ಬೆಂಗಳೂರು: ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿಯಾಗಿ ಆತಿಥ್ಯ ವಹಿಸಲಿರುವ ಮುಂಬರುವ ಟಿ 20 ವಿಶ್ವಕಪ್ 2024 ಗಾಗಿ ಅಭ್ಯಾಸ ಪಂದ್ಯಗಳು ಆರಂಭಗೊಂಡಿವೆ. ಈ ಮೆಗಾ-ಈವೆಂಟ್ ಜೂನ್ 1 ರಂದು ಪ್ರಾರಂಭವಾಗಲಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾಗತಿಕ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಏತನ್ಮಧ್ಯೆ ಟೂರ್ನಿಗೆ ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ ಗ್ರೂಪ್) ಬೆದರಿಕೆ ಒಡ್ಡಿದೆ. ಉಗ್ರರು ಪ್ರಸಾರ ಮಾಡಿದ ಆಘಾತಕಾರಿ ಸಂದೇಶದಿಂದ ಕ್ರಿಕೆಟ್ ಜಗತ್ತು ತಲ್ಲಣಗೊಂಡಿದೆ. ಭಯೋತ್ಪಾದಕ ಬೆದರಿಕೆಯು ಈವೆಂಟ್ಗೆ ಸಂಬಂಧಿಸಿದ ಸಂಘಟಕರು ಮತ್ತು ಸದಸ್ಯರ ಮೇಲೆ ಮಾತ್ರವಲ್ಲದೆ, ಪಂದ್ಯಾವಳಿಗೆ ಸಜ್ಜಾಗುತ್ತಿರುವ ಕ್ರಿಕೆಟ್ ಉತ್ಸಾಹಿಗಳು ಮತ್ತು ಬೆಂಬಲಿಗರಲ್ಲಿ ಆತಂಕ ಉಂಟು ಮಾಡಿದೆ. ವಆಯಾ ರಾಷ್ಟ್ರಗಳನ್ನು ಹಲವಾರು ಸ್ಥಳಗಳಲ್ಲಿ ಹುರಿದುಂಬಿಸಲು ಈಗಾಗಲೇ ಮನಸ್ಸು ಮಾಡಿದವರ ಅಭಿಮಾನಿಗಳ ಮೇಲೆ ಆತಂಕದ ಛಾಯೆಯನ್ನು ಮೂಡಿಸಿದೆ.
ವರದಿಯ ಪ್ರಕಾರ, ಐಸಿಸ್ ಅನುಯಾಯಿಗಳು Matrix.org ನೆಟ್ವರ್ಕ್ನಲ್ಲಿ ಆನ್ಲೈನ್ ಚಾಟ್ ರೂಮ್ಗಳನ್ನು ಬಳಸುತ್ತಿರುವುದು ಕಂಡುಬಂದಿದೆ, ಅಲ್ಲಿ ಅವರು “ನಿಮ್ಮ ಶಸ್ತ್ರಾಸ್ತ್ರವನ್ನು ಸಿದ್ಧಪಡಿಸಿ, ನಿಮ್ಮ ಯೋಜನೆಯನ್ನು ರೂಪಿಸಿ ಮತ್ತು ನಂತರ ನಮ್ಮವರನ್ನು ಆಕರ್ಷಿಸಿ” ಎಂಬ ಸಂದೇಶ ಹಾಕಿದ್ದಾರೆ. ವಿಶೇಷವಾಗಿ ಟಿ 20 ವಿಶ್ವಕಪ್ನಂತ ಪ್ರಮುಖ ಕ್ರೀಡಾಕೂಟಗಳನ್ನು ಗುರಿಯಾಗಿಸುವ ಬಗ್ಗೆ ಈ ಸಂದೇಶದಲ್ಲಿ ತಿಳಿಸಲಾಗಿದೆ.
ಅಂತರ್ಜಾಲದಲ್ಲಿ ಪ್ರಸಾರವಾದ ಗ್ರಾಫಿಕ್ ಪೋಸ್ಟರ್ ಅನ್ನು ಬಳಸಿಕೊಂಡು, ಭಯೋತ್ಪಾದಕ ಸಂಘಟನೆಯು ರೈಫಲ್ ಹಿಡಿದಿರುವ ವ್ಯಕ್ತಿಯನ್ನು ಚಿತ್ರಿಸುವ ಮೂಲಕ ತೀವ್ರ ಬೆದರಿಕೆಯನ್ನು ರವಾನಿಸಿದೆ. ನೀವು ಪಂದ್ಯಗಳಿಗಾಗಿ ಕಾಯಿರಿ…. ಮತ್ತು ನಾವು ನಿಮಗಾಗಿ ಕಾಯುತ್ತೇವೆ……” ಹೆಚ್ಚುವರಿಯಾಗಿ, ಪೋಸ್ಟ್ನಲ್ಲಿ ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಮತ್ತು ಜೂನ್ 9 ರ ನಡೆಯಲಿರುವ ಭಾರತ- ಪಾಕ್ ಪಂದ್ಯವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಟಿಕೆಟ್ ಮಾರಾಟ ಮತ್ತು ಪ್ರಸಾರ ಅಂಕಿಅಂಶಗಳ ದೃಷ್ಟಿಯಿಂದ ಹೆಚ್ಚು ಪ್ರಚಾರವನ್ನು ಪಡೆದ ಪಂದ್ಯ ಇದಾಗಿದೆ.
ಚಿತ್ರದಲ್ಲಿ ಕ್ರೀಡಾಂಗಣದ ಚಿತ್ರಣದ ಮೇಲೆ ವೈಮಾನಿಕ ಡ್ರೊನ್ಗಳನ್ನು ಸುತ್ತಿಸಲಾಗಿದೆ. ಇದರೊಂದಿಗೆ ಡೈನಮೈಟ್ ಕಡ್ಡಿ ಮತ್ತು ಟಿಕ್ಕಿಂಗ್ ಗಡಿಯಾರವಿದೆ. ಮ್ಯಾನ್ಹಟ್ನ ಹೊರಗೆ ಇತ್ತೀಚೆಗೆ ನಿರ್ಮಿಸಲಾದ ಸ್ಥಳದಲ್ಲಿ ಇಂಡೋ-ಪಾಕ್ ಪಂದ್ಯಕ್ಕೆ ಗರಿಷ್ಠ 34,000 ಅಭಿಮಾನಿಗಳು ಹಾಜರಾಗುವ ನಿರೀಕ್ಷೆಯಿದೆ. ಐಸೆನ್ಹೋವರ್ ಪಾರ್ಕ್ನ ತಾತ್ಕಾಲಿಕ ಕ್ರೀಡಾಂಗಣದಲ್ಲಿ ನಡೆಯಲಿರುವ ಎಂಟು ಪಂದ್ಯಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಒಂದಾಗಿದೆ.