಲಾ ಸರಣಿ ಪ್ರಮುಖವಾಗಿದೆ.
ಇದನ್ನೂ ಓದಿ | Virat Kohli | ವಿಶ್ರಾಂತಿಯ ಅವಧಿಯನ್ನು ಚಾರಿಟಿ ಕೆಲಸಕ್ಕೆ ಮೀಸಲಿಟ್ಟ ವಿರಾಟ್ ಕೊಹ್ಲಿ
Latest
Fifa World Cup | ಫುಟ್ಬಾಲ್ ವಿಶ್ವ ಕಪ್ ಪಂದ್ಯಗಳು ನಡೆಯುವ ಸ್ಟೇಡಿಯಮ್‌ಗಳು ಯಾವುದೆಲ್ಲ ಗೊತ್ತೇ?
ಕತಾರ್ನಲ್ಲಿ ನಡೆಯಲಿರುವ ಫಿಫಾ ವಿಶ್ವ ಕಪ್ ಫುಟ್ಬಾಲ್ ಪಂದ್ಯಗಳ 8 ವರ್ಣರಂಜಿತ ಕ್ರೀಡಾಂಗಣಗಳ ಸಂಪೂರ್ಣ ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.
ದೋಹಾ: ಕತಾರ್ನಲ್ಲಿ ನಡೆಯಲಿರುವ ಫಿಫಾ ವಿಶ್ವ ಕಪ್(Fifa World Cup) ಕಾಲ್ಚೆಂಡಿನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಈ ಫುಟ್ಬಾಲ್ ಹಬ್ಬ ಆರಂಭವಾಗಲಿದೆ. ಇದೀಗ ಈ ಕಾಲ್ಚೆಂಡಿನ ವಿಶ್ವ ಸಮರಕ್ಕೆ ಆತಿಥ್ಯ ವಹಿಸಿದ ವರ್ಣರಂಜಿತ 8 ಸ್ಟೇಡಿಯಂಗಳ ಪರಿಚಯ ಇಲ್ಲಿದೆ.
ಲುಸೈಲ್ ಕ್ರೀಡಾಂಗಣ
ಕತಾರ್ ಫಿಫಾ ವಿಶ್ವ ಕಪ್ನ 8 ಕ್ರೀಡಾಂಗಣದಲ್ಲಿ ಲುಸೈಲ್ ಅತಿದೊಡ್ಡದು ಎಂಬ ಹೆಗ್ಗಳಿಕೆ ಗಳಿಸಿದೆ. 80,000 ಆಸನ ಸಾಮರ್ಥ್ಯ ಹೊಂದಿದ್ದು, ಫೈನಲ್ ಪಂದ್ಯವೂ ಇದೇ ಮೈದಾನದಲ್ಲಿ ನಡೆಯಲಿದೆ. ಈ ಸ್ಟೇಡಿಯಮ್ ಅರಬ್ ದೇಶದಲ್ಲಿ ಜಯಪ್ರೀಯವಾಗಿರುವ ಬಟ್ಟಲಿನ ಆಕಾರ ಹೊಂದಿದೆ. ಪಂದ್ಯದ ವೇಳೆ ಬಿಸಿ ಗಾಳಿಯನ್ನು ತೆಡೆಯಲು ಪಾಲಿಟ್ರೆಟಾ ಫ್ಲೋರೊಎಥಲಿನ್ ಎಂಬ ರಾಸಾಯನಿಕವನ್ನು ಬಳಸಿ ಆಟಗಾರಿಗೆ ಬಿಸಿ ತಟ್ಟದಂತೆ ಮಾಡಲಾಗಿದೆ. ಈ ಮೈದಾನದಲ್ಲಿ ಒಟ್ಟು ಹತ್ತು ಪಂದ್ಯಗಳು ನಡೆಯಲಿವೆ.
ಅಹಮದ್ ಬಿನ್ ಅಲಿ ಸ್ಟೇಡಿಯಮ್, ಅಲ್ ವಕ್ರಾ
ಕತಾರ್ನ ನೂತನ ಸ್ಟೇಡಿಯಮ್ ಇದಾಗಿದ್ದು. 2015ರಲ್ಲಿ ನಿರ್ಮಾಣವಾಗಿದ್ದ ಕ್ರೀಡಾಂಗಣ ನೆಲಸಮ ಮಾಡಿ ಹೊಸ ಕ್ರೀಡಾಂಗಣವನ್ನು ಕಟ್ಟಲಾಗಿದೆ. ಇದು ಓಪನ್ ಕ್ರೀಡಾಂಗಣವಾಗಿದ್ದು ಹವಾ ನಿಯಂತ್ರಿತ ವ್ಯವಸ್ಥೆಯನ್ನೂ ಒಳಗೊಂಡಿದೆ. ಅದರಂತೆ ಪಂದ್ಯಗಳ ವೇಳೆ 26 ಡಿಗ್ರಿ ತಾಪಮಾನ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಮರುಭೂಮಿಯ ತುತ್ತ ತುದಿಯಲ್ಲಿರುವ ಈ ಮೈದಾನದಲ್ಲಿ ಒಟ್ಟು ಏಳು ಪಂದ್ಯಗಳು ನಡೆಯಲಿದ್ದು, 44,740 ಆಸನ ಸಾಮರ್ಥ್ಯ ಹೊಂದಿದೆ.
ಅಲ್ ಜನೌಬ್ ಸ್ಟೇಡಿಯಮ್, ಅಲ್ ವಕ್ರಾ
ಸಾಂಪ್ರದಾಯಿಕ ಧೌ ದೋಣಿಗಳನ್ನು ಹೋಲುವ ಈ ಕ್ರೀಡಾಂಗಣದಲ್ಲಿ ಏಳು ಪಂದ್ಯಗಳು ನಡೆಯಲಿವೆ. ಏಕಕಾಲಕ್ಕೆ 40,000 ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಸಾಧ್ಯವಿದೆ. ಇನ್ನು ಈ ಮೈದಾನದಲ್ಲಿಯೂ ಹವಾನಿಯಂತ್ರಿತ ವ್ಯವಸ್ಥೆ ಇರಲಿದೆ. ಇಲ್ಲಿ ವಿಶ್ವ ಕಪ್ ಪಂದ್ಯ ಮುಕ್ತಾಯದ ಬಳಿಕ ಆಸನಗಳ ಸಾಮರ್ಥ್ಯವನ್ನು 20,000ಕ್ಕೆ ಇಳಿಕೆ ಮಾಡಲಾಗುವುದು ಎಂದು ಫಿಫಾ ಹೇಳಿದೆ.
ಎಜುಕೇಶನ್ ಸಿಟಿ ಕ್ರೀಡಾಂಗಣ, ಅಲ್ ರಯ್ಯನ್
ಕ್ರೀಡಾಂಗಣದ ಸುತ್ತ ಮುತ್ತ ವಿಶ್ವವಿದ್ಯಾಲಯಗಳು ಇರುವ ಕಾರಣದಿಂದ ಈ ಸ್ಟೇಡಿಯಂಗೆ ಎಜುಕೇಶನ್ ಸಿಟಿ ಸ್ಟೇಡಿಯಮ್ ಎಂದು ಹೆಸರಿಡಲಾಗಿದೆ. ತ್ರಿಕೋನಾಕೃತಿ ಈ ಕ್ರೀಡಾಂಗಣ ವಜ್ರದ ರೀತಿ ಕಾಣುತ್ತದೆ. ಜಾಗತಿಕ ಸುಸ್ಥಿರತೆಯ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಫೈವ್ಸ್ಟಾರ್ ರೇಟಿಂಗ್ ಹೊಂದಿದೆ. ಒಟ್ಟು 8 ಪಂದ್ಯಗಳು ನಡೆಯಲಿದ್ದು, 40,000 ಆಸನ ಸಾಮರ್ಥ್ಯ ಹೊಂದಿದೆ.
ಖಲಿಫಾ ಮೈದಾನ
ಕತಾರ್ನ ಅತ್ಯಂತ ಹಳೆಯ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಕ್ರೀಡಾಂಗಣ ಇದಾಗಿದ್ದು ಈ ಬಾರಿ 8 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಅದರಂತೆ ಇಲ್ಲಿ ಏಕಕಾಲಕ್ಕೆ 45,416 ಮಂದಿಗೆ ಪಂದ್ಯ ವೀಕ್ಷಿಸಬಹುದಾಗಿದೆ. 2006ರ ಏಷ್ಯನ್ ಗೇಮ್ಸ್ ಸೇರಿ ಹಲವು ಐತಿಹಾಸಿಕ ಕ್ರೀಡಾಕೂಟಗಳಿಗೆ ಈ ಸ್ಟೇಡಿಯಮ್ ಸಾಕ್ಷಿಯಾಗಿದೆ.
