Site icon Vistara News

T20 World Cup : ಕ್ರಿಕೆಟ್​ ಕೂಸು ಅಮೆರಿಕ ತಂಡದ ವಿರುದ್ಧ ಸೋತ ಪಾಕಿಸ್ತಾನ

T 20 Wordl Cup

ಡಲ್ಲಾಸ್​: ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಟಿ20 ವಿಶ್ವ ಕಪ್​ನ (T20 World Cup) ತನ್ನ ಮೊದಲ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ್ದು, ಕ್ರಿಕೆಟ್​ ಕ್ಷೇತ್ರದಲ್ಲಿ ಕಣ್ಣರಳಿಸುತ್ತಿರುವ ಅಮೆರಿಕ ವಿರುದ್ಧವೇ ಸೋತಿದೆ. ಎ ಗುಂಪಿನ ಈ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿನ ಪಂದ್ಯ ಟೈ ಆದ ಕಾರಣ ಸೂಪರ್​ ಓವರ್​ ಮೊರೆ ಹೋಗಲಾಯಿತು. ಅಂತಿಮವಾಗಿ ಪಾಕಿಸ್ತಾನವನ್ನು ಕಟ್ಟಿ ಹಾಕಿದ ಅಮೆರಿಕದ ತಂಡ ಜಯದ ಕೇಕೆ ಹಾಕಿತು. ಇದು ಅಮೆರಿಕ ತಂಡಕ್ಕೆ ಹಾಲಿ ವಿಶ್ವ ಕಪ್​ನಲ್ಲಿ ಸತತ ಎರಡನೇ ವಿಜಯವಾಗಿದ್ದು ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಡಲ್ಲಾಸ್​ನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ಟಾಸ್​ ಗೆದ್ದ ಅಮೆರಿಕ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಬ್ಯಾಟಿಂಗ್ ವೈಫಲ್ಯ ಎದುರಿಸಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 159 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಅಮೆರಿಕದ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 3 ವಿಕೆಟ್​ ನಷ್ಟಕ್ಕೆ 159 ರನ್​ ಬಾರಿಸಿತು. ಕೊನೇ ಓವರ್​ನಲ್ಲಿ ಅಮೆರಿಕಕ್ಕೆ 15 ರನ್​ ಗೆಲುವಿಗೆ ಬೇಕಾಗಿತ್ತು. ಆದರೆ, 14 ರನ್ ಬಾರಿಸಿದ ಕಾರಣ ಸೂಪರ್​ ಓವರ್​ ಅನಿವಾರ್ಯವಾಯಿತು.

ಅನುಭವಿ ಬೌಲರ್​ ಮೊಹಮ್ಮದ್ ಅಮೀರ್​ ದಾಳಿಯನ್ನು ಎದುರಿಸಿದ ಅಮೆರಿಕ ತಂಡ ಒಂದು ಓವರ್​ನಲ್ಲಿ 19 ರನ್ ಬಾರಿಸಿತು. ಇದನ್ನು ಬೆನ್ನಟ್ಟಲು ಹೊರಟ ಪಾಕಿಸ್ತಾನ 1 ವಿಕೆಟ್ ನಷ್ಟ ಮಾಡಿಕೊಂಡು ಕೇವಲ 13 ರನ್ ಬಾರಿಸಿ ಐದು ರನ್​ಗಳ ಪರಾಜಯಕ್ಕೆ ಗುರಿಯಾಯಿತು.

ಪಾಕಿಸ್ತಾ ತಂಡಕ್ಕೆ ಇದು ಹಾಲಿ ವಿಶ್ವ ಕಪ್​ನಲ್ಲಿ ಮೊದಲ ಪಂದ್ಯವಾಗಿತ್ತು. ಅದರಲ್ಲೇ ಸೋಲುವ ಮೂಲಕ ಹೀನಾಯ ಅರಂಭ ಮಾಡಿತು. ಅದೂ ಅಮೆರಿಕದ ವಿರುದ್ಧ ಸೋಲುವ ಮೂಲಕ ಇದ್ದ ಮರ್ಯಾದೆಯನ್ನೂ ಕಳೆದುಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪವರ್ ಪ್ಲೇನಲ್ಲಿ 30 ರನ್ ಗಳಿಸಿ ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್ ಮತ್ತು ಉಸ್ಮಾನ್ ಖಾನ್ ಅವರ ವಿಕೆಟ್ ಗಳನ್ನು ಕಳೆದುಕೊಂಡಿತು. ಮತ್ತೊಂದೆಡೆ ನಾಯಕ ಬಾಬರ್ ಅಝಾಮ್ ಒತ್ತಡದಲ್ಲಿ ಉತ್ತಮ ಆರಂಭ ನೀಡಿದರು. ಬಾಬರ್ ಮತ್ತು ಶದಾಬ್ ಖಾನ್ ನಾಲ್ಕನೇ ವಿಕೆಟ್​ಗೆ 8 ಓವರ್​ಗಳಲ್ಲಿ 72 ರನ್​ಗಳ ಜೊತೆಯಾಟ ನೀಡಿದರು.

ಇದನ್ನೂ ಓದಿ:Sunil Chhetri : ಕಣ್ಣೀರು ಹಾಕುತ್ತಲೇ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿ ವಿದಾಯ ಹೇಳಿದ ಸುನಿಲ್​ ಛೆಟ್ರಿ

ಶದಾಬ್ 25 ಎಸೆತಗಳಲ್ಲಿ 4 ಮತ್ತು 3 ಸಿಕ್ಸರ್​ಗಳೊಂದಿಗೆ 40 ರನ್ ಗಳಿಸಿದರು. ಬಾಬರ್ 23 ಎಸೆತಗಳಲ್ಲಿ 44 ರನ್ ಸಿಡಿಸಿ ಔಟಾದರು. ನಂತರ ಫಾರ್ಮ್​ನಲ್ಲಿ ಇಲ್ಲದ ಅಜಂ ಖಾನ್ ಗೋಲ್ಡನ್ ಡಕ್ಗೆ ಕಳುಹಿಸಿದರು.

ಅಮೆರಿಕ ಪರ ಮಿಂಚಿದ ಮೊನಾಂಕ್​

ಗುರಿ ಬೆನ್ನಟ್ಟಿದ ಅಮೆರಿಕ ಪರ 38 ಎಸೆತಗಳಲ್ಲಿ 50 ರನ್ ಗಳಿಸಿದ ಮೊನಾಂಕ್ ಮಿಂಚಿದರು. ಕೊನೆಯ ಓವರ್​ನಲ್ಲಿ 12 ರನ್​ಗಳ ಅಗತ್ಯವಿದ್ದಾಗ ಮಿಂಚಿದ ಜೋನ್ಸ್ 11 ರನ್ ಗಳಿಸಿದರು. ಅವರು 26 ಎಸೆತಗಳಲ್ಲಿ 36 ರನ್ ಗಳಿಸಿ ಔಟಾಗದೆ ಉಳಿದರು.

Exit mobile version