ದುಬೈ: ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್(T20 World Cup 2024) ವೇಳಾಪಟ್ಟಿಯನ್ನು(t20 world cup 2024 schedule) ಐಸಿಸಿ (ICC) ಶುಕ್ರವಾರ ಬಿಡುಗಡೆ ಮಾಡಿದೆ. ಟೂರ್ನಿಯ ಪಂದ್ಯವಾಗಳಿಗಳು ಜೂನ್ 1ರಿಂದ ಜೂನ್ 29ರ ತನಕ ನಡೆಯಲಿದೆ. ಚುಟುಕು ಕ್ರಿಕೆಟ್ನ ಮಹಾ ಕದನದ ಮಹತ್ವದ ಪಂದ್ಯಗಳ ವೇಳಾಪಟ್ಟಿ ಇಂತಿದೆ.
ಭಾರತದ ಪಂದ್ಯಗಳು
ದಿನಾಂಕ | ಎದುರಾಳಿ | ಸ್ಥಳ |
ಜೂನ್ 5 | ಐರ್ಲೆಂಡ್ | ನ್ಯೂಯಾರ್ಕ್ |
ಜೂನ್ 9 | ಪಾಕಿಸ್ತಾನ | ನ್ಯೂಯಾರ್ಕ್ |
ಜೂನ್ 12 | ಅಮೆರಿಕ | ನ್ಯೂಯಾರ್ಕ್ |
ಜೂನ್ 15 | ಕೆನಡಾ | ಫ್ಲೋರಿಡಾ |
ಮೊದಲ ಸುತ್ತಿನ ಇತರ ಪಂದ್ಯಗಳು
ದಿನಾಂಕ | ಪಂದ್ಯ | ಸ್ಥಳ |
ಜೂನ್ 3 | ಶ್ರೀಲಂಕಾ-ದಕ್ಷಿಣ ಆಫ್ರಿಕಾ | ನ್ಯೂಯಾರ್ಕ್ |
ಜೂನ್ 7 | ನ್ಯೂಜಿಲ್ಯಾಂಡ್-ಅಫಘಾನಿಸ್ತಾನ | ಗಯಾನ |
ಜೂನ್ 7 | ಶ್ರೀಲಂಕಾ-ಬಾಂಗ್ಲಾದೇಶ | ಡಲ್ಲಾಸ್ |
ಜೂನ್ 8 | ಆಸ್ಟ್ರೇಲಿಯಾ-ಇಂಗ್ಲೆಂಡ್ | ಬಾರ್ಬಡೋಸ್ |
ಜೂನ್ 10 | ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ | ನ್ಯೂಯಾರ್ಕ್ |
ಜೂನ್ 12 | ವೆಸ್ಟ್ ಇಂಡೀಸ್-ನ್ಯೂಜಿಲ್ಯಾಂಡ್ | ನ್ಯೂಯಾರ್ಕ್ |
ಜೂನ್ 15 | ಆಸ್ಟ್ರೇಲಿಯಾ-ಸ್ಕಾಟ್ಲೆಂಡ್ | ಸೇಂಟ್ ಲೂಸಿಯಾ |
ಜೂನ್ 17 | ವೆಸ್ಟ್ ಇಂಡೀಸ್-ಅಫಘಾನಿಸ್ತಾನ | ಸೇಂಟ್ ಲೂಸಿಯಾ |
ಇದನ್ನೂ ಓದಿ ICC t20 World Cup : ಟಿ20 ವಿಶ್ವ ಕಪ್ನಲ್ಲಿ ಭಾರತ ತಂಡದ ವೇಳಾಪಟ್ಟಿ ಈ ರೀತಿ ಇದೆ
ನಾಕೌಟ್ ಪಂದ್ಯಗಳ ವೇಳಾಪಟ್ಟಿ
ದಿನಾಂಕ | ಪಂದ್ಯ | ಸ್ಥಳ |
ಜೂನ್ 26 | ಮೊದಲ ಸೆಮಿಫೈನಲ್ | ಗಯಾನ |
ಜೂನ್ 27 | ದ್ವಿತೀಯ ಸೆಮಿಫೈನಲ್ | ಟ್ರಿನಿಡಾಡ್ |
ಜೂನ್ 29 | ಫೈನಲ್ | ಬಾರ್ಬಡೋಸ್ |
ಅಮೆರಿಕದಲ್ಲೇ ಭಾರತದ ಬಹುಪಾಲು ಪಂದ್ಯ
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.
Get ready for the ultimate cricket carnival in the West Indies and the USA 🥁
— ICC (@ICC) January 5, 2024
Unveiling the fixtures for the ICC Men’s T20 World Cup 2024 🗓️ 🤩#T20WorldCup | Details 👇
ಮೀಸಲು ದಿನ
ಟೂರ್ನಿಯ ಲೀಗ್ ಮತ್ತು ಸೂಪರ್ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್ ಫೈನಲ್ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.