Site icon Vistara News

T20 World Cup 2024 : ಭಾರತ ವಿರುದ್ಧ ಚೆಂಡು ವಿರೂಪದ ಸುಳ್ಳು ಆರೋಪ ಮಾಡಿದ ಪಾಕ್​ ಮಾಜಿ ನಾಯಕ ಇಂಜಮಾಮ್ ಉಲ್ ಹಕ್​

T20 World Cup

ನವದೆಹಲಿ: ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಭಾರತ ಕ್ರಿಕೆಟ್​ ತಂಡದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ, 2024 ರ ಟಿ 20 ವಿಶ್ವಕಪ್​ನ (T20 World Cup 2024) ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತದ ವೇಗದ ಬೌಲರ್​ ಅರ್ಶ್​ದೀಪ್​ ಸಿಂಗ್ ರಿವರ್ಸ್ ಸ್ವಿಂಗ್​ ಮಾಡಲು ಚೆಂಡು ವಿರೂಪಗೊಳಿಸಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದು ಭಾರತದ ಕ್ರಿಕೆಟ್​ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದೆ. ಮಾಜಿ ಆಟಗಾರ ಅದರಲ್ಲೂ ನಾಯಕ ಈ ರೀತಿ ಹೇಳಿಕೆ ನೀಡಿರುವುದಕ್ಕೆ ಬಗೆಬಗೆಯಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ನಾಯಕ ವಿಶ್ವ ಕಪ್​​ ಸೂಪರ್ 8 ಗ್ರೂಪ್ 1 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವಿನ ಬಗ್ಗೆ ಮಾತನಾಡಿದ್ದರು. ಈ ವೇಳೆ ಪಾಕಿಸ್ತಾನದ ಮಾಜಿ ನಾಯಕ, ಭಾರತದ 24 ರನ್​ಗಳ ಗೆಲುವಿನಲ್ಲಿ ಮೂರು ವಿಕೆಟ್ ಪಡೆದ ಮಿಂಚಿದ ಅರ್ಶ್​ದೀಪ್​ ಸಿಂಗ್ ಅವರನ್ನು ಗುರಿಯಾಗಿಸಿ ಪರೋಕ್ಷ ಆರೋಪ ಮಾಡಿದ್ದಾರೆ.

25 ವರ್ಷದ ವೇಗಿ 15 ಓವರ್​ನಲ್ಲಿಯೇ ಚೆಂಡನ್ನು ರಿವರ್ಸ್ ಮಾಡಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ ಅವರು, ಇಂಥ ವಿಷಯಗಳನ್ನು ಗುರುತಿಸಲು ಅಂಪೈರ್​ಗಳು ಕಣ್ಣು ತೆರೆದು ನೋಡಬೇಕು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ಅರ್ಶ್​ದೀಪ್​ ಸಿಂಗ್ 15ನೇ ಓವರ್ ಎಸೆಯುವಾಗ ಚೆಂಡು ರಿವರ್ಸ್ ಆಗುತ್ತಿತ್ತು. ಹೊಸ ಚೆಂಡಿನೊಂದಿಗೆ (ರಿವರ್ಸ್ ಸ್ವಿಂಗ್​​ ಸಾಧ್ಯವಿಲ್ಲ) ಇದು ಪೂರ್ವಯೋಜಿತವೇ? ಇದರರ್ಥ 12 ಅಥವಾ 13ನೇ ಓವರ್ ವೇಳೆಗೆ ಚೆಂಡು ರಿವರ್ಸ್ ಸ್ವಿಂಗ್​ಗೆ ಹೇಗೆ ಸಿದ್ಧಗೊಂಡಿತು. ಅಂಪೈರ್​ಗಳು ಈ ವಿಷಯಗಳನ್ನು ಪತ್ತೆ ಕಣ್ಣು ತೆರೆದಿರಬೇಕು”ಎಂದು ಇಂಜಮಾಮ್ ಹೇಳಿಕೆ ನೀಡಿದ್ದಾರೆ.

ಇಂಜಮಾಮ್ ಅವರ ಮಾಜಿ ಸಹ ಆಟಗಾರ ಸಲೀಮ್ ಮಲಿಕ್ ಕೂಡ ಇದಕ್ಕೆ ಧ್ವನಿ ಸೇರಿಸಿದ್ದಾರೆ. ಕೆಲವು ತಂಡಗಳ ವಿಷಯಕ್ಕೆ ಬಂದಾಗ ಎಲ್ಲರ ಕಣ್ಣುಗಳು ಮುಚ್ಚಿರುತ್ತವೆ ಎಂದು ಟೀಕಿಸಿದ್ದಾರೆ. ಇವರಿಬ್ಬರ ಅನಗತ್ಯ ಅಧಿಕ ಪ್ರಸಂಗ ವಿವಾದ ಉಂಟು ಮಾಡುವುದು ಖಚಿತ.