ಅಲ್ ಥುಮಾಮ ಮೈದಾನ, ದೋಹಾ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಈ ಕ್ರೀಡಾಂಗಣವನ್ನು ಫಿಫಾ ವಿಶ್ವ ಕಪ್ ಟೂರ್ನಿಗೋಸ್ಕರವೇ ನಿರ್ಮಾಣ ಮಾಡಲಾಗಿದೆ. ವಿಶ್ವ ಕಪ್ ಬಳಿಕ ಇಲ್ಲಿನ ಆಸನ ಸಾಮರ್ಥ್ಯವನ್ನು 40,000ರಿಂದ 20,000ಕ್ಕೆ ಇಳಿಸಿ ಹೆಚ್ಚುವರಿ ಆಸನಗಳನ್ನು ಬಡ ರಾಷ್ಟ್ರಗಳಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಖಾಲಿಯಾಗುವ ಜಾಗದಲ್ಲಿ ಐಷಾರಾಮಿ ಹೋಟೆಲ್ ನಿರ್ಮಾಣ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಅರಬ್ ಪ್ರಾಂತ್ಯದಲ್ಲಿ ಬಳಸುವ ಸಾಂಪ್ರದಾಯಿಯ “ಗಹ್ಫಿಯಾ” ಟೋಪಿಯ ಆಕಾರದಲ್ಲಿರುವ ಈ ಮೈದಾನದಲ್ಲಿ ಒಟ್ಟು 8 ಪಂದ್ಯಗಳು ನಡೆಯಲಿವೆ.
ಅಲ್ ಬೇತ್ ಸ್ಟೇಡಿಯಂ, ಅಲ್ ಖೋರ್
ದೋಹಾದ ರಾಜಧಾನಿಯಿಂದ 35 ಕಿ.ಮೀ ದೂರದಲ್ಲಿರುವ ಈ ಕ್ರೀಡಾಂಗಣದಲ್ಲಿ ವಿಶ್ವ ಕಪ್ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಕ್ರೀಡಾಂಗಣ ಕತಾರ್ನಲ್ಲಿ ವಾಸಿಸುವ ಅಲೆಮಾರಿ ಜನರು ಬಳಸುವ ಟೆಂಟ್ಗಳ ಆಕಾರದಲ್ಲಿದೆ. ಒಟ್ಟು 9 ಪಂದ್ಯಗಳು ಇಲ್ಲಿ ನಡೆಯಲಿದ್ದು, 60,000 ಆಸನ ಸಾಮರ್ಥ್ಯ ಹೊಂದಿದೆ.
ಸ್ಟೇಡಿಯಂ 974
ವಿಶ್ವ ಕಪ್ ಪಂದ್ಯಗಳ ಆತಿಥ್ಯಕ್ಕೆ ಕತಾರ್ ಹೊಸದಾಗಿ ಕ್ರೀಡಾಂಗಣಗಳ ನಿರ್ಮಾಣಕ್ಕೆ ಮುಂದಾದಾಗ
ಸಾಮಗ್ರಿಗಳನ್ನು ಹೊತ್ತು ತಂಡ ಹಡಗುಗಳ ಕಂಟೈನರ್ಗಳನ್ನೇ ಬಳಸಿ ಸ್ಟೇಡಿಯಮ್ ಒಂದನ್ನು ಕಟ್ಟುವ ಯೋಜನೆಯನ್ನು ಆಯೋಜನಾ ಸಮಿತಿ ರೂಪಿಸಿತ್ತು. ಅದರಂತೆ 974 ಕಂಟೈನರ್ಗಳಿಂದ ನಿರ್ಮಾಣವಾದ ಇದಕ್ಕೆ ಸ್ಟೇಡಿಯಂ 947 ಎಂದು ಹೆಸರಿಡಲಾಗಿದೆ. ಇನ್ನೊಂದು ವಿಶೇಷವೆಂದರೆ 947 ಎನ್ನುವ ಸಂಖ್ಯೆ ಕತಾರ್ ದೇಶದ ಅಂತಾರಾಷ್ಟ್ರೀಯ ಡಯಲಿಂಗ್ ಕೋಡ್ ಕೂಡ ಆಗಿದೆ. ಇಲ್ಲಿ ಒಟ್ಟು 7 ಪಂದ್ಯಗಳು ನಡೆಯಲಿದ್ದು, 40,000 ಆಸನ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ | Fifa World Cup 2022 | ಗೋಲ್ಡನ್ ಬೂಟ್ ಪ್ರಶಸ್ತಿ ವಿಜೇತ ಟಾಪ್ 5 ಆಟಗಾರರು
Latest
BCCI: ಚೇತನ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಯ್ಕೆ ಸಮಿತಿಗೆ ಗೇಟ್ಪಾಸ್ ನೀಡಿದ ಬಿಸಿಸಿಐ!
ಟಿ20 ವಿಶ್ವ ಕಪ್ನಲ್ಲಿ ಭಾರತ ತಂಡ ವೈಫಲ್ಯ ಅನುಭವಿಸಿದ ಕಾರಣದಿಂದ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ಶುಕ್ರವಾರ ಬಿಸಿಸಿಐ ವಜಾಗೊಳಿಸಿದೆ.
ನವದೆಹಲಿ: ದುಬೈ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಎರಡು ಐಸಿಸಿ ಟಿ20 ವಿಶ್ವ ಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತ ತಂಡ ಟ್ರೋಫಿ ಗೆಲ್ಲಲು ವಿಫಲವಾದ ಬೆನ್ನಲ್ಲೇ ಕಠಿಣ ನಿರ್ಧಾರ ತೆಗೆದುಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಜಿ ವೇಗಿ ಚೇತನ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಯ್ಕೆ ಸಮಿತಿಯನ್ನು ವಜಾಗೊಳಿಸಿದೆ. ಅದರಂತೆ ಬಿಸಿಸಿಐ ಈಗಾಗಗಲೇ ಹೊಸ ಆಯ್ಕೆ ಸಮಿತಿ ರಚಿಸುವ ಸಲುವಾಗಿ ಖಾಲಿ ಇರುವ 5 ಹುದ್ದೆಗಳಿಗೆ ಅರ್ಜಿ ಕೂಡ ಆಹ್ವಾನಿಸಿದೆ.
ಚೇತನ್ ಶರ್ಮಾ ಸಾರಥ್ಯದ ಆಯ್ಕೆ ಸಮಿತಿಯಲ್ಲಿ ಸುನಿಲ್ ಜೋಶಿ, ಹವಿಂದರ್ ಸಿಂಗ್ ಮತ್ತು ದೇಬಾಶಿಶ್ ಮೊಹಾಂತಿ ಅವರಂತಹ ಮಾಜಿ ಆಟಗಾರರು ಇದ್ದರು. ಇದೀಗ ಹೊಸ ಆಯ್ಕೆ ಸಮಿತಿಗೆ ಸೇರಬಯಸುವ ಆಸಕ್ತರು ನವೆಂಬರ್ 28ರ ಒಳಗೆ ಅರ್ಜಿ ಸಲ್ಲಿಸಬೇಕಾಗಿದೆ.
ಚೇತನ್ ಶರ್ಮಾ ಆಯ್ಕೆ ಸಮಿತಿಯ ಅವಧಿಯಲ್ಲಿ ಆಡಲಾದ 2021ರ ಐಸಿಸಿ ಟಿ20 ಕ್ರಿಕೆಟ್ ವಿಶ್ವ ಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೂಪರ್-12 ಹಂತದಲ್ಲೇ ಮುಗ್ಗರಿಸಿತ್ತು. ಇತ್ತೀಚೆಗೆ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ 2022ರ ಸಾಲಿನ ಟಿ20 ವಿಶ್ವ ಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿಯೂ ಹೀನಾಯವಾಗಿ ಸೋತು ನಿರಾಸೆ ಮೂಡಿಸಿತ್ತು. ಜತೆಗೆ ಇವರ ಆಯ್ಕೆ ಸಮಿತಿಯಲ್ಲಿ ಭಾರತ ತಂಡ ಒಂದೂ ಐಸಿಸಿ ಟ್ರೋಫಿಯನ್ನು ಗೆಲ್ಲವಲ್ಲಿ ಯಶಸ್ವಿಯಾಗಿರಲಿಲ್ಲ. ಇದರಿಂದ ಬಿಸಿಸಿಐ ಈ ಆಯ್ಕೆ ಸಮಿತಿಗೆ ಗೇಟ್ಪಾಸ್ ನೀಡಿದೆ.
ಚೇತನ್ ಶರ್ಮಾ ಭಾರತ ಪರ ಒಟ್ಟು 23 ಟೆಸ್ಟ್ ಮತ್ತು 65 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ನಲ್ಲಿ (61), ಏಕದಿನದಲ್ಲಿ(67) ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ | IND VS NZ | ಕಿವೀಸ್ ವಿರುದ್ಧದ ಮೊದಲ ಟಿ20 ಮಳೆಯಿಂದ ರದ್ದು; ಭಾರತದ ಯುವ ಆಟಗಾರರಿಗೆ ನಿರಾಸೆ
Latest
T20 World Cup | ಟಿ20 ವಿಶ್ವ ಕಪ್ ಮೌಲ್ಯಯುತ ತಂಡದಲ್ಲಿ ಸ್ಥಾನ ಪಡೆದ ಕೊಹ್ಲಿ, ಸೂರ್ಯಕುಮಾರ್
ಟೀಮ್ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ವಿಶ್ವ ಕಪ್ ಮೌಲ್ಯಯುತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮೆಲ್ಬೋರ್ನ್: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ವಿಶ್ವ ಕಪ್(T20 World Cup) 2022ರ ಆವೃತ್ತಿಗೆ ತೆರೆ ಬಿದ್ದಿದೆ. ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಪಂದ್ಯಾವಳಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ, ಟಿ20 ವಿಶ್ವ ಕಪ್ 2022ರ ಮೌಲ್ಯಯುತ ತಂಡವನ್ನು ಹೆಸರಿಸಿದ್ದು ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಚಾಂಪಿಯನ್ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಈ ತಂಡಕ್ಕೆ ನಾಯಕನಾಗಿದ್ದಾರೆ.
ವಿರಾಟ್ ಕೊಹ್ಲಿ ಅವರು ಈ ಬಾರಿಯ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ನಾಲ್ಕು ಅರ್ಧಶತಕ ಸೇರಿ 98.66ರ ಸರಾಸರಿಯಲ್ಲಿ 296 ರನ್ ಗಳಿಸಿ ಕೂಟದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾನಾಗಿ ಹೊರಹೊಮ್ಮಿದ್ದರು. ಜತೆಗೆ ಸೂರ್ಯ ಕುಮಾರ್ ಯಾದವ್ 239 ರನ್ ಗಳಿಸಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಉಭಯ ಆಟಗಾರರ ಪ್ರದರ್ಶನಕ್ಕೆ ಐಸಿಸಿ, ಮೌಲ್ಯಯುತ ತಂಡದಲ್ಲಿ ಸ್ಥಾನ ನೀಡಿದೆ. ಅಚ್ಚರಿ ಎಂದರೆ ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ಕೂಡ ಈ ತಂಡದ ಭಾಗವಾಗಿದ್ದಾರೆ. ಉಳಿದಂತೆ ಭಾರತ ತಂಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.
ಐಸಿಸಿ ಮೌಲ್ಯಯುತ ತಂಡದ ಪಟ್ಟಿ
ಜೋಸ್ ಬಟ್ಲರ್(ನಾಯಕ), ಅಲೆಕ್ಸ್ ಹೇಲ್ಸ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಗ್ಲೆನ್ ಫಿಲಿಪ್ಸ್, ಸಿಕಂದರ್ ರಾಜಾ, ಶಾದಾಬ್ ಖಾನ್, ಸ್ಯಾಮ್ ಕರನ್, ಅನ್ರಿಚ್ ನೋರ್ಜೆ, ಮಾರ್ಕ್ ವುಡ್, ಶಾಹಿನ್ ಅಫ್ರೀದಿ. 12ನೇ ಆಟಗಾರ: ಹಾರ್ದಿಕ್ ಪಾಂಡ್ಯ
-
ಕರ್ನಾಟಕ18 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ16 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ9 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ಕರ್ನಾಟಕ13 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ದೇಶ14 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ17 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಪರಿಸರ10 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ
-
ಕರ್ನಾಟಕ16 hours ago
ಕಲಬುರಗಿಯಲ್ಲಿ ಚಂಡಿಕಾ ಹೋಮದ ಬೆಂಕಿಯಲ್ಲಿ ಕಾಣಿಸಿಕೊಂಡ ದುರ್ಗಾ ದೇವಿ!; ಇಲ್ಲಿದೆ ನೋಡಿ ಫೋಟೊ