ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20s ವಿಶ್ವ ಕಪ್(T20 World Cup) ಟೂರ್ನಿ ಮುಕ್ತಾಯದ ಹಂತಕ್ಕೆ ತಲುಪಿದೆ. ಅದರಂತೆ ಮುಂದಿನ ಭಾನುವಾರ(ನವೆಂಬರ್ 13) ಫೈನಲ್ ಪಂದ್ಯ ನಡೆಯಲಿದೆ. ಇದೀಗ ಫೈನಲ್ಗೂ ಮುನ್ನ ಬೆಂಗಳೂರು ಪೊಲೀಸರು ಕ್ರಿಕೆಟ್ ಪ್ರಿಯರಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಬೆಂಗಳೂರು ನಗರ ಪೊಲೀಸ್ ಇಲಾಖೆ, “ವಿಶ್ವ ಕಪ್ ಫೈನಲ್ ಇರುವುದು ಮುಂದಿನ ಭಾನುವಾರ. ಆದ್ದರಿಂದ ಇಂದಿನಿಂದಲೆ ಮದ್ಯಪಾನ ಮಾಡಿ ವಾಹನ ಚಲಾಯಿಸದಿರಿ. ಹಾಗಂತ ಫೈನಲ್ ದಿನ ಮದ್ಯಪಾನ ಮಾಡಿ ವಾಹನ ಚಲಾಯಿಸಬಹುದು ಎಂದು ಅರ್ಥವಲ್ಲ. ಪ್ರತಿ ದಿನವೂ ಕುಡಿದು ವಾಹನ ಚಲಾಯಿಸದಿರಿ” ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಇದೀಗ ಈ ಟ್ವೀಟ್ ಎಲ್ಲಡೆ ವೈರಲ್ ಆಗಿದೆ.
ಅಸಲಿಗೆ ಈ ಟ್ವೀಟ್ ಎರಡು ಅರ್ಥವನ್ನು ನೀಡುತ್ತದೆ. ಒಂದು ಆಯಾಮದಲ್ಲಿ ನೋಡುವುದಾದರೆ ಈ ಟ್ವೀಟ್ ಅಘಘಾತವನ್ನು ತಡೆಗಟ್ಟುವ ನಾಗರಿಕ ಜಾಗೃತಿಯಾದರೆ ಇನ್ನೊಂದೆಡೆ ಪಾಕಿಸ್ತಾನ ತಂಡ ಸೆಮಿಫೈನಲ್ಗೇರಿದೆ. ಈ ನಿಟ್ಟಿನಲ್ಲಿ ಫೈನಲ್ ನಡೆಯುವ ಮುನ್ನವೇ ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ ಎಂದು ಈಗಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದ್ದರಿಂದ ಎಲ್ಲ ಸಂಭ್ರಮಾಚರಣೆಯನ್ನು ಒಂದೇ ದಿನ ಮುಗಿಸದೆ ಮುಂದಿನ ಭಾನುವಾರಕ್ಕೂ ಮೀಸಲಿಡಿ ಎನ್ನುವ ಅರ್ಧದಲ್ಲಿಯೂ ಈ ಟ್ವೀಟ್ ಗಮನ ಸೆಳೆದಿದೆ.
ಇದನ್ನೂ ಓದಿ | IND VS ZIM | ಜಿಂಬಾಬ್ವೆ ವಿರುದ್ಧ 71 ರನ್ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