“ಇಂಜಿ, ನಾನು ಯಾವಾಗಲೂ ಇದನ್ನು ಹೇಳುತ್ತೇನೆ, ಕೆಲವು ತಂಡಗಳ ವಿಷಯಕ್ಕೆ ಬಂದಾಗ ಕಣ್ಣುಗಳನ್ನು ಮುಚ್ಚಿರುತ್ತವೆ. ಭಾರತವು ಆ ತಂಡಗಳಲ್ಲಿ ಒಂದು. ಜಿಂಬಾಬ್ವೆಯಲ್ಲಿ ವಾಸಿಮ್ (ಅಕ್ರಮ್) ಬೌಲಿಂಗ್ ಮಾಡುವಾಗ, ಅವರು ಚೆಂಡನ್ನು ಒದ್ದೆ ಮಾಡಿದ್ದರು, ನಾವೆಲ್ಲರೂ ಆಶ್ಚರ್ಯಚಕಿತರಾಗಿದ್ದೆವು. ಒಂದು ಬದಿ ಹೇಗೆ ಒದ್ದೆಯಾಗಿರುವ ಬಗ್ಗೆ ನಾನು ಹೋಗಿ ದೂರು ನೀಡಿದಾಗ ನನಗೇ ಭಾರಿ ದಂಡ ವಿಧಿಸಲಾಯಿತು” ಎಂದು ಮಲಿಕ್ ಹೇಳಿದರು.

ಇದನ್ನೂ ಓದಿ: T20 World Cup 2024 : ಅಫಘಾನಿಸ್ತಾನವನ್ನು 9 ವಿಕೆಟ್​ಗಳಿಂದ ಸೋಲಿಸಿ ಫೈನಲ್​ಗೇರಿದ ದಕ್ಷಿಣ ಆಫ್ರಿಕಾ ತಂಡ

ಪಾಕಿಸ್ತಾನದ ಬೌಲರ್ ಇಷ್ಟು ಬೇಗ ಚೆಂಡನ್ನು ರಿವರ್ಸ್​ ಸ್ವಿಂಗ್​ ಮಾಡಿದ್ದರೆ ಸಾಕಷ್ಟು ಸದ್ದು ಮಾಡಬಹುದಿತ್ತು ಎಂದು ಇಂಜಮಾಮ್ ಹೇಳಿಕೆ ನೀಡಿದ್ದಾರೆ. .

“ಪಾಕಿಸ್ತಾನದ ಬೌಲರ್​ಗಳು (ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಿದ್ದರೆ) ಆಗಿದ್ದರೆ ಇದು ದೊಡ್ಡ ಸಮಸ್ಯೆಯಾಗುತ್ತಿತ್ತು ರಿವರ್ಸ್ ಸ್ವಿಂಗ್ ನಮಗೆ ಚೆನ್ನಾಗಿ ತಿಳಿದಿದೆ ಮತ್ತು ಅರ್ಶ್​ದೀಪ್​ 15 ನೇ ಓವರ್​ನಲ್ಲಿ ಬಂದು ಚೆಂಡಿಗೆ ಹಿಮ್ಮುಖ ಚಲನೆ ನೀಡಿದ್ದಾರೆ. ಇದರ ಹಿಂದೆ ಕೆಲವು ಕೈಗಳು ಕೆಲಸಗಳನ್ನು ಮಾಡಿವೆ ಎಂದರ್ಥ, “ಎಂದು ಅವರು ಹೇಳಿದರು.

ಜಸಪ್ರಿತ್ ಬುಮ್ರಾ ಅವರಿಗೆ ತಮ್ಮ ಚಲನೆ ಮೂಲಕ ರಿವರ್ಸ್​ ಸ್ವಿಂಗ್ ಮಾಡಬಹುದು. ಆದರೆ ಇನ್ನುಳಿದ ವೇಗಿಗಳಿಗೆ ಪಿಚ್ ಅನುಕೂಲಕರವಾಗಿರಬೇಕು. ಜತೆಗೆ ಚೆಂಡನ್ನು ಸಿದ್ಧಗೊಳಿಸಬೇಕು. ಅರ್ಶ್​ ದೀಪ್​ ಸಿಂಗ್​ ಇಂಥ ಪರಿಸ್ಥಿತಿಗಳನ್ನು ಬಳಸಿಕೊಂಡಿದ್ದಾರೆ. ಅವುಗಳ ಬಗ್ಗೆ ಗಮನ ಇಡಬೇಕಾಗುತ್ತದೆ ಎಂದು ಹೇಳಿದರು.

Exit mobile version